More

  ಕುಸ್ತಿಪಟುಗಳ ಪರ ದನಿ ಎತ್ತಿದ ಬಾಬಾ ರಾಮದೇವ್; ಬ್ರಿಜ್​​ಭೂಷಣ್​ ಶರಣ್ ಸಿಂಗ್ ಬಂಧನಕ್ಕೆ ಆಗ್ರಹ

  ನವದೆಹಲಿ: ರೆಸ್ಲಿಂಗ್ ಫೆಡರೇಷನ್​ ಆಫ್ ಇಂಡಿಯಾ (ಡಬ್ಲ್ಯುಎಫ್​ಐ) ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್​​ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಜಂತರ್​ಮಂತರ್​ನಲ್ಲಿ ಪ್ರತಿಭಟನಾನಿರತರಾಗಿರುವ ಕುಸ್ತಿಪಟುಗಳ ಪರವಾಗಿ ಯೋಗಗುರು ಬಾಬಾ ರಾಮದೇವ್ ದನಿ ಎತ್ತಿದ್ದಾರೆ.

  ಅಪ್ರಾಪ್ತ ವಯಸ್ಸಿನವಳೂ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬ್ರಿಜ್​​ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕು ಎಂದು ರಾಮದೇವ್ ಆಗ್ರಹಿಸಿದ್ದಾರೆ.

  ಇದನ್ನೂ ಓದಿ: ಎಂಎಲ್​ಎ ಟಿಕೆಟ್ ಸಿಗದಿದ್ದರೂ ಸಿಕ್ಕಿತು ಸಚಿವ ಸ್ಥಾನ!

  ದೇಶದ ಕುಸ್ತಿಪಟುಗಳು ಜಂತರ್​ಮಂತರ್​ನಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅವರ ವಿರುದ್ಧ ಲೈಂಗಿಕ ದುರ್ವರ್ತನೆ ತೋರಿದ ಡಬ್ಲ್ಯುಎಫ್​ಐ ಅಧ್ಯಕ್ಷ ಬ್ರಿಜ್​​ಭೂಷಣ್ ಶರಣ್ ಸಿಂಗ್ ಪ್ರತಿನಿತ್ಯ ದೇಶದ ಮಾತೆಯರು-ಸಹೋದರಿಯರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇದು ಖಂಡನೀಯ ಎಂದಿರುವ ರಾಮದೇವ್​, ಬ್ರಿಜ್​​ಭೂಷಣ್​ರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

  ಇದನ್ನೂ ಓದಿ: ಮೋದಿ ಸರ್ಕಾರದ 9 ವರ್ಷಗಳ ಸಂಭ್ರಮ: ತಿಂಗಳಿಡೀ ದೇಶಾದ್ಯಂತ ನಡೆಯಲಿದೆ 50 ರ‌್ಯಾಲಿ 

  ವಿನೇಶ್ ಫೋಗತ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಖ್ಯಾತ ಕುಸ್ತಿಪಟುಗಳು ದೆಹಲಿಯ ಜಂತರ್​ಮಂತರ್​ನಲ್ಲಿ ಏ. 23ರಿಂದ ಪ್ರತಿಭಟನಾನಿರತರಾಗಿದ್ದು, ಡಬ್ಲ್ಯುಎಫ್​ಐ ಅಧ್ಯಕ್ಷ ಬ್ರಿಜ್​​ಭೂಷಣ್​ ಶರಣ್ ಸಿಂಗ್​ರನ್ನು ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ. ಅದಾಗ್ಯೂ ಸಿಂಗ್ ಬಂಧನವಾಗದ ಹಿನ್ನೆಲೆಯಲ್ಲಿ ಬಾಬಾ ರಾಮದೇವ್ ಕೂಡ ದನಿಗೂಡಿಸಿದ್ದಾರೆ. –ಏಜೆನ್ಸೀಸ್

  ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts