blank

ಅದೊಂದು ಪೂರ್ಣಗೊಳಿಸಿ ನಿವೃತ್ತಿ ಘೋಷಿಸಬೇಕಿತ್ತು! ರೋಹಿತ್​-ವಿರಾಟ್​ ದಿಢೀರ್ ನಿರ್ಧಾರ ಸರಿಯಲ್ಲ: ಮಾಜಿ ಕ್ರಿಕೆಟಿಗ | Virat & Rohit

blank

Virat & Rohit: ಪ್ರಸ್ತುತ ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ಗೆ ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್​ಗಳಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ದಿಢೀರ್​ ನಿವೃತ್ತಿ ಘೋಷಿಸಿದರು. ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಆವೃತ್ತಿಯಲ್ಲಿ ತಮ್ಮ ಫ್ರಾಂಚೈಸಿಗಳ ಭಾಗವಾಗಿ ಮೈದಾನಕ್ಕಿಳಿದಿರುವ ರೋಹಿತ್ ಮತ್ತು ಕೊಹ್ಲಿ, ಐಪಿಎಲ್ ಪಂದ್ಯಗಳ ಮಧ್ಯೆಯೇ ಟೆಸ್ಟ್​ ಫಾರ್ಮೆಟ್​ಗೆ ಗುಡ್​ಬೈ ಹೇಳಿದರು. ಸದ್ಯ ಇದು ಅಸಂಖ್ಯಾತ ಅಭಿಮಾನಿಗಳಲ್ಲಿ ತೀವ್ರ ಬೇಸರ ತಂದೊಡ್ಡಿದೆ. ಅಂತೆಯೇ ಕ್ರಿಕೆಟ್​ ದಿಗ್ಗಜರು ಹಾಗೂ ಮಾಜಿ ಹಿರಿಯ ಆಟಗಾರರು ಸಹ ಬೇಸರ ಹೊರಹಾಕಿದ್ದಾರೆ.

blank

ಇದನ್ನೂ ಓದಿ: ನೀವು ಮಾಡುವ ಈ ಒಂದು ತಪ್ಪಿನಿಂದ ಶಾರ್ಟ್​ ಸರ್ಕ್ಯೂಟ್​ ಆಗಬಹುದು ಎಚ್ಚರ! ತಪ್ಪಿಸಲು ಏನು ಮಾಡಬೇಕು? Short Circuit

ಐಪಿಎಲ್ ಮುಗಿಯುತ್ತಿದ್ದಂತೆ ಇದೇ ಜೂನ್​ನ ಮೊದಲ ವಾರದಿಂದ ಶುರುವಾಗಲಿರುವ ಐದು ಪಂದ್ಯಗಳ ಇಂಗ್ಲೆಂಡ್​ ಟೆಸ್ಟ್ ಸರಣಿಗೂ ಮುನ್ನವೇ ಕೊಹ್ಲಿ ಮತ್ತು ರೋಹಿತ್ ನಿವೃತ್ತಿ ಘೋಷಿಸಿದರು. ಈ ಕುರಿತು ಬಿಸಿಸಿಐಗೂ ಮಾಹಿತಿ ಹಂಚಿಕೊಂಡರು. ದಿಗ್ಗಜ ಬ್ಯಾಟರ್​ಗಳ ನಿವೃತ್ತಿ ನಿರ್ಧಾರಕ್ಕೂ ಮೊದಲೇ ಅವರನ್ನು ಮುಂಬರುವ ಇಂಗ್ಲೆಂಡ್​ ಟೆಸ್ಟ್​ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದ್ರೆ, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿತ್ತು. ರೋಹಿತ್ ನಾಯಕರಾಗಿ ತಂಡವನ್ನು ಮುನ್ನಡೆಸಿದರೆ, ವಿರಾಟ್ ಮೂರನೇ ಕಣಕ್ಕಿಳಿಯಲಿದ್ದಾರೆ ಎನ್ನುವಂತೆ ಮ್ಯಾನೇಜ್​ಮೆಂಟ್ ಮುಂಚಿತವಾಗಿಯೇ ನಿರ್ಧರಿಸಿತ್ತು. ಆದರೆ, ಅಂತಿಮವಾಗಿ ಬಿಸಿಸಿಐ ಲೆಕ್ಕಾಚಾರಗಳು ಇದೀಗ ತಲೆಕೆಳಗಾಗಿವೆ.

