

ಆಂಧ್ರಪ್ರದೇಶ: ರಾಷ್ಟ್ರ ಪ್ರಶಸ್ತಿ ವಿಜೇತ, ಟಾಲಿವುಡ್ನ ಐಕಾನ್ ಸ್ಟಾರ್, ನಟ ಅಲ್ಲು ಅರ್ಜುನ್ ಅಭಿನಯಿಸುತ್ತಿರುವ 'ಪುಷ್ಪ 2' ಚಿತ್ರತಂಡ ಇದೀಗ ಸಿನಿಪ್ರೇಕ್ಷಕರಿಗೆ ಹೊಸ ಮಾಹಿತಿಯೊಂದನ್ನು ನೀಡಿದೆ ಎಂದು ವದಂತಿಗಳು ತಿಳಿಸಿವೆ.
ಇತ್ತೀಚೆಗೆ 'ಪುಷ್ಪ ಭಾಗ 1' ರಲ್ಲಿನ ಅಭಿನಯಕ್ಕಾಗಿ ನಟ ಅಲ್ಲು ಅರ್ಜುನ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡರು. ಇದೀಗ ಅವರ ಮುಂದಿನ 'ಪುಷ್ಪ 2': ದಿ ರೂಲ್ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗಳು ಹರಿದಾಡುತ್ತಿವೆ.
ಈ ಹಿಂದೆ ಸಿನಿಮಾದ ಒಂದು ವಿಶೇಷ ಹಾಡಿಗೆ ನಾಯಕಿಯರ ಹುಡುಕಾಟದಲ್ಲಿ ಚಿತ್ರತಂಡ ಬಹಳ ಕಸರತ್ತು ಪಟ್ಟಿತ್ತು. ಸೂಕ್ತ ನಟಿ ಸಿಗದ ಕಾರಣ ಸಾಂಗ್ನ ಚಿತ್ರೀಕರಣ ಮುಂದಕ್ಕೆ ಹೋಗುತ್ತಿತ್ತು. ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಇತ್ತೀಚಿನ ವರದಿ ಪ್ರಕಾರ, ಚಿತ್ರದ ನೂತನ ವೇಳಾಪಟ್ಟಿ ನಾಳೆ ಹೈದರಾಬಾದ್ನಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.
ಸಿನಿಮಾದಲ್ಲಿರುವ ಬೃಹತ್ ಜಾತ್ರೆ ಸನ್ನಿವೇಶವೊಂದನ್ನು ಶೂಟ್ ಮಾಡಲಿದೆ ಎಂದು ವದಂತಿಗಳು ತಿಳಿಸಿವೆ. ಸದ್ಯ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆಗೆ ಅಲ್ಲು ಅರ್ಜುನ್ ಇಟಲಿಯಲ್ಲಿದ್ದಾರೆ. ಸಮಾರಂಭದ ನಂತರ ಚಿತ್ರದ ಸೆಟ್ಗೆ ಸೇರಲು ಭಾರತಕ್ಕೆ ಹಿಂತಿರುಗುತ್ತಾರಾ ಎಂಬುದನ್ನು ಕಾದು ನೋಡಬೇಕು.
'ಪುಷ್ಪ 2' ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ಜಗದೀಶ್, ಅನಸೂಯಾ ಭಾರದ್ವಾಜ್, ಸುನೀಲ್, ಅಜಯ್ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದು, ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಮಾಡಿದೆ,(ಏಜೆನ್ಸೀಸ್).