Suryakumar Yadav : ಪ್ರಸ್ತುತ, ಕ್ರಿಕೆಟ್ ಅಭಿಮಾನಿಗಳ ಗಮನವು ಚಾಂಪಿಯನ್ಸ್ ಟ್ರೋಫಿ 2025ರ ಮೇಲಿದೆ. ಈ ಟೂರ್ನಿ ನಡೆಯುತ್ತದೆಯೇ? ಒಂದು ವೇಳೆ ನಡೆದರೆ ಎಲ್ಲಿ ನಡೆಯುತ್ತದೆ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಸದ್ಯ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಅದಕ್ಕೆ ಕಾರಣ ಭಾರತ ಮತ್ತು ಪಾಕಿಸ್ತಾನ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ.
2025ರ ಆರಂಭದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಂಡಿದ್ದು, ಪಂದ್ಯಾವಳಿಯ ಸಿದ್ಧತೆಗಳಲ್ಲಿ ತೊಡಗಿಕೊಂಡಿದೆ. ಇದರ ನಡುವೆಯೇ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗೆ ತಿಳಿಸಿದೆ. ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.
ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಐಸಿಸಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅನ್ನು ಕೇಳಿದೆ. ಯುಎಇಯಲ್ಲಿ ಭಾರತ ಆಡುವ ಪಂದ್ಯಗಳನ್ನು ಹೈಬ್ರಿಡ್ ವ್ಯವಸ್ಥೆಯಡಿ ಆಯೋಜಿಸುವಂತೆ ಐಸಿಸಿ, ಪಿಸಿಬಿಗೆ ಸಲಹೆ ನೀಡಿದೆ. ಅಲ್ಲದೆ, ಹೈಬ್ರಿಡ್ ಮಾದರಿಯಲ್ಲಿ ನಡೆದರೂ ಹೋಸ್ಟಿಂಗ್ ಶುಲ್ಕವನ್ನು ಪೂರ್ಣವಾಗಿ ಪಾವತಿಸುವುದಾಗಿ ಐಸಿಸಿ, ಪಿಸಿಬಿಗೆ ತಿಳಿಸಿದೆ. ಆದರೆ, ಪಾಕಿಸ್ತಾನ ಇದಕ್ಕೆ ನಿರಾಕರಿಸುತ್ತಿದೆ ಎಂದು ವರದಿಯಾಗಿದೆ. ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದೇ ಇದ್ದರೆ ಟೂರ್ನಿಯಿಂದಲೇ ಹಿಂದೆ ಸರಿಯಲು ಪಾಕ್ ನಿರ್ಧರಿಸಿದೆ ಎನ್ನಲಾಗಿದೆ. ಒಂದು ವೇಳೆ ಪಾಕ್ನಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯದಿದ್ದರೆ, ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ; ಕ್ರಿಕೆಟ್ ರಾಜಕೀಯದ ಮೂಲಕ ಭಾರತದಿಂದ ತಪರಾಕಿ
ತಾಜಾ ಸಂಗತಿ ಏನೆಂದರೆ, ಸದ್ಯ ಟಿ20 ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಚಾಂಪಿಯನ್ಸ್ ಟ್ರೋಫಿ ಕುರಿತು ಪ್ರಶ್ನೆಯೊಂದು ಎದುರಾಯಿತು. ಈ ವೇಳೆ ಅವರು ಕೊಟ್ಟ ಉತ್ತರ ವೈರಲ್ ಆಗಿದೆ. ಅಷ್ಟಕ್ಕೂ ಸೂರ್ಯ ಉತ್ತರ ಏನಿತ್ತು ಎಂಬುದನ್ನು ನಾವೀಗ ತಿಳಿಯೋಣ.
ಸೂರ್ಯ ಅವರು ಇತ್ತೀಚೆಗಷ್ಟೇ ಭಾರತೀಯ ಆಟಗಾರರೊಂದಿಗೆ ಹೊರಗೆ ಹೋಗಿದ್ದರು. ಈ ವೇಳೆ ಪಾಕಿಸ್ತಾನದ ಅಭಿಮಾನಿಯೊಬ್ಬರು ಸೂರ್ಯ ಅವರನ್ನು ಭೇಟಿಯಾದರು. ನೀವು ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ನಯವಾಗಿಯೇ ಉತ್ತರಿಸಿದ ಸೂರ್ಯ, ‘ಅಣ್ಣಾ… ಈ ವಿಷಯ ಆಟಗಾರರ ಕೈಯಲ್ಲಿಲ್ಲ’ ಎಂದರು. ಬಳಿಕ ಅಭಿಮಾನಿ ಅಲ್ಲಿಂದ ಹೊರಟು ಹೋದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Pakistan Fans asking India’s T20I Captain @surya_14kumar – Why won’t he come to Pakistan ?
Answer–He won’t be selected.
How will he go to Pakistan ?#ChampionsTrophy2025 pic.twitter.com/BgPlCcbROy— alekhaNikun (@nikun28) November 11, 2024
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಾಲ್ಕು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈವರೆಗೆ ಎರಡು ಪಂದ್ಯಗಳು ನಡೆದಿದ್ದು, ತಲಾ ಒಂದು ಪಂದ್ಯವನ್ನು ಗೆದ್ದಿವೆ. ಮೂರನೇ ಪಂದ್ಯ ಇಂದು (ನ.13) ಸೆಂಚೂರಿಯನ್‌ನಲ್ಲಿ ನಡೆಯಲಿದೆ. (ಏಜೆನ್ಸೀಸ್)
ಕೊನೇ ಕ್ಷಣದಲ್ಲಿ ಕಂಗುವಾ ಚಿತ್ರತಂಡಕ್ಕೆ ಶಾಕ್! ಬಿಡುಗಡೆ ಮಾಡದಂತೆ ಕೋರ್ಟ್ ಆದೇಶ, ಕಾರಣ ಹೀಗಿದೆ… Kanguva
ನೂರಕ್ಕೆ ನೂರರಷ್ಟು ಹಾವಿನ ವಿಷ ತೆಗೆದುಹಾಕುತ್ತೆ ಈ ಗಿಡ! ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Snake venom