ನಿಜ್ಜರ್ ಹತ್ಯೆ ವರದಿಯಲ್ಲಿ ತಮ್ಮ ಅಧಿಕಾರಿಗಳೇ ಕ್ರಿಮಿನಲ್​​​; ಮೋದಿ ಅವರಿಗೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದೇಕೆ ಟ್ರೂಡೊ | Justin Trudeau

blank

ಒಟ್ಟಾವಾ; ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ನಿಜ್ಜರ್ ಹತ್ಯೆಯಿಂದಾಗಿ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹದಗೆಟ್ಟಿದ್ದು ಗೊತ್ತೆ ಇದೆ. ಈ ಹತ್ಯೆಗೆ ಪ್ರಧಾನಿ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಎನ್ಎಸ್ಎ ಅಜಿತ್ ದೋವಲ್​​ಗೆ ಸಂಬಂಧ ಕಲ್ಪಿಸುವ ವರದಿಯ ಎದುರು ಕೆನಡಾದ ಪ್ರಧಾನಿ ಜಸ್ಟಿನ್​ ಟ್ರಡೊ(Justin Trudeau) ಸರ್ಕಾರ ಈಗ ಮಂಡಿಯೂರಿದೆ.

ಇದನ್ನು ಓದಿ: Shahi Jama Masjid ಸಮೀಕ್ಷೆ ವೇಳೆ ಗಲಾಟೆ; ಗುಂಪು ಚದುರಿಸಲು ಕಟ್ಟುನಿಟ್ಟಿನ ಕ್ರಮಕೈಗೊಂಡ ಪೊಲೀಸರು

ಈ ವಿಷಯದಲ್ಲಿ ಕೆನಡಾ ತನ್ನ ತಪ್ಪನ್ನು ಒಪ್ಪಿಕೊಂಡ ನಂತರ ಟ್ರೂಡೊ ಸರ್ಕಾರವು ತನ್ನದೇ ಅಧಿಕಾರಿಗಳನ್ನು ಅಪರಾಧಿಗಳು ಎಂದು ಹೆಸರಿಸಿದೆ. ಅತ್ಯಂತ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡುವ ಅಪರಾಧಿಗಳು ಯಾವಾಗಲೂ ತಪ್ಪು ಕಥೆಯನ್ನು ಹೇಳುತ್ತಾರೆ ಎಂದು ಟ್ರುಡೊ ಅವರೇ ಹೇಳಿದ್ದಾರೆ. ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ವಿದೇಶಿ ಹಸ್ತಕ್ಷೇಪದ ತನಿಖೆಯು ಇಂತಹ ಸೋರಿಕೆಯಾದ ಮಾಹಿತಿಯು ಅಪರಾಧ ಮಾತ್ರವಲ್ಲ, ವಿಶ್ವಾಸಾರ್ಹವಲ್ಲ ಎಂದು ತಿಳಿದುಬಂದಿದೆ ಎಂದಿದ್ದಾರೆ.

ಪ್ರಧಾನಿ ಮೋದಿ, ಸಚಿವ ಜೈಶಂಕರ್ ಅಥವಾ ಎನ್‌ಎಸ್‌ಎ ಅಜಿತ್ ದೋವಲ್ ಕೆನಡಾದೊಳಗೆ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಕೆನಡಾ ಸರ್ಕಾರಕ್ಕೆ ಯಾವುದೇ ಪುರಾವೆಗಳಿಲ್ಲ ಅಥವಾ ತಿಳಿದಿಲ್ಲ ಎಂದು ಟ್ರುಡೊ ಅವರ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರಾದ ನಥಾಲಿ ಜಿ. ಡ್ರೊಯಿನ್ ಹೇಳಿದರು.

ಕೆನಡಾ ಸರ್ಕಾರವು ಅಕ್ಟೋಬರ್ 14ರಂದು ಕೆನಡಾದಲ್ಲಿ ಭದ್ರತಾ ಬೆದರಿಕೆಗೆ ಪ್ರತಿಕ್ರಿಯೆಯಾಗಿ, ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP) ಮತ್ತು ಅಧಿಕಾರಿಗಳು ಕೆನಡಾದಲ್ಲಿ ಭಾರತೀಯ ಏಜೆಂಟರು ಮಾಡಿದ ಅಪರಾಧಗಳ ಬಗ್ಗೆ ಸಾರ್ವಜನಿಕ ಆರೋಪಗಳನ್ನು ಮಾಡಿದರು ಎಂದು ಹೇಳಿಕೆ ನೀಡಿದೆ. ಆದರೆ ಈ ಅಪರಾಧಗಳಲ್ಲಿ ಪ್ರಧಾನಿ ಮೋದಿ, ಸಚಿವ ಜೈಶಂಕರ್ ಅಥವಾ ಎನ್‌ಎಸ್‌ಎ ದೋವಲ್ ಭಾಗಿಯಾಗಿದ್ದಾರೆ ಎಂದು ಕೆನಡಾ ಸರ್ಕಾರ ಎಂದಿಗೂ ಹೇಳಲಿಲ್ಲ. ಅಂತಹ ಯಾವುದೇ ಆರೋಪವು ತಪ್ಪು ಮತ್ತು ಆಧಾರರಹಿತವಾಗಿದೆ ಎಂದು ತಿಳಿಸಿದರು.

ಕೆನಡಾದ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ನಂತರ ಟ್ರೂಡೊ ಸರ್ಕಾರದಿಂದ ಈ ಸ್ಪಷ್ಟನೆ ಬಂದಿದೆ. ವರದಿಯಲ್ಲಿ ಖಲಿಸ್ತಾನ್ ಪರ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜತೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾರತದ ಉನ್ನತ ನಾಯಕರು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿತ್ತು. (ಏಜೆನ್ಸೀಸ್​​)

ಮಿಸ್​ ಫೈರ್​​ನಿಂದ ಹುಟ್ಟುಹಬ್ಬದ ದಿನವೆ ವಿದ್ಯಾರ್ಥಿ ಸಾವು; ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.. | America

Share This Article

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…

ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…

ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes

grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…