More

    VIDEO| ಅಬ್ಬಬ್ಬಾ! ಬಾತುಕೋಳಿಗಳ ಗೆಳೆತನ ಹೀಗೂ ಇರುತ್ತಾ?

    ಬೆಂಗಳೂರು: ಗೆಳೆತನ ಎಂದರೆ ಎಲ್ಲಾ ಭಾವನೆಗಳನ್ನೂ ಮೀರಿದ್ದು. ಎಷ್ಟೋ ಬಾರಿ ಕುಟುಂಬಕ್ಕಿಂತ ಹೆಚ್ಚಾಗಿ ಬಿಡುತ್ತದೆ ನಮ್ಮ ಗೆಳೆತನದ ನಂಟು. ಭಾವ ಜೀವಿ ಮನುಷ್ಯನ ಗೆಳೆತನಕ್ಕೂ ಪ್ರಾಣಿಗಳ ಗೆಳೆತನಕ್ಕೂ ಹೋಲಿಕೆ ಮಾಡಲು ಸಾಧ್ಯವಾ? ಆದರೆ ಮನುಷ್ಯನಂತೆ ತಾವು ಕೂಡ ಅತ್ಯಂತ ಸ್ನೇಹದಿಂದ ಜೀವಿಸಬಬಲ್ಲೆವೂ ಎಂದು ತೋರಿಸಿಕೊಟ್ಟಿದೆ ಇಲ್ಲೊಂದು ಬಾತುಕೋಳಿಗಳ ಗುಂಪು.

    ಅದು 11 ಬಾತುಕೋಳಿಗಳ ಗುಂಪು. ಅವುಗಳ ಸ್ನೇಹ ಎಷ್ಟರ ಮಟ್ಟಿಗಿದೆ ಎಂದರೆ ಒಂದನ್ನು ಬಿಟ್ಟು ಒಂದಿರಲಾಗದಷ್ಟು ಹೊಂದುಕೊಂಡುಬಿಟ್ಟಿವೆ ಆ ಬಾತುಕೋಳಿಗಳು. ಒಟ್ಟಾಗಿ ನಡೆದುಹೋಗುವಾಗ ಯಾವುದೇ ಬಾತುಕೋಳಿ ಕೊಂಚ ಹಿಂದಾದರೂ ಅದಕ್ಕೆಂದು ಕಾದು ಒಟ್ಟಿಗೆ ಪಯಣ ಮಾಡಿ ತಮ್ಮ ಗೆಳೆತನದ ಶಕ್ತಿಯನ್ನು ತೋರಿಸುತ್ತವೆ,

    ಹೌದು! ಚೀನಾದ ಪೀಪಲ್ಸ್​ ಡೈಲಿ ಹೆಸರಿನ ಯೂಟ್ಯೂಬ್​ ಚಾನೆಲ್​ ಇಂತಹ ಅದ್ಭುತ ವಿಡಿಯೋವನ್ನು ಶೇರ್​ ಮಾಡಿದೆ. ಆ ವಿಡಿಯೋದಲ್ಲಿ ಮುದ್ದಾದ ಬಾತುಕೋಳಿಗಳು ಒಂದಕ್ಕೊಂದು ಕಾದು ಒಟ್