ಮೂರು ದಿನಗಳಲ್ಲಿ ಆರು ಕೋಟಿ; ಸೂರಿ, ಅಭಿ ಕಾಂಬಿನೇಷನ್ ಬ್ಯಾಡ್ ಮ್ಯಾನರ್ಸ್‌ ಸಿನಿಮಾಗೆ ಮೆಚ್ಚುಗೆ

bad-manners
Published on

ಬೆಂಗಳೂರು: ದುನಿಯಾ ಸೂರಿ ನಿರ್ದೇಶನದ, ಅಭಿಷೇಕ್ ಅಂಬರೀಷ್ ನಟನೆಯ ‘ಬ್ಯಾಡ್ ಮ್ಯಾನರ್ಸ್‌’ ಸಿನಿಮಾ ಕಳೆದ ಶುಕ್ರವಾರ(ನ.27)ಕ್ಕೆ ರಾಜ್ಯಾದ್ಯಂತ ತೆರೆಕಂಡಿದೆ. ಅಭಿಷೇಕ್ ನಾಲ್ಕು ವರ್ಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಂಡಿದ್ದು, ಎರಡನೇ ಸಿನಿಮಾಗೆ ಎಲ್ಲೆಡೆ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಸೂರಿ ಹಾಗೂ ಅಭಿ ಕಾಂಬಿನೇಷನ್ ಆಗಿದ್ದಕ್ಕೆ ಅಭಿಮಾನಿಗಳಿಗೆ ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಮುಂಗಡ ಬುಕ್ಕಿಂಗ್‌ನಲ್ಲೇ ಸುಮಾರು ಐದು ಕೋಟಿ ರೂ.ಗಳಷ್ಟು ಕಲೆಕ್ಷನ್ ಮಾಡಿತ್ತು. ಸುಮಾರು 300ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದ್ದು, ಮೂರು ದಿನಿಗಳಲ್ಲಿ 6.4 ಕೋಟಿ ರೂ.ಗಳಷ್ಟು ಬಾಚಿಕೊಂಡಿದೆ. ಭಾನುವಾರ ಬಾರತ-ಆಸ್ಟ್ರೇಲಿಯಾ ಟಿ20 ಕ್ರಿಕೆಟ್ ಪಂದ್ಯದ ನಡುವೆಯೂ ಅಭಿಮಾನಿಗಳು ಥಿಯೇಟರ್‌ಗೆ ಹೋಗಿದ್ದು, ಸಿನಿಮಾದಲ್ಲಿ ಸೂರಿ ಶೈಲಿಯ ಮೇಕಿಂಗ್, ಅಭಿ ರಗಡ್ ಲುಕ್, ಚರಣ್‌ರಾಜ್ ಸಂಗೀತ, ಶೇಖರ್ ಛಾಯಾಗ್ರಹಣವನ್ನು ಮೆಚ್ಚಿಕೊಂಡಿದ್ದಾರೆ. .

ಜನರ ಪ್ರೀತಿ ಹಾಗೂ ಈ ಮಟ್ಟದ ಕಲೆಕ್ಷನ್ ನೋಡುತ್ತಿರುವ ಚಿತ್ರತಂಡ ಸದ್ಯದಲ್ಲೇ ಕರ್ನಾಟಕದಾದ್ಯಂತ ಥಿಯೇಟರ್‌ಗಳಿಗೆ ಭೇಟಿ ನೀಡುವ ಯೋಚನೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net