ಲಾರಿಗೆ ಕಾರು ಡಿಕ್ಕಿ; 11 ಜನರ ದುರ್ಮರಣ, ಮೂವರ ಸ್ಥತಿ ಗಂಭೀರ

ಅಪಘಾತ
Published on

ಜೋಧ್​ಪುರ: ಲಾರಿ ಮತ್ತು ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದುಕೊಂಡಿರುವ ಘಟನೆ ರಾಜಸ್ಥಾನದ ಜೋಧ್​ಪುರ್​ ಜಿಲ್ಲೆಯ ಹೆದ್ದಾರಿಯೊಂದರಲ್ಲಿ ನಡೆದಿದೆ. ಘಟನೆಯಲ್ಲಿ 11 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಸ್ಥಿತಿ ಗಂಭೀರವಾಗಿದೆ.

ಇಂದು ಬೆಳಗ್ಗೆ ಫಲೋಡಿ ಬಲೋತ್ರಾ ಹೆದ್ದಾರಿಯಲ್ಲಿ ಬರುತ್ತಿದ್ದ ಬೊಲೆರೊ ಕಾರಿಗೆ ಸೊಯಿಂಟ್ರಾ ಗ್ರಾಮದ ಬಳಿ ಲಾರಿಯು ಡಿಕ್ಕಿ ಹೊಡೆದಿದೆ. ಕಾರು ಲಾರಿಯ ಅಡಿಯಾಗಿದ್ದು ಪೂರ್ತಿಯಾಗಿ ಜಜ್ಜಿ ಹೋಗಿದೆ. ಘಟನೆಯಲ್ಲಿ ಆರು ಮಹಿಳೆಯರು, ನಾಲ್ಕು ಪುರುಷರು ಮತ್ತು ಒಂದು ಮಗು ಮೃತರಾಗಿದ್ದಾರೆ. ಅಪಘಾತವಾದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದು, ಮೃತ ದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಮೂರು ಜನರ ಸ್ಥೀತಿ ಗಂಭೀರವಾಗಿದ್ದು ಅವರನ್ನು ಜೋಧ್​ಪುರ್​ನ ಎಮ್​ಡಿಎಮ್​ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ನಡೆಸ ಸ್ಥಳಕ್ಕೆ ಪೊಲೀಸರು, ಆಡಳಿತ ಅಧಿಕಾರಿಗಳು ಮತ್ತು ಸ್ಥಳೀಯ ಪ್ರತಿನಿಧಿಗಳು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ದುರ್ಘಟನೆಯ ಕುರಿತಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಟ್ವೀಟ್​ ಮಾಡಿದ್ದು, "ಜೋಧ್​ಪುರದ ಹೆದ್ದಾರಿಯಲ್ಲಿ ಸಂಭವಿಸಿರುವ ದುರಂತದ ಬಗ್ಗೆ ತಿಳಿದು ತೀವ್ರ ದುಃಖಿತನಾಗಿದ್ದೇನೆ. ಘಟನೆಯಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ಈ ನಷ್ಟವನ್ನು ಭರಿಸಲು ದೇವರು ಶಕ್ತಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ನುಡಿದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net