Balochistan: ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರದಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನ, ಆರ್ಥಿಕವಾಗಿ ಕುಗ್ಗಿದ್ದಲ್ಲದೇ ಬಲಹೀನರಾಗಿ ತಲೆ ತಗ್ಗಿಸಿ ನಿಂತಿದೆ. ಪ್ರಸ್ತುತ ಭಾರತ ಕೊಟ್ಟಿರುವ ಹಲವು ಅಘಾತಗಳ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಅದೇ ಬಲೂಚಿಸ್ತಾನ್ ಪ್ರತೀಕಾರ.

ಇದನ್ನೂ ಓದಿ: ಇವರೇ ನೋಡಿ ಬಾಕಿ ಪಂದ್ಯಗಳಿಗೆ ಮಿಸ್ ಆಗುವ ವಿದೇಶಿ ಆಟಗಾರರು…ಆರ್ಸಿಬಿಗೂ ಬಿಗ್ ಶಾಕ್! IPL 2025
ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯ (ವಿಸ್ತೀರ್ಣದ ದೃಷ್ಟಿಯಲ್ಲಿ) ಬಲೂಚಿಸ್ತಾನ್ ಪಾಕಿಸ್ತಾನ ಸರ್ಕಾರಕ್ಕೆ ಭಯಾನಕ ಶಾಕ್ ಕೊಟ್ಟಿದೆ. ಇನ್ಮುಂದೆ ತಾವು ಪಾಕಿಸ್ತಾನಿಗಳಲ್ಲ. ನಾವು ಸ್ವತಂತ್ರರು. ಬಲೂಚಿಸ್ತಾನ್ ಈಗ ಸ್ವತಂತ್ರ ದೇಶ ಎಂದು ಅಲ್ಲಿನ ನಾಯಕರು ಅಧಿಕೃತ ಘೋಷಣೆಯನ್ನು ಹೊರಡಿಸಿದ್ದಾರೆ. ನಾವು ಪಾಕಿಸ್ತಾನದಿಂದ ಬೇರ್ಪಟ್ಟಿದ್ದೇವೆ ಎಂದೂ ಘೋಷಿಸಿದ್ದಾರೆ.
ಬಲೂಚಿಸ್ತಾನ್ ಈಗ ಸ್ವತಂತ್ರ ದೇಶವಾಗಿದ್ದು, ಅವರನ್ನು ಇನ್ನು ಮುಂದೆ ಪಾಕಿಸ್ತಾನಿಗಳೆಂದು ಗುರುತಿಸುವಂತಿಲ್ಲ. ಬದಲಿಗೆ ಬಲೂಚಿಸ್ತಾನ್ ನಾಗರಿಕರೆಂದು ಗುರುತಿಸಬೇಕು ಎಂದು ಬಲೂಚಿಸ್ತಾನ್ ಚಳವಳಿಯ ನಾಯಕ ಮೀರ್ ಯಾರ್ ಬಲೂಚ್ ಬುಧವಾರ (ಮೇ.14) ಘೋಷಿಸಿದರು. ಬಲೂಚಿಸ್ತಾನ್ ಈಗ ಸ್ವತಂತ್ರ ದೇಶವೆಂದು ಗುರುತಿಸುವಂತೆ ಅವರು ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳಿಗೂ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಮತ್ತೆ ಪ್ರೀತಿಯಲ್ಲಿ ಬಿದ್ದ ಸಮಂತಾ: ಡೇಟಿಂಗ್ ವದಂತಿಗೆ ಪುಷ್ಟಿ ನೀಡಿದ ಸ್ಯಾಮ್ ಹಂಚಿಕೊಂಡ ಫೋಟೋ! Samantha
“ಪಾಕಿಸ್ತಾನ ಬಲೂಚಿಸ್ತಾನ್ ಜನರ ವಿರುದ್ಧ ದಶಕಗಳಿಂದ ದಬ್ಬಾಳಿಕೆ ಮತ್ತು ನರಮೇಧವನ್ನು ಮಾಡಿದೆ. ದಶಕಗಳ ಹಿಂಸಾಚಾರ, ಭದ್ರತಾ ಪಡೆಗಳ ಅಪಹರಣ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಿಂದ ನಮ್ಮನ್ನು ಮುಕ್ತರನ್ನಾಗಿ ಮಾಡಿಕೊಳ್ಳಲು ಈಗ ಪಾಕ್ನಿಂದ ಸ್ವಾತಂತ್ರ್ಯ ಘೋಷಿಸುತ್ತಿದ್ದೇವೆ” ಎಂದು ಮೀರ್ ಟ್ವೀಟ್ ಮಾಡಿದ್ದಾರೆ. ಬಲೂಚಿಸ್ತಾನದಲ್ಲಿರುವ ಎಲ್ಲಾ ಪಾಕಿಸ್ತಾನಿ ಪಡೆಗಳು ಮತ್ತು ಸರ್ಕಾರಿ ಸಿಬ್ಬಂದಿಗಳು ತಕ್ಷಣವೇ ಸ್ಥಳಾಂತರಗೊಳ್ಳುವ ಮೂಲಕ ಇಲ್ಲಿಂದ ಜಾಗ ಖಾಲಿ ಮಾಡಬೇಕು ಎಂಬ ಎಚ್ಚರಿಕೆಯನ್ನೂ ರವಾನಿಸಲಾಗಿದೆ.
