ಇವರೇ ನೋಡಿ ಬಾಕಿ ಪಂದ್ಯಗಳಿಗೆ ಮಿಸ್​ ಆಗುವ ವಿದೇಶಿ ಆಟಗಾರರು...ಆರ್​ಸಿಬಿಗೂ ಬಿಗ್​ ಶಾಕ್​! IPL 2025

IPL 2025
Published on

IPL 2025: ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ​ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್​ ಸಿಂಧೂರ ಕಾರ್ಯಾಚರಣೆ ನಡೆಸಿದ್ದು ಎಲ್ಲರಿಗೂ ಗೊತ್ತೇ ಇದೆ. ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡಲಾಯಿತು. ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಉಂಟಾಗಿ, ಕ್ಷಿಪಣಿಗಳ ದಾಳಿ ನಡೆಯಿತು. ಇದರಿಂದ ಯುದ್ಧದ ಭೀತಿ ಆವರಿಸಿತ್ತು. ಆದರೆ, ಇದೀಗ ಉಭಯ ದೇಶಗಳು ಕದನ ವಿರಾಮ ಘೋಷಿಸಿವೆ.

ಭಾರತ ಮತ್ತು ಪಾಕ್​ ನಡುವಿನ ಉದ್ವಿಗ್ನತೆಯಿಂದಾಗಿ ಒಂದು ವಾರದ ಕಾಲ 18ನೇ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆವೃತ್ತಿಯನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಇದೀಗ ಮೇ 17 ರಿಂದ ಪುನಾರಂಭಗೊಳ್ಳಲಿದ್ದು, ಜೂನ್ 3ಕ್ಕೆ ಮುಕ್ತಾಯಗೊಳ್ಳಲಿದೆ. ಅಂದುಕೊಂಡಂತೆ ನಡೆದಿದ್ದಿದ್ದರೆ, ಕೆಲವೇ ದಿನಗಳಲ್ಲಿ ಐಪಿಎಲ್​ ಮುಗಿಯುತ್ತಿತ್ತು. ಆದರೆ, ಅನಿರೀಕ್ಷಿತ ಘಟನೆಯಿಂದಾಗಿ ಕೆಲ ಕಾಲ ರದ್ದು ಮಾಡಬೇಕಾಯಿತು. ಈ ಸಮಯದಲ್ಲಿ ಅನೇಕ ವಿದೇಶಿ ಆಟಗಾರರು ತಮ್ಮ ದೇಶಗಳಿಗೆ ತೆರಳಿದರು. ಅವರಲ್ಲಿ ಐಪಿಎಲ್​ ಆಡಲು ಮರಳಿರುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ.

ವಿಶೇಷವಾಗಿ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮುಂದಿನ ತಿಂಗಳು 11 ರಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಆಡಲಿವೆ. ಇನ್ನೊಂದೆಡೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಅಂತಾರಾಷ್ಟ್ರೀಯ ಸರಣಿಗಳನ್ನು ಹೊಂದಿವೆ. ಇದರೊಂದಿಗೆ, ಆ ದೇಶಗಳ ಅನೇಕ ಆಟಗಾರರು ಪುನಾರಂಭಗೊಳ್ಳುವ IPL ಗೆ ಲಭ್ಯವಿರುವುದಿಲ್ಲ. ಯಾವೆಲ್ಲ ಆಟಗಾರರು ಲಭ್ಯವಿರುವುದಿಲ್ಲ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಈ ಐಪಿಎಲ್‌ ಅನ್ನು ತಪ್ಪಿಸಿಕೊಳ್ಳಲಿರುವ ವಿದೇಶಿ ಆಟಗಾರರು

* ಗುಜರಾತ್ ಟೈಟಾನ್ಸ್​: ಕಾಗಿಸೋ ರಬಾಡಾ, ಶೆಫಾನಿ ರುದರ್‌ಫೋರ್ಡ್, ಕೋಟ್ಜಿ

* ಡೆಲ್ಲಿ ಕ್ಯಾಪಿಟಲ್ಸ್​: ಮಿಚೆಲ್ ಸ್ಟಾರ್ಕ್, ಜೇಕ್ ಫ್ರೇಸರ್, ಟ್ರಿಸ್ಟಾನ್ ಸ್ಲಬ್ಸ್

* ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ಜೋಶ್ ಹ್ಯಾಜಲ್‌ವುಡ್, ಜಾಕೋಬ್ ಬೆಥೆಲ್, ಲುಂಗಿ ಎನ್‌ಗಿಡಿ

* ಲಖನೌ ಸೂಪರ್​ಜೈಂಟ್ಸ್​: ಐಡೆನ್ ಮಾರ್ಕ್ರಾಮ್

* ಪಂಜಾಬ್ ಕಿಂಗ್ಸ್​: ಮಾರ್ಕೊ ಜಾನ್ಸೆನ್

* ಮುಂಬೈ ಇಂಡಿಯನ್ಸ್​: ರಯಾನ್​ ರಿಕಿಟನ್.