ಕೊಹ್ಲಿ ನಿವೃತ್ತಿ ಬೆನ್ನಲ್ಲೇ ಮಾಜಿ ಹಿರಿಯ ಕ್ರಿಕೆಟಿಗ, ಆಯ್ಕೆಗಾರ ದಿಲೀಪ್ ವೆಂಗ್ಸರ್ಕರ್​ ಪ್ರತಿಕ್ರಿಯಿಸಿ, ವಿರಾಟ್​ ಕೊಹ್ಲಿ ಅವರ ನಿರ್ಧಾರ ಕೇಳಿ ಒಂದು ನಿಮಿಷ ಅಚ್ಚರಿ ಉಂಟಾಯಿತು. ಕಾರಣ, ಜೂನ್​ನಿಂದ ಇಂಗ್ಲೆಂಡ್ ಟೆಸ್ಟ್​ ಸರಣಿ ನಡೆಯಲಿದೆ. ಈ ಮಧ್ಯೆಯೇ ಅವರ ನಿವೃತ್ತಿ ನಿಜಕ್ಕೂ ದೊಡ್ಡ ಶಾಕ್ ನೀಡಿದೆ. ನನ್ನ ಪ್ರಕಾರ, ಇಂಗ್ಲೆಂಡ್ ಸರಣಿ ಆಡಿ ನಂತರ ನಿವೃತ್ತಿ ಘೋಷಿಸಿದರೆ ಚೆನ್ನಾಗಿರುತ್ತಿತ್ತು. ಆದರೆ, ಕೊಹ್ಲಿ ಈ ಕುರಿತು ಆಸಕ್ತಿ ತೋರಿಲ್ಲ. ಏನೇ ಆದರೂ ಅಂತಿಮವಾಗಿ ಅವರದ್ದೇ ನಿರ್ಧಾರ. ರೋಹಿತ್ ಮತ್ತು ವಿರಾಟ್​ ಸ್ಥಾನ ತುಂಬುವುದು ಬಹಳ ಕಷ್ಟ. ದೀರ್ಘ ಕಾಲ ಭಾರತ ಪರ ಆಡಿರುವ ಇವರಿಬ್ಬರ ಕೊಡುಗೆ ಅಪಾರ ಎಂದು ಹೇಳಿದರು,(ಏಜೆನ್ಸೀಸ್).

ಮನೆಯಲ್ಲಿದ್ದ ಆ ಒಂದು ವಸ್ತುಗಾಗಿ ಹೋಯಿತು ಇಬ್ಬರ ಜೀವ! ಕೊಲೆಗೈದ ಆರೋಪಿ ಅರೆಸ್ಟ್​ | Elderly Couple

Share This Article
blank

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

ಆಹಾರ ಸೇವಿಸುವಾಗ ಪದೇಪದೆ ಕೂದಲು ಕಾಣಿಸುತ್ತಿದಿಯೇ?: ಹಾಗಾದ್ರೆ ಸ್ವಲ್ಪ ಜಾಗರೂಕರಾಗಿ.. ಜ್ಯೋತಿಷ್ಯದಲ್ಲಿ ಹೇಳೋದೇನು? | Eating

Eating: ನಿಮ್ಮ ಆಹಾರದಲ್ಲಿ ಕೂದಲು ಮತ್ತೆ ಮತ್ತೆ ಬರುವುದು. ನಿಮ್ಮ ಆಹಾರದಲ್ಲಿ ಕೂದಲು ಉದುರುವ ಘಟನೆ…

blank