ಬಲೂಚಿಸ್ತಾನವನ್ನು ಪ್ರತ್ಯೇಕ ದೇಶವೆಂದು ಗುರುತಿಸಬೇಕು ಎಂದು ಮಿರ್ ಯಾರ್ ಒತ್ತಾಯಿಸಿದ ಬೆನ್ನಲ್ಲೇ ಪಾಕಿಸ್ತಾನದ ಹಿಂದೂ ಮಹಿಳೆ ಕಾಶಿಶ್ ಚೌಧರಿಯನ್ನು (25), ಇದೀಗ ದೇಶದ ಸಹಾಯಕ ಆಯುಕ್ತರಾಗಿ ನೇಮಕ ಮಾಡಿಕೊಳ್ಳಲಾಗಿದೆ. ಬಲೂಚಿಸ್ತಾನದ ಅಲ್ಪಸಂಖ್ಯಾತ ಸಮುದಾಯದಿಂದ ಆಯ್ಕೆಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕೌಶಿಶ್ ಪಾತ್ರರಾಗಿದ್ದಾರೆ. ಪ್ರಾಂತ್ಯದ ಚಾಗೈ ಜಿಲ್ಲೆಯ ನೋಶ್ಕಿ ಪಟ್ಟಣದ ಕಾಶಿಶ್, ಬಲೂಚಿಸ್ತಾನ್ ಸಾರ್ವಜನಿಕ ಸೇವಾ ಆಯೋಗ (ಬಿಪಿಎಸ್‌ಸಿ) ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿದ್ದಾರೆ.
وزیر اعلیٰ بلوچستان سے کم عمر اقلیتی افسر اسسٹنٹ کمشنر کشش چوہدری کی ملاقات، کشش چوہدری نے اپنی محنت، لگن اور استقامت سے نہ صرف اپنی صلاحیتوں کا لوہا منوایا بلکہ اقلیتی برادری کے دیگر نوجوانوں کے لیے بھی مشعلِ راہ بن گئی ہیں، میر سرفراز بگٹی@PakSarfrazbugti pic.twitter.com/JaQaomXzhT
— Chief Minister’s Office Balochistan (@CMOBalochistan) May 12, 2025
ಶಿಸ್ತು, ಕಠಿಣ ಪರಿಶ್ರಮ
ಚಾಗೈ ಜಿಲ್ಲೆಯ ನೋಶ್ಕಿ ಪಟ್ಟಣದ ಮೂಲದ ಚೌಧರಿ, ಈ ಸಾಧನೆ ಮಾಡುವ ಮೂಲಕ ಇತಿಹಾಸಕ್ಕೆ ಸಾಕ್ಷಿಯಾಗಿದ್ದಾರೆ. ಬಲೂಚಿಸ್ತಾನ್ ಸಾರ್ವಜನಿಕ ಸೇವಾ ಆಯೋಗ (ಬಿಪಿಎಸ್‌ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾದ ಅವರು, ವೈಯಕ್ತಿಕ ಮೈಲಿಗಲ್ಲು ಮತ್ತು ದೇಶದ ಅಲ್ಪಸಂಖ್ಯಾತ ಸಮುದಾಯಗಳಿಗೆ ಹೊಸ ಭರವಸೆ ಹಾಗೂ ಉತ್ಸಾಹ ನೀಡಿದ್ದಾರೆ. SAMAA ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, “ಮೂರು ವರ್ಷಗಳ ನಿರಂತರ ಅಧ್ಯಯನ, ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ಸಿದ್ಧತೆಗಾಗಿ ಮೀಸಲಿಟ್ಟಿದ್ದು, ಈ ಯಶಸ್ಸನ್ನು ಸಾಧಿಸಲು ಮುಖ್ಯ ಕಾರಣ” ಎಂದರು.
“ಶಿಸ್ತು, ಕಠಿಣ ಪರಿಶ್ರಮ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಬಯಕೆ ಈ ಪ್ರಯಾಣದುದ್ದಕ್ಕೂ ನನ್ನನ್ನು ಮುನ್ನಡೆಸಿದೆ ಎಂದು ಹೇಳಿದರು. ಕಾಶಿಶ್ ಚೌಧರಿ ಅವರ ತಂದೆ ಗಿರ್ಧಾರಿ ಲಾಲ್ ಅವರು ತಮ್ಮ ಮಗಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ನಾನು ಮಧ್ಯಮ ಮಟ್ಟದ ವ್ಯಾಪಾರಿ. ಮಗಳು ತನ್ನ ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಸಹಾಯಕ ಆಯುಕ್ತಳಾಗಿರುವುದು ನನಗೆ ತುಂಬಾ ಹೆಮ್ಮೆಯ ವಿಷಯ” ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಇದು ಆರ್ಸಿಬಿ ಅಭಿಮಾನಿಗಳು ಖುಷಿ ಪಡುವ ಸುದ್ದಿ… ಆತ ಮರಳಿ ಬಂದಿದ್ದಾನೆ ಮತ್ತೆ ಘರ್ಜಿಸಲು! RCB
ಸೋಮವಾರ (ಮೇ.12) ಕಾಶಿಶ್ ತಮ್ಮ ತಂದೆ ಗಿರ್ಧಾರಿ ಲಾಲ್ ಅವರೊಂದಿಗೆ ಕ್ವೆಟ್ಟಾದಲ್ಲಿ ಬಲೂಚಿಸ್ತಾನ್ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿರನ್ನು ಭೇಟಿಯಾಗಿ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಸಬಲೀಕರಣ ಮತ್ತು ಪ್ರಾಂತ್ಯದ ಒಟ್ಟಾರೆ ಅಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ,(ಏಜೆನ್ಸೀಸ್).