ಎರಡೇ ಪಾತ್ರಗಳ ಅಥಿ ಐ ಲವ್ ಯೂ ; ಲೋಕೇಂದ್ರ ಸೂರ್ಯ, ಸಾತ್ವಿಕಾ ನಟಿಸಿರುವ ಚಿತ್ರ

D8H_0861
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸಿರುವ ಚಿತ್ರ ‘ಅಥಿ ಐ ಲವ್ ಯೂ’. ಚಿತ್ರದಲ್ಲಿ ಅವರಿಗೆ ಸಾತ್ವಿಕಾ ನಾಯಕಿಯಾಗಿದ್ದಾರೆ. ಗಂಡ, ಹೆಂಡತಿ ನಡುವಿನ ಸಂಬಂಧದ ಕುರಿತ ಚಿತ್ರವಿದು. ಹೀಗಾಗಿಯೇ ಕೇವಲ ಎರಡೇ ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಲೋಕೇಂದ್ರ ಸೂರ್ಯ. ಇತ್ತೀಚೆಗಷ್ಟೆ ಈ ವಿಭಿನ್ನ ಕಥಾಹಂದರವಿರುವ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು.

‘ಈ ಚಿತ್ರದಲ್ಲಿರುವುದು ಅಥಿ ಹಾಗು ವಸಂತ್ ಎಂಬ ಎರಡು ಪಾತ್ರಗಳಷ್ಟೆ. ಉಳಿದ ಪಾತ್ರಗಳು ಧ್ವನಿಯ ಮೂಲಕ ಚಿತ್ರಕ್ಕೆ ಜೀವ ತುಂಬಿವೆ. ಇದು ಒಂದೇ ದಿನದಲ್ಲಿ ನಡೆಯುವ ಕಥೆ. ದಂಪತಿಗಳು, ಪ್ರೇಮಿಗಳಿಗೆ ಇಷ್ಟವಾಗುವ ಸಿನಿಮಾ. ಒಂದೊಳ್ಳೆ ಸಂದೇ ಕೊಡುವ ಪ್ರಯತ್ನ ಕೂಡ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು. ನಿರ್ದೇಶನ, ನಟನೆ ಜತೆಗೆ ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನೂ ಲೋಕೇಂದ್ರ ಅವರೇ ನಿಭಾಯಿಸಿದ್ದಾರೆ.

ಸಂಗೀತ ನಿರ್ದೇಶಕ ಅನಂತ್ ಆರ್ಯನ್, ಕಾಸ್ಟ್ಯೂಮ್ ಡಿಸೈನರ್ ಋತು ಚೈತ್ರ, ಕಲಾ ನಿರ್ದೇಶಕ ಕ್ರಿಯೇಟಿವ್ ವಿಜಯ್ ‘ಅಥಿ ಐ ಲವ್ ಯೂ’ ಬಗ್ಗೆ ಮಾತನಾಡಿದರು. ಸದ್ಯ ಟ್ರೇಲರ್ ಬಿಡುಗಡೆ ಮಾಡಿ ಪ್ರಚಾರ ಪ್ರಾರಂಭಿಸಿರುವ ಚಿತ್ರತಂಡ, ಪತಿ ಟಿಕೆಟ್ ಖರೀದಿಸಿದರೆ, ಪತ್ನಿಗೆ ಉಚಿತ ಟಿಕೆಟ್ ಹಾಗೂ ಪತ್ನಿ ಟಿಕೆಟ್ ಖರೀದಿಸಿದರೆ ಪತಿಗೆ ಉಚಿತ ಟಿಕೆಟ್ ನೀಡಲು ಹೊಸ ಐಡಿಯಾ ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net