* ಚೆನ್ನೈ ಸೂಪರ್​ ಕಿಂಗ್ಸ್​: ಸ್ಯಾಮ್ ಕರ್ರಾನ್.

* ರಾಜಸ್ಥಾನ ರಾಯಲ್ಸ್​: ಜೋಫ್ರಾ ಆರ್ಚರ್

ಈ ಆಟಗಾರರು ಕೂಡ ಅನುಮಾನಾಸ್ಪದರು... (ಅಂತಿಮ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯೂ ಇದೆ)

* ಪಂಜಾಬ್ ಕಿಂಗ್ಸ್​: ಮಾರ್ಕಸ್​ ಸ್ಟೊಯಿನಿಸ್, ಜೋಶ್​ ಇಂಗ್ಲಿಸ್, ಆರನ್ ಹಾರ್ಡಿ

* ಗುಜರಾತ್ ಟೈಟಾನ್ಸ್​: ಜೋಸ್ ಬಟ್ಲರ್

* ಮುಂಬೈ ಇಂಡಿಯನ್ಸ್​: ವಿಲ್ ಜ್ಯಾಕ್ಸ್, ಕಾರ್ಬಿನ್ ಬಾಷ್.

* ಸನ್‌ರೈಸರ್ಸ್ ಹೈದರಾಬಾದ್​: ಎಶಾನ್ ಮಾಲಿಂಗ, ಕಾಮಿಂದು, ಮುಲ್ಡರ್.

* ಚೆನ್ನೈ ಸೂಪರ್​ ಕಿಂಗ್ಸ್​: ರಾಚಿನ್ ರವೀಂದ್ರ,

* ಕೋಲ್ಕತ್ತಾ ನೈಟ್​ ರೈಡರ್ಸ್​: ಮೊಯಿನ್ ಅಲಿ, ಸ್ಪೆನ್ಸರ್ ಜಾನ್ಸನ್

ಐಪಿಎಲ್‌ನಲ್ಲಿ ಮುಂದುವರಿಯು ವಿದೇಶಿ ಆಟಗಾರರು

* ಪಂಜಾಬ್ ಕಿಂಗ್ಸ್ : ಬಾರ್ಟ್ಲೆಟ್, ಅಜ್ಮತುಲ್ಲಾ, ಮಿಚೆಲ್ ಓವನ್

* ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ಲಿಯಾಮ್​ ಲಿವಿಂಗ್​ಸ್ಟೋನ್​, ಫಿಲ್​ ಸಾಲ್ಟ್, ರೊಮಾರಿಯೊ ಶೆಫರ್ಡ್

* ಮುಂಬೈ ಇಂಡಿಯನ್ಸ್​: ಟ್ರೆಂಟ್​ ಬೌಲ್ಟ್, ಮುಜೀಬ್ ರೆಹಮಾನ್

* ಸನ್​ ರೈಸರ್ಸ್​ ಹೈದರಾಬಾದ್: ಪ್ಯಾಟ್​ ಕಮ್ಮಿನ್ಸ್, ಟ್ರಾವಿಸ್​ ಹೆಡ್, ಹೆನ್ಸಿ ಕ್ಲಾಸೆನ್.

* ಕೋಲ್ಕತ್ತ ನೈಟ್​ ರೈಡರ್ಸ್​: ಆ್ಯಂಡ್ರೆ ರಸೆಲ್, ಸುನೀಲ್​ ನಾರಾಯಣ್​, ರೋಮನ್ ಪೊವೆಲ್, ಕ್ವಿಂಟನ್​ ಡಿ ಕಾಕ್, ಗುರ್ಬಾಜ್.

* ಚೆನ್ನೈ ಸೂಪರ್ ಕಿಂಗ್ಸ್: ನೂರ್ ಅಹ್ಮದ್, ಬ್ರೆವಿಸ್, ಪತಿರಾಣಾ, ಡೆವೋನ್​ ಕಾನ್ವೇ

ಗಮನಿಸಿ: ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ ಈ ವಿವರಗಳನ್ನು ಸೇರಿಸಲಾಗಿದೆ. ಪಂದ್ಯಗಳು ಇನ್ನೆರೆಡು ದಿನಗಳಲ್ಲಿ ಪ್ರಾರಂಭವಾಗಲಿದ್ದು, ಈ ವೇಳೆ ಈ ಪಟ್ಟಿಗಳಲ್ಲಿ ಬದಲಾವಣೆಗಳು ಮತ್ತು ಸೇರ್ಪಡೆಗಳಾಗುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net