ಮದುವೆ ಬಳಿಕ ಮತ್ತೆ ಕ್ಯಾಮೆರಾ ಮುಂದೆ ಬರಲು ಹರ್ಷಿಕಾ ಪೂಣಚ್ಚ ರೆಡಿ..!

hfin
Published on

ಹರ್ಷಿಕಾ ಪೂಣಚ್ಚ ಮದುವೆ ಬಳಿಕ ಇದೀಗ ಸಿನಿಮಾದಲ್ಲಿ ನಟಿಸೋಕೆ ಒಪ್ಪಿಗೆ ಸೂಚಿಸಿದ್ದಾರೆ. ರ್ಷಿಕಾ ಪೂಣಚ್ಚ ಅವರು 1990 ಮೇ 1ರಂದು ಹುಟ್ಟಿದ್ದಾರೆ. ಇವರ ವಯಸ್ಸು ಈಗ 33. ಭುವನ್ ಪೊನ್ನಣ್ಣ ಅವರು 1989 ಡಿಸೆಂಬರ್ 30ರಂದು ಹುಟ್ಟಿದ್ದು ಇವರ ವಯಸ್ಸು ಈಗ 34 .


ಭುವನ್​ ಮತ್ತು ಹರ್ಷಿಕಾ ಇತ್ತೀಚೆಗಷ್ಟೇ ಮದುವೆಯಾಗಿದ್ದು, ಅಮೆರಿಕಾ ವೆಕೇಶನ್​ಗೂ ತೆರಳಿದ್ರು. ಭುವನ್ ಪೊನ್ನಣ್ಣ ಅವರು ಹರ್ಷಿಕಾಗಿಂತ ಒಂದು ವರ್ಷ ದೊಡ್ಡವರು. ಸಾಮಾನ್ಯವಾಗಿ ಇತ್ತೀಚಿನ ವರ್ಷಗಳಲ್ಲಿ ಜೋಡಿಗಳ ಮಧ್ಯೆ ಹೆಚ್ಚು ಏಜ್​​ಗ್ಯಾಪ್ ಇರುವುದಿಲ್ಲ. ಬಹಳಷ್ಟು ಸಲ ಹುಡುಗ ಚಿಕ್ಕವನೂ ಆಗಿರುತ್ತಾನೆ. ಅಂಥಹ ಹಲವಾರು ಜೋಡಿಗಳೂ ಇದ್ದಾರೆ.
ಇದೀಗ ಹರ್ಷಿಕಾ ಮದುವೆ ಬಳಿಕ ಭೋಜಪುರಿ ಚಿತ್ರವೊಂದರಲ್ಲಿ ನಟಿಸೋಕೆ ಓಕೆ ಎಂದಿದ್ದಾರೆ. ಈವರೆಗೂ ಹರ್ಷಿಕಾ 8 ಭಾಷೆಗಳಲ್ಲಿ ನಟಿಸಿದ್ದು, ಈಗ ಮದುವೆ ಬಳಿಕ ವಿಭಿನ್ನ ಚಿತ್ರ ಕಥೆ ಇರುವ ಭೋಜಪುರಿ ಸಿನಿಮಾಗೆ ಓಕೆ ಎಂದಿದ್ದಾರೆ.


ಭೋಜಪುರಿ ನಟ ರಿತೇಶ್ ಪಾಂಡೆ ನಟನೆಯ ಸಿನಿಮಾದಲ್ಲಿ ಹರ್ಷಿಕಾ ಹೀರೋಯಿನ್ ಆಗಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಪ್ರಾರಂಭಗೊಂಡಿದ್ದು, ಸದ್ಯ ಹರ್ಷಿಕಾ ಮದುವೆ ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ.


ವಿರಾಜಪೇಟೆಯ ಅಮ್ಮತ್ತಿಯಲ್ಲಿ ಈ ಭುವನ್‌ ಹರ್ಷಿಕಾ ಹಸೆಮಣೆ ಏರಿದ್ದಾರೆ. ಹರ್ಷಿಕಾ ಪೂಣಚ್ಚ, ಮುಗ್ಧ ಅಭಿನಯದ ಮೂಲಕ ಎಲ್ಲರ ಮನ ಗೆದ್ದಿರುವ ನಟಿ. ಸಾಮಾಜಿಕ ಕಾರ್ಯಗಳಲ್ಲಿ ಸಹ ತಮ್ಮನ್ನ ತಾವೂ ತೊಡಗಿಸಿಕೊಂಡು, ಜನರಿಗೆ ಸಹಾಯ ಮಾಡುತ್ತಿದ್ದಾರೆ.


ಕೊರೊನಾ ಸಮಯದಲ್ಲಿ ಕಷ್ಟದಲ್ಲಿದ್ದ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವ ಮೂಲಕ ಅದ್ಭುತ ಕೆಲಸ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net