ಮಠಗಳ ಚರಿತ್ರೆಕಾರ ಎಲ್​ಬಿಕೆ ಆಲ್ದಾಳ್​

ಕಲಬುರಗಿಯ ಎಲ್​.ಬಿ.ಕೆ.ಆಲ್ದಾಳ್​ ಟ್ರಸ್ಟ್​  ವತಿಯಿಂದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸತ ಎಲ್​.ಬಿ.ಕೆ. ಆಲ್ದಾಳ್​ ಸ್ಮರಣಾರ್ಥ ಹಾರಕೂಡ ಸಂಸ್ಥಾನ ಮಠದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ರಂಗಸಂತ ಜಂಗಮ ಎಲ್​.ಬಿ.ಕೆ. ಆಲ್ದಾಳ್​ ಪ್ರಶಸ್ತಿಯನ್ನು ಹಾರಕೂಡದ ಪೂಜ್ಯ ಡಾ.ಚನ್ನವಿರ ಶಿವಾಚಾರ್ಯರು ಪ್ರದಾನ ಮಾಡಿದರು. ಎಲ್​.ಬಿ.ಶೇಖ್​ ಮಾಸ್ತರ್​, ಬಿ.ಎಚ್​.ನಿರಗುಡಿ, ಪ್ರಭಾಕರ ಜೋಶಿ, ಶಿವಯ್ಯ ಸ್ವಾಮಿ ಮಠಪತಿ ಇತರರಿದ್ದರು.
ಕಲಬುರಗಿಯ ಎಲ್​.ಬಿ.ಕೆ.ಆಲ್ದಾಳ್​ ಟ್ರಸ್ಟ್​ ವತಿಯಿಂದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸತ ಎಲ್​.ಬಿ.ಕೆ. ಆಲ್ದಾಳ್​ ಸ್ಮರಣಾರ್ಥ ಹಾರಕೂಡ ಸಂಸ್ಥಾನ ಮಠದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ರಂಗಸಂತ ಜಂಗಮ ಎಲ್​.ಬಿ.ಕೆ. ಆಲ್ದಾಳ್​ ಪ್ರಶಸ್ತಿಯನ್ನು ಹಾರಕೂಡದ ಪೂಜ್ಯ ಡಾ.ಚನ್ನವಿರ ಶಿವಾಚಾರ್ಯರು ಪ್ರದಾನ ಮಾಡಿದರು. ಎಲ್​.ಬಿ.ಶೇಖ್​ ಮಾಸ್ತರ್​, ಬಿ.ಎಚ್​.ನಿರಗುಡಿ, ಪ್ರಭಾಕರ ಜೋಶಿ, ಶಿವಯ್ಯ ಸ್ವಾಮಿ ಮಠಪತಿ ಇತರರಿದ್ದರು.
Published on

ಕಲಬುರಗಿ: ಕಲ್ಯಾಣ ನಾಡಿನ ಶರಣಪರಂಪರೆಯ ಮಠಗಳ ಮತ್ತು ಮಠಾಧೀಶರ ಕೊಡುಗೆಗಳನ್ನು ಚರಿತ್ರೆಯ ರೂಪದಲ್ಲಿ ರಂಗಕ್ಕೆ ತಂದ ಖ್ಯಾತಿ ಎಲ್​.ಬಿ.ಕೆ.ಆಲ್ದಾಳರಿಗೆ ಸಲ್ಲುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಪೂಜ್ಯ ಡಾ.ಚನ್ನವಿರ ಶಿವಾಚಾರ್ಯರು ಹೇಳಿದರು.

ಕಲಬುರಗಿಯ ಎಲ್​.ಬಿ.ಕೆ. ಆಲ್ದಾಳ್​ ಟ್ರಸ್ಟ್​ ವತಿಯಿಂದ ಹಿರಿಯ ನಾಟಕಕಾರ ಹಾಗೂ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸತ ಎಲ್​.ಬಿ.ಕೆ. ಆಲ್ದಾಳ್​ ಸ್ಮರಣಾರ್ಥ ಹಾರಕೂಡ ಸಂಸ್ಥಾನ ಮಠದಲ್ಲಿ ಸೋಮವಾರ ಆಯೋಜಿಸಿದ್ದ 2026ನೇ ಸಾಲಿನ ರಾಜ್ಯಮಟ್ಟದ ರಂಗಸಂತ ಜಂಗಮ ಎಲ್​.ಬಿ.ಕೆ. ಆಲ್ದಾಳ್​ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಆಲ್ದಾಳರು ನಮ್ಮ ಮಠದ ಪರಮಭಕ್ತರು. ಅವರು ಜಾತ್ಯತಿತ, ಧರ್ಮಾತೀತರಾಗಿ ವಿವಿಧ ಮಠಾಧೀಶರ ಜೀವನ ವೃತ್ತಾಂತ ಅಧ್ಯಯನ ಮಾಡಿ, ನಾಟಕ ರಚನೆ ಮಾಡಿ ಲಾಂತರ ಜನರು ನೋಡುವಂತೆ ಮಾಡಿದ್ದರು. ಅಂತಹ ಮೇರುಕಲಾವಿದರ ಗೌರವಾರ್ಥ ಟ್ರಸ್ಟ್​ ರಚನೆ ಮಾಡಿ, ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

2026ನೇ ಸಾಲಿನ ರಂಗಸಂತ ಜಂಗಮ ಪ್ರಶಸ್ತಿಯನ್ನು ಚಿತ್ತಾಪುರ ತಾಲೂಕಿನ ಹಿರಿಯ ರಂಗಕರ್ಮಿ ಹಾಗೂ ನಾಟಕ ಲೇಖಕ ವಿಶ್ವನಾಥ ಮಾಸ್ಟರ್​ ಬೆಳಗುಂಪಾ ಮತ್ತು ಸುರಪುರ ತಾಲೂಕಿನ ಕೋಡೆಕಲ್​ ವೃತ್ತಿ ರಂಗಭೂಮಿ ಕಲಾವಿದ ಬಸವರಾಜ ಪಂಚಗಲ್​ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಫಲಕ, ತಲಾ 11 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್​.ಬಿ.ಶೇಖ್​ ಮಾಸ್ತರ್​ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್​ ಅಧ್ಯಕ್ಷ ಶಿವಯ್ಯಸ್ವಾಮಿ ಮಠಪತಿ ಬಿಬ್ಬಳ್ಳಿ ಮಾತನಾಡಿದರು. ಹಾರಕೂಡದ ಸಿದ್ರಾಮಪ್ಪ ಗುದ್ದಗೆ ಭಾಗವಹಿಸಿದ್ದರು. ಸಿದ್ದಣಗೌಡ ಶೆಟ್ಟಿ, ಗುರಪ್ಪ ಪಾಟೀಲ ನಂದೂರ, ರೇವಣಸಿದ್ದಪ್ಪ ಬಡಾ, ಶಾಮರಾವ ಕೊರವಿ, ಡಾ.ನರಸಮ್ಮ ಆವಂಟಿ, ಬಸವರಾಜ ಐನೋಳಿ, ಶಿವಣ್ಣ ಹಿಟ್ಟಿನ ಹಲಕರ್ಟಿ, ನಾಗರಾಜ ರೇಶ್ಮಿ, ಸಂಗಣ್ಣ ಅಲ್ದಿ ಉಪಸ್ಥಿತರಿದ್ದರು.

ಸಮೀರ್​ ಬಿ.ಶೇಖ್​, ತನ್ವೀರ್​ ಬಿ.ಶೇಖ್​ ಹಾಗೂ ರೇವಣಸಿದ್ಧಪ್ಪ ಹೂಗಾರ ನಡೆಸಿದ ಗಾಯನ ಜನಮನ ಸೂರೆಗೊಂಡಿತು. ಆಲ್ದಾಳ್​ ಟ್ರಸ್ಟ್​ ಸದಸ್ಯ ಪ್ರಭಾಕರ ಜೋಶಿ ಸ್ವಾಗತಿಸಿದರು. ಸಹಕಾರ್ಯದರ್ಶಿ ಬಿ.ಎಚ್​.ನಿರಗುಡಿ ನಿರೂಪಿಸಿದರು. ಟ್ರಸ್ಟ್​ ಕಾರ್ಯದರ್ಶಿ ಶಂಕರ ಹಿಪ್ಪರಗಿ ಚಿಂಚೋಳಿ ವಂದಿಸಿದರು. ಟ್ರಸ್ಟ್​ ಪದಾಧಿಕಾರಿಗಳಾದ ಸೂರ್ಯಕಾಂತ ಮಾಸ್ಟರ್​ ಹಂಗನಳ್ಳಿ, ಸೋಮಶೇಖರ ಪಾಟೀಲ ಮಲಕೂಡ, ಚಂದ್ರಶೇಖರ ಕರ್ಜಗಿ, ಶಿವರಾಜ ಪಾಟೀಲ, ರವಿ ಹಿರೇಮಠ ಸೇರಿ ಕಲಾಸಕ್ತರು, ಶ್ರೀಮಠದ ಭಕ್ತರು, ಶಾಲಾಮಕ್ಕಳು ಭಾಗವಹಿಸಿದ್ದರು. ಪ್ರಶಸ್ತಿ ಪುರಸತರಾದ ವಿಶ್ವನಾಥ ಮಾಸ್ತರ್​ ಬೆಳಗುಂಪಾ ಮತ್ತು ಬಸವರಾಜ ಪಂಚಗಲ್​ ಅವರು ತಮ್ಮ ಕಲಾಪ್ರತಿಭೆಯ ಪ್ರದರ್ಶನ ಮಾಡಿದರು.

ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸತ ಎಲ್​.ಬಿ.ಕೆ.ಆಲ್ದಾಳರು ಮಠಮಾನ್ಯಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರ ಸ್ಮರಣಾರ್ಥ ಟ್ರಸ್ಟ್​ ರಚಿಸಿ, ಅವರ ಹೆಸರಿನಲ್ಲಿ ರಂಗಸಾಧಕರಿಗೆ ಪ್ರಶಸ್ತಿ ನೀಡುವ ಕೆಲಸಕ್ಕೆ ಮುಂದಾದಾಗ ಹಾರಕೂಡದ ಪೂಜ್ಯರು ಸಹಕಾರ ನೀಡಿದ ಫಲವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ.
ಎಲ್​.ಬಿ.ಶೇಖ್​ ಮಾಸ್ತರ್​, ಮಾಜಿ ಅಧ್ಯಕ್ಷ, ಕರ್ನಾಟಕ ನಾಟಕ ಅಕಾಡೆಮಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net