More

    BAD MANNERS Review ; ಚೂರು ವೈಲ್ಡ್, ಪೂರಾ ಮ್ಯಾಡ್!

    | ಹರ್ಷವರ್ಧನ್ ಬ್ಯಾಡನೂರು

    ಚಿತ್ರ : ಬ್ಯಾಡ್ ಮ್ಯಾನರ್ಸ್‌
    ನಿರ್ದೇಶನ : ಸೂರಿ
    ನಿರ್ಮಾಣ : ಸುಧೀರ್
    ತಾರಾಗಣ : ಅಭಿಷೇಕ್ ಅಂಬರೀಷ್, ರಚಿತಾ ರಾಮ್, ತಾರಾ ಅನುರಾಧ, ರೋಚಿತ್, ತ್ರಿವಿಕ್ರಮ್, ಕಾರ್ತಿ ಸೌಂದರಮ್, ಕುರಿ ಪ್ರತಾಪ್, ಶರತ್ ಲೋಹಿತಾಶ್ವ, ದತ್ತಣ್ಣ, ಪ್ರಿಯಾಂಕಾ ಮತ್ತು ಮುಂತಾದವರು.

    ಎರಡು ಕಾರಣಗಳಿಗೆ ‘ಬ್ಯಾಡ್ ಮ್ಯಾನರ್ಸ್‌’ ಚಿತ್ರ ಕುತೂಹಲ, ನಿರೀಕ್ಷೆ ಮೂಡಿಸಿತ್ತು. ಒಂದು ದುನಿಯಾ ಸೂರಿ ನಿರ್ದೇಶನ ಮತ್ತೊಂದು ಮೊದಲ ಚಿತ್ರ ‘ಅಮರ್’ ಬಿಡುಗಡೆಯಾಗಿ ನಾಲ್ಕು ವರ್ಷಗಳ ನಂತರ ಅಭಿಷೇಕ್ ಅಂಬರೀಷ್ ನಟನೆ. ಸೂರಿ ಪಾತ್ರಗಳಿಗೆ ಡಾಲಿ, ಚಿಟ್ಟೆ, ಕಾಕ್ರೋಚ್, ಬೇಬಿ ಕೃಷ್ಣ, ಜಾಮೂನ್ ರವಿ ಯಂತೆಯೇ ಭಿನ್ನ, ವಿಭಿನ್ನ ಹೆಸರನ್ನಿಟ್ಟಿರುತ್ತಾರೆ. ಅದೇ ರೀತಿ ‘ಬ್ಯಾಡ್ ಮ್ಯಾನರ್ಸ್‌’ನಲ್ಲೂ ಮಗಾಯ್, ಫೀನಿಕ್ಸ್, ಚಾಕ್ನಾ, ತಲ್ವಾರ್ ತಾತಯ್ಯ, ಪಾಂಡಾ, ಅಂಡೆ ಕರ‌್ರಿ, ಕೊಬ್ರಿ, ಬೊಂಬು, ಅರಾಕ್ ಮಂಜು, ಸಿಲ್ಕ್, ಶಾವಿಗೆ… ಹೀಗೆ ಹಲವು ಪಾತ್ರಗಳು, ಗೋಡಾ, ಬೂದಿ ಗುಡ್ಡ, ಹಂದಿ ಹಳ್ಳ, ರಾಣಿ ಕೊಂಪೆಯಂತೆ ಹೊಸ ಹೊಸ ಜಾಗಗಳಿವೆ.

    ಇದನ್ನೂ ಓದಿ : ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಸಿನಿಮಾ

    BAD MANNERS Review ; ಚೂರು ವೈಲ್ಡ್, ಪೂರಾ ಮ್ಯಾಡ್!

    ಕೇಶಪ್ಪ (ಕಾರ್ತಿ) ರುದ್ರನಿಗೆ (ಅಭಿ), ‘ನಾನು ಫೀನಿಕ್ಸ್‌ನ (ರೋಚಿತ್) ಮೆಂಟಲಿ ಸಾಯ್ಸಿದ್ದೀನಿ. ನೀನು ಫಿಸಿಕಲಿ ಸಾಯಿಸ್ತೀಯಾ? ಎಂದು ಕೇಳುತ್ತಾನೆ. ಅದಕ್ಕೆ ರುದ್ರ, ‘ನೀನು ಸ್ಟ್ ಆಸ್ಪತ್ರೆ ಸೇರಿ ಟ್ರೀಟ್ಮೆಂಟ್ ತಗೋ. ನಿನ್ ರಿವೆಂಜ್ ಸ್ಟೋರಿಗೆ ನಾನು ಗನ್ ಆಗಬೇಕಾ’ ಅಂತಾನೆ. ಕೇಶಪ್ಪ, ‘ಮೆಂಟಲಿ, ಫಿಸಿಕಲಿ, ಫಿಲಾಸಫಿಕಲಿ, ಸ್ಪಿರಿಚುಯಲಿ ಇದು ರಿವೆಂಜ್ ಅಲ್ಲ ರೆವಾಲ್ಯುಷನ್’ ಎನ್ನುತ್ತಾನೆ. ಈ ಸಂಭಾಷಣೆಯಂತೆಯೇ ರಿವೆಂಜ್ ಮತ್ತು ರೆವಾಲ್ಯುಷನ್ ಸುತ್ತ ‘ಬ್ಯಾಡ್ ಮ್ಯಾನರ್ಸ್‌’ ಕಥೆ ಸುತ್ತುತ್ತದೆ.

    ಇದನ್ನೂ ಓದಿ : ಪೊಲಿಟಿಕಲ್​ ಕಾಮಿಡಿ ಸುತ್ತ ‘ಪಾಲಿಟಿಕ್ಸ್​ ಕಲ್ಯಾಣ’ ; ಕವಿ ರಾಜೇಶ್​ ಹೊಸ ರಾಜಕೀಯ ವಿಡಂಬನೆ

    BAD MANNERS Review ; ಚೂರು ವೈಲ್ಡ್, ಪೂರಾ ಮ್ಯಾಡ್!

    ‘ಅಪ್ಪ ಪೊಲೀಸ್ ಅವರ ಸರ್ವೀಸ್ ಗನ್ ಕಳೆದುಬಿಟ್ಟಿದ್ದೇನೆ, ಹೊಸ ಗನ್ ಮಾಡಿಕೊಡಿ ಎಂದು’ ಅಕ್ರಮ ಕಂಟ್ರಿ ಪಿಸ್ತೂಲ್ ಮಾಫಿಯಾಗೆ ಕುಖ್ಯಾತಿಯಾದ ಗೋವಿಂದಗಢ, ಗೋಡಾಗೆ ಬರುತ್ತಾನೆ. ಅಲ್ಲಿ ಡಾನ್ ಆಗಬೇಕೆಂದು ತಲ್ವಾರ್ ತಾತಯ್ಯ (ಶ್ರೀನಿವಾಸ್) ಒಂದೆಡೆ ಮತ್ತು ಮಗಾಯ್ (ರೋಚಿತ್), ಫೀನಿಕ್ಸ್ (ತ್ರಿವಿಕ್ರಮ್) ಮತ್ತೊಂದೆಡೆ ಮಸಲತ್ತು ನಡೆಸುತ್ತಿರುತ್ತಾರೆ. ರುದ್ರನ ಎಂಟ್ರಿ ಅಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸುತ್ತದೆ. ಆತ ಅಲ್ಲಿಗೆ ಬಂದಿರುವುದು ಗನ್ ಹುಡುಕಾಟಕ್ಕಲ್ಲ ಎಂಬುದು ತಿಳಿಯುತ್ತದೆ. ಅಲ್ಲೊಂದು ಫ್ಲಾಶ್‌ಬ್ಯಾಕ್. ಅದರಲ್ಲಿ ನಿಜವಾದ ಕಾರಣ ತಿಳಿಯುತ್ತದೆ. ಸೂರಿ ವಿಭಿನ್ನ ಸ್ಕ್ರೀನ್‌ಪ್ಲೇ, ಟ್ವಿಸ್ಟ್‌ಗಳ ಮೂಲಕ ಪ್ರೇಕ್ಷಕರ ಮುಂದೆ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಹೋಗುತ್ತಾರೆ.

    ಇದನ್ನೂ ಓದಿ : ಹಿಂದಿ – ಇಂಗ್ಲೀಷ್​ ವೆಬ್​ಸರಣಿಯಲ್ಲಿ ಕನ್ನಡದ ಚೆಲುವೆ ಜ್ಯೋತಿ ರೈ ; ಯಾವುದು ಆ ಸರಣಿ?

    BAD MANNERS Review ; ಚೂರು ವೈಲ್ಡ್, ಪೂರಾ ಮ್ಯಾಡ್!

    ‘ಅಮರ್’ಗೆ ಹೋಲಿಸಿದರೆ ಅಭಿ ಮತ್ತಷ್ಟು ಮಾಗಿದ್ದಾರೆ. ಸೂರಿ ಗರಡಿಯಲ್ಲಿ ಇನ್ನಷ್ಟು ಪಳಗಿದ್ದಾರೆ, ಕುಣಿದಿದ್ದಾರೆ, ಹೊಡೆದಾಡಿದ್ದಾರೆ. ಆಗಾಗ ಹಿನ್ನೆಲೆಯಲ್ಲಿ ಬರುವ ಅಂಬರೀಷ್ ಅವರ 1983ರ ‘ಚಕ್ರವ್ಯೆಹ’ ಚಿತ್ರದ ಸಂಗೀತದ ನಡುವೆ ಅಪ್ಪನನ್ನು ನೆನಪಿಸುತ್ತಾರೆ. ದ್ವಿತೀಯಾರ್ಧದಲ್ಲಿ ನಾಯಕಿ ರಚಿತಾ ರಾಮ್ ಹಾಗೆ ಬಂದು ಹೀಗೆ ಹೋಗಿದ್ದಾರೆ. ಮಗಾಯ್ ರೋಚಿತ್ ಮತ್ತು ಕೇಶಪ್ಪ ಕಾರ್ತಿ ನಟನೆ ಚಿತ್ರದ ಹೈಲೈಟ್. ತ್ರಿವಿಕ್ರಮ್ ಕೂಡ ಅವರಿಗೆ ಸಮವಾಗಿ ನಿಲ್ಲುತ್ತಾರೆ. ಕುರಿ ಪ್ರತಾಪ್ ಅಲ್ಲಲ್ಲಿ ನಗಿಸುತ್ತಾರೆ. ಮಾಸ್ತಿ ಒನ್‌ಲೈನರ್‌ಗಳು, ಚರಣ್ ರಾಜ್ ಸಂಗೀತ, ಹೊಸ ಜಾಗಗಳನ್ನು ಛಾಯಾಗ್ರಾಹಕ ಶೇಖರ್ ಸೆರೆಹಿಡಿದಿರುವ ರೀತಿ ‘ಬ್ಯಾಡ್ ಮ್ಯಾನರ್ಸ್‌’ಅನ್ನು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿಸುತ್ತವೆ. ಸೂರಿ ಸಿನಿಮಾ ಮೇಕಿಂಗ್ ಶೈಲಿ, ಅಭಿ ಮ್ಯಾನರಿಸಂ ಹಾಗೂ ಆ್ಯಕ್ಷನ್ ಥ್ರಿಲ್ಲರ್ ಇಷ್ಟಪಡುವವರಿಗೆ ಈ ಸಿನಿಮಾ ುಲ್ ಮೀಲ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts