ಮಿಸ್​ ಫೈರ್​​ನಿಂದ ಹುಟ್ಟುಹಬ್ಬದ ದಿನವೆ ವಿದ್ಯಾರ್ಥಿ ಸಾವು; ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.. | America

blank

ವಾಷಿಂಗ್ಟನ್​​ ಡಿಸಿ: ಅಮೆರಿಕದ(America) ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದ ಭಾರತೀಯ ವಿದ್ಯಾರ್ಥಿ ಮೃತಪಟ್ಟಿದ್ದಾನೆ. 23 ವರ್ಷದ ಆರ್ಯನ್ ರೆಡ್ಡಿ ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. ಅವರ ಹುಟ್ಟುಹಬ್ಬದ ದಿನ ಆಕಸ್ಮಿಕವಾಗಿ ಗನ್​ ಮಿಸ್​​ಫೈರ್​​ ಆಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆರ್ಯನ್ ತೆಲಂಗಾಣದ ಉಪ್ಪಲ್ ನಿವಾಸಿ. ನವೆಂಬರ್​​ 13 (ಬುಧವಾರ) ಈ ಅಚಾರ್ತುಯ ನಡೆದಿದ್ದು ವಿದ್ಯಾರ್ಥಿಯ ಮೃತದೇಹ ಇಂದು(ಶುಕ್ರವಾರ) ರಾತ್ರಿ ತೆಲಂಗಾಣ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: 6 ಜನರ ಮೃತದೇಹ ಪತ್ತೆಯಾದ ಬಳಿಕ ಸಿಎಂ ಫಸ್ಟ್​​​​ ರಿಯಾಕ್ಷನ್​​; ಹಂತಕರ ಕುರಿತು ಅವರು ಹೇಳಿದಿಷ್ಟು.. | Breaks Silence

ಆರ್ಯನ್ ಅಮೆರಿಕದಲ್ಲಿ ಬೇಟೆಗಾಗಿ ಬಂದೂಕು ಪರವಾನಗಿ ಪಡೆದಿದ್ದರು. ಹುಟ್ಟುಹಬ್ಬದ ಪಾರ್ಟಿಯಲ್ಲಿ ಗನ್ ಬಳಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮಿಸ್​ ಫೈರ್​​ನಿಂದ ಹುಟ್ಟುಹಬ್ಬದ ದಿನವೆ ವಿದ್ಯಾರ್ಥಿ ಸಾವು; ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.. | America

ಮಗನನ್ನು ಕಳೆದುಕೊಂಡಿರುವ ದುಃಖವ್ಯಕ್ತಪಡಿಸಿದ ಆರ್ಯನ್​ ತಂದೆ ಸುದರ್ಶನ್ ರೆಡ್ಡಿ, ವಿದೇಶದಲ್ಲಿ ಓದುತ್ತಿರುವ ತಮ್ಮ ಮಕ್ಕಳ ಬಗ್ಗೆ ಇತರ ಪಾಲಕರು ಕಾಳಜಿ ವಹಿಸಬೇಕೆಂದು ಸೂಚಿಸಿದ್ದಾರೆ. ವಿದ್ಯಾರ್ಥಿಗಳು ಅಲ್ಲಿ ಬೇಟೆಯಾಡಲು ಗನ್ ಲೈಸೆನ್ಸ್ ಪಡೆಯಬಹುದೆಂದು ನಮಗೆ ತಿಳಿದಿರಲಿಲ್ಲ. ಯಾವುದೇ ಪಾಲಕರು ಇಂತಹ ಸಂದರ್ಭವನ್ನು ಎದುರಿಸಬಾರದು ಎಂದು ಹೇಳಿದ್ದಾಗ ಎನ್​ಡಿಟಿವಿ ವರದಿ ಮಾಡಿದೆ.

ಈ ಮಧ್ಯೆ ಹೈದರಾಬಾದ್‌ನಲ್ಲಿರುವ ಅಮೆರಿಕ ಕಾನ್ಸುಲೇಟ್‌ನ ಅಧಿಕಾರಿಗಳು ಯುಎಸ್‌ನಲ್ಲಿ ಅಧ್ಯಯನ ಮಾಡುತ್ತಿರುವ ಹೆಚ್ಚಿನ ಸಂಖ್ಯೆಯ ವಿದೇಶಿ ವಿದ್ಯಾರ್ಥಿಗಳು ಭಾರತದವರು ಎಂದು ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. 2023-24ರಲ್ಲಿ ಅಮೆರಿಕದ ವಿಶ್ವವಿದ್ಯಾನಿಲಯಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸುವ ಮೂಲಕ ಭಾರತವು ಚೀನಾವನ್ನು ಹಿಂದಿಕ್ಕಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿದ್ದಾರೆ. ಸುಮಾರು 56 ಪ್ರತಿಶತ ಭಾರತೀಯ ವಿದ್ಯಾರ್ಥಿಗಳು ಈ ಎರಡು ರಾಜ್ಯಗಳಿಂದ 34 ಪ್ರತಿಶತ ತೆಲಂಗಾಣ ಮತ್ತು 22 ಪ್ರತಿಶತ ಆಂಧ್ರಪ್ರದೇಶದಿಂದ ಅಮೆರಿಕಾಕ್ಕೆ ಹೋಗಿದ್ದಾರೆ.

ಕಳೆದ ವರ್ಷದ ಅಂಕಿಅಂಶ ಹೀಗಿದೆ

ಈ ವಿಷಯದ ಕುರಿತು ಮಾತನಾಡಿದ ಹೈದರಾಬಾದ್‌ನಲ್ಲಿರುವ ಅಮೆರಿಕ ಕಾನ್ಸುಲೇಟ್ ಮುಖ್ಯಸ್ಥ ರೆಬೆಕಾ ಡ್ರೆಮ್, 2023ರಲ್ಲಿ 35,000 ವಿದ್ಯಾರ್ಥಿ ವೀಸಾ ಸಂದರ್ಶನಗಳನ್ನು ಮಾಡಲಾಗಿತ್ತು. ಆದರೆ 2024ರ ಬೇಸಿಗೆ ಅಧಿವೇಶನದಲ್ಲಿ ಕಾನ್ಸುಲೇಟ್ 47,000ಕ್ಕೂ ಹೆಚ್ಚು ವಿದ್ಯಾರ್ಥಿ ವೀಸಾ ಸಂದರ್ಶನಗಳನ್ನು ನಡೆಸಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ. ವೀಸಾಗಳ ಬೇಡಿಕೆಯನ್ನು ಹೈಲೈಟ್ ಮಾಡಿದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಲೆಕ್ಸಾಂಡರ್ ಮ್ಯಾಕ್‌ಲಾರೆನ್ ಕಳೆದ ವರ್ಷ ಭಾರತವು ಸುಮಾರು 3.3 ಲಕ್ಷ ವಿದ್ಯಾರ್ಥಿಗಳನ್ನು ಯುಎಸ್‌ಗೆ ಕಳುಹಿಸಿದೆ ಅವರಲ್ಲಿ ಹೆಚ್ಚಿನವರು ಸ್ನಾತಕೋತ್ತರ ಪದವಿಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.(ಏಜೆನ್ಸೀಸ್​​)

ಕಾರಿನಲ್ಲಿ ಮಹಿಳೆಯ ಶವ ಪತ್ತೆ; ಪೊಲೀಸರಿಗೆ ಆಕೆಯ ಪತಿಯ ಮೇಲೆ ಹತ್ಯೆ ಗುಮಾನಿ | Body Discovered

Share This Article

ರುದ್ರಾಕ್ಷಿ ಧರಿಸುವ ಮುನ್ನ ಈ 9 ವಿಷಯಗಳು ನಿಮ್ಮ ಗಮನದಲ್ಲಿರಲಿ! ಇಂತಹ ತಪ್ಪುಗಳು ಆಗದಿರಲಿ… | Rudraksha

Astrology Tips: ರುದ್ರಾಕ್ಷಿ ಎಂಬ ಪದ ಕೇಳಿದೊಡನೆ ನಮ್ಮಲ್ಲಿ ಭಕ್ತಿ ಭವಾನೆ ಮೂಡುತ್ತದೆ. ರುದ್ರಾಕ್ಷಿಗಳಿಂದ (Rudraksha)…

ಬೇಸಿಗೆಯಲ್ಲಿ ಈ ಜ್ಯೂಸ್​ ಕುಡಿದರೆ, ಸುಡುವ ಸೂರ್ಯ ಕೂಡ ನಿಮ್ಮನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ! summer

summer:  ಸಾಮಾನ್ಯವಾಗಿ ಮಾರ್ಚ್ ಅಂತ್ಯದಿಂದ ಏಪ್ರಿಲ್, ಮೇ ಮತ್ತು ಜೂನ್ ವರೆಗೆ ಸೂರ್ಯನು ಪ್ರಕಾಶಮಾನವಾಗಿ ಬೆಳಗುತ್ತಾನೆ. …

ಕಾಲುಗಳ ಮಧ್ಯೆ ದಿಂಬು ಇಟ್ಟುಕೊಂಡು ಮಲಗುತ್ತೀರಾ? ಪ್ರಯೋಜನಗಳಿವೆ.. ನೀವು ಟ್ರೈ ಮಾಡಿ ನೋಡಿ.. Sleeping With Pillow Between Legs

Sleeping With Pillow Between Legs : ನಿದ್ದೆ ಮಾಡುವಾಗ ಪ್ರತಿಯೊಬ್ಬರಿಗೂ ವಿಭಿನ್ನ ಅಭ್ಯಾಸಗಳಿರುತ್ತವೆ.  ಕೆಲವರು…