ಕತಾರಿನಲ್ಲಿ ಭಾರತೀಯರಿಂದ ಆಯುರ್ವೇದ ದಿನಾಚರಣೆ | Qatar

blank

Qatar: ಭಾರತೀಯ ದೂತವಾಸದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರವು(ICC) ಆಯುರ್ವೇದ ದಿನಾಚರಣೆಯನ್ನು ಆಚರಿಸಿತು. ಭಾರತೀಯ ದೂತವಾಸದ ಉಪಮುಖ್ಯಸ್ಥರಾದ ಶ್ರೀ ಸಂದೀಪ್ ಕುಮಾರ್ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಮುಖ ಭಾಷಣಕಾರರಾಗಿ ಡಾಕ್ಟರ್ ಫಸಿಹ ಅಷ್ಕರ್ ಅವರು “ಆಯುರ್ವೇದ ಹಾಗು ಪ್ರಪಂಚದ ಆರೋಗ್ಯ” ಎಂಬ ವಿಷಯದ ಕುರಿತು ಸಭಿಕರಿಗೆ ಭಾಷಣ ನೀಡಿದರು.

ಇದನ್ನು ಓದಿ: ನಿಜ್ಜರ್ ಹತ್ಯೆ ವರದಿಯಲ್ಲಿ ತಮ್ಮ ಅಧಿಕಾರಿಗಳೇ ಕ್ರಿಮಿನಲ್​​​; ಮೋದಿ ಅವರಿಗೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದೇಕೆ ಟ್ರೂಡೊ | Justin Trudeau

ಐಸಿಸಿ ಕಾರ್ಯದರ್ಶಿಗಳಾದ ಶ್ರೀ.ಆ ಬ್ರಹ್ಮ ಜೋಸೆಫ್ ಅವರು ಸಭಿಕರನ್ನು ಸ್ವಾಗತಿಸಿದರು. ಐಸಿಸಿ ಉಪಾಧ್ಯಕ್ಷರಾದ ಕರ್ನಾಟಕ ಮೂಲದವರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲ ಉದ್ದೇಶವನ್ನು ತಿಳಿಸಿದರು ಹಾಗು ವಿವಿಧ ದಿನಾಚರಣೆಗಳನ್ನು ಆಚರಿಸುವ ಪ್ರಾಮುಖ್ಯತೆಯನ್ನು ವಿಶ್ಲೇಷಿಸಿದರು.

ಮುಖ್ಯ ಅತಿಥಿಗಳಾದ ಶ್ರೀ ಸಂದೀಪ್ ಕುಮಾರ್ ಅವರು, ಆಯುರ್ವೇದದ ಮಹತ್ವ ಹಾಗೂ ಮಾನವ ಕುಲದ ಮೇಲೆ ಅದರ ಪ್ರಭಾವದ ಬಗ್ಗೆ ಮಾತನಾಡಿದರು. ಐಸಿಸಿ ಮಾನವ ಸಂಪನ್ಮೂಲ ಹಾಗೂ ರಾಜ ದೂತಾವಾಸ ಕಾರ್ಯಾಲಯದ ಸೇವೆಗಳ ಮುಖ್ಯಸ್ಥರಾದ ಶ್ರೀ ಸಜೀವ್ ಸತ್ಯಶೀಲನ್ ಅವರು ವಂದನಾರ್ಪಣೆಯನ್ನು ಸಲ್ಲಿಸಿದರು.

ಸಂಪೂರ್ಣ ಕಾರ್ಯಕ್ರಮವನ್ನು ಐಸಿಸಿ ಶಾಲಾ ಚಟುವಟಿಕೆಗಳ ಮುಖ್ಯಸ್ಥರಾದ ಶ್ರೀ ಶಂತನು ದೇಶ್‌ಪಾಂಡೆ ಅವರು ನಡೆಸಿಕೊಟ್ಟರು. ಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೋಹನ್ ಕುಮಾರ್, ಇತರ ಆಡಳಿತ ಸಮಿತಿಯ ಸದಸ್ಯರು ಹಾಗೂ. ಭಾರತೀಯ ಸಮುದಾಯದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಈ ಆಚರಣೆಯ ಸಮಾರಂಭದಲ್ಲಿ ಉಪಸ್ಥಿತರಿದ್ದರು.

9 ವರ್ಷಗಳ ನಂತರ ಐಪಿಎಲ್​ ಹರಾಜಿನಲ್ಲಿ ಭಾಗಿಯಾಗಿದ್ದೇನೆ; ಅಂದು ವಿಚಿತ್ರ ಅನಿಸಿತು ಆದರೆ ಇಂದು.. Rahul Dravid ಹೇಳಿದ್ದೇನು?

Share This Article

ಚಳಿಗಾಲದಲ್ಲಿ ಹುಣಸೆಹಣ್ಣು ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? health benefits of tamarind

health benefits of tamarind : ನಮ್ಮ ದಿನನಿತ್ಯದ ಅಡುಗೆಯಲ್ಲಿ ಹುಣಸೆಹಣ್ಣನ್ನು ಬಳಸುವುದರಿಂದ ನಮಗೆ ಅರಿವಿಲ್ಲದೆಯೇ…

ವಾರದಲ್ಲಿ ಎರಡು ಬಾರಿ ಈ ಜ್ಯೂಸ್​ ಕುಡಿದರೆ ಸಾಕು ನಿಮ್ಮ ಕಿಡ್ನಿಗಳು ಫುಲ್​ ಕ್ಲೀನ್​ ಆಗಿಬಿಡುತ್ತವೆ! Kidney Health

Kidney Health : ಮೂತ್ರಪಿಂಡಗಳನ್ನು ಮಾನವ ದೇಹದ ಪ್ರಮುಖ ಅಂಗಗಳೆಂದು ಪರಿಗಣಿಸಲಾಗಿದೆ. ಈ ಮೂತ್ರಪಿಂಡಗಳು ರಕ್ತವನ್ನು…

ನಿಮ್ಮ ಸಿಬಿಲ್​ ಸ್ಕೋರ್​ ಕುಸಿದಿದ್ಯಾ? ರಾಕೆಟ್​ನಂತೆ ಜಿಗಿಯಲು ಈ​ ಸಿಂಪಲ್​ ಟಿಪ್ ಅನುಸರಿಸಿ​ | CIBIL Score

Cibil Score: ಇತ್ತೀಚಿನ ದಿನಗಳಲ್ಲಿ ಯಾರಿಗೆ ಹಣದ ಅವಶ್ಯಕತೆ ಇಲ್ಲ ಹೇಳಿ? ಬಡವನಿಂದ ಹಿಡಿದು ಶ್ರೀಮಂತರವರೆಗೂ…