ಜಯತೀರ್ಥ ಪಾಟೀಲ

ಕಲ್ಯಾಣ ಕರ್ನಾಟಕದ ತೊಗರಿ ಕಣಜ ಕಲಬುರಗಿ ಜಿಲ್ಲೆ ಸಿಮೆಂಟ್ ನಗರಿ ಜತೆಗೆ ನೃಪತುಂಗನ ನಾಡೂ ಹೌದು. ಕಲ್ಯಾಣದ ಈ ಮಣ್ಣಿನಲ್ಲಿ ವಿಜಯವಾಣಿ ಕನ್ನಡ ನಂ.1 ದಿನಪತ್ರಿಕೆ ಕಲಬುರಗಿ ಆವೃತ್ತಿಯಲ್ಲಿ ಮುಖ್ಯ ವರದಿಗಾರರಾಗಿ ಕಳೆದ ಹನ್ನೆರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದ ವಿವಿಧ ಕನ್ನಡ ದಿನಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದೂ ಸೇರಿ ಪತ್ರಿಕೋದ್ಯಮದಲ್ಲಿ ಸರಿ ಸುಮಾರು 34 ವರ್ಷಗಳಿಂದ ಸೇವಾ ನಿರತರಾಗಿದ್ದಾರೆ. ಬಿಕಾಂ, ಕಾನೂನು ಪದವಿ, ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂಎ ಸ್ನಾತಕೋತ್ತರ ಪದವಿ ಮಾಡಿದ್ದಾರೆ. ನಾಡಿನ ತೊಗರಿ ರೈತರ ಸಮಸ್ಯೆ, ಈ ಭಾಗದ ನೀರಾವರಿ ಯೋಜನೆ ಸೇರಿ ಅಭಿವೃದ್ದಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿದ್ದಾರೆ.
ಜಯತೀರ್ಥ ಪಾಟೀಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net