More

  ಪೊಲಿಟಿಕಲ್​ ಕಾಮಿಡಿ ಸುತ್ತ ‘ಪಾಲಿಟಿಕ್ಸ್​ ಕಲ್ಯಾಣ’ ; ಕವಿ ರಾಜೇಶ್​ ಹೊಸ ರಾಜಕೀಯ ವಿಡಂಬನೆ

  ಕನ್ನಡದಲ್ಲಿ ರಾಜಕೀಯದ ಸುತ್ತ ಸುತ್ತುವ ಸಿನಿಮಾಗಳು ಬಂದಿವೆ. ಆದರೆ, ರಾಜಕೀಯ ವಿಡಂಬನೆ ಕುರಿತ ಚಿತ್ರಗಳು ಕಡಿಮೆ. ಇದೀಗ ನಿರ್ದೇಶಕ ಕವಿ ರಾಜೇಶ್, ಅಂತಹ ಕಥೆಯೊಂದನ್ನು ಹೊತ್ತು ತಂದಿದ್ದಾರೆ. ಹೆಸರು ‘ಪಾಲಿಟಿಕ್ಸ್ ಕಲ್ಯಾಣ’. ಇತ್ತೀಚೆಗಷ್ಟೆ ಸಂಗೀತ ನಿರ್ದೇಶಕ ವಿ. ಮನೋಹರ್ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.

  ಇದನ್ನೂ ಓದಿ : VIDEO | ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ; ವೇದಿಕೆ ಮೇಲೆ ಯುವಕರಂತೆ ಕುಣಿದು ಕುಪ್ಪಳಿಸಿದ ಶಿವಣ್ಣ!

  ಪೊಲಿಟಿಕಲ್​ ಕಾಮಿಡಿ ಸುತ್ತ 'ಪಾಲಿಟಿಕ್ಸ್​ ಕಲ್ಯಾಣ' ; ಕವಿ ರಾಜೇಶ್​ ಹೊಸ ರಾಜಕೀಯ ವಿಡಂಬನೆ

  ನಿರ್ದೇಶಕ ಕವಿ ರಾಜೇಶ್, ‘ಕೇವಲ ಐದು ದಿನಗಳಲ್ಲಿ ಒಂದು ಕಲ್ಯಾಣ ಮಂಟಪದಲ್ಲಿ ಚಿತ್ರದ ಶೂಟಿಂಗ್ ಮಾಡಿದೆವು. ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡುವ ಯತ್ನದಲ್ಲಿದ್ದೇವೆ’ ಎಂದರು. ಚಿತ್ರಕ್ಕೆ ಜೆ.ಎಂ. ಪ್ರಹ್ಲಾದ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದಿದ್ದು, ರೋಹನ್ ದೇಸಾಯಿ ಸಂಗೀತ ನಿರ್ದೇಶನ, ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

  ಇದನ್ನೂ ಓದಿ : ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಸಿನಿಮಾ

  ಪೊಲಿಟಿಕಲ್​ ಕಾಮಿಡಿ ಸುತ್ತ 'ಪಾಲಿಟಿಕ್ಸ್​ ಕಲ್ಯಾಣ' ; ಕವಿ ರಾಜೇಶ್​ ಹೊಸ ರಾಜಕೀಯ ವಿಡಂಬನೆ

  ಪಂಕಜ್ ನಾರಾಯಣ್, ವಿ. ಮನೋಹರ್, ಶಂಕರ್ ಅಶ್ವತ್ಥ್, ಮಿಮಿಕ್ರಿ ಗೋಪಿ, ಮೈಸೂರು ರಮಾನಂದ್, ದತ್ತಾತ್ರೇಯ ಕುರುಹಟ್ಟಿ, ಸಸ್ಯ, ವಿಜಯ್ ಭಾಸ್ಕರ್, ಸುನೇತ್ರ ಪಂಡಿತ್, ನಾಗೇಂದ್ರ ಶಾ, ರಜನಿ, ತನುಜಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts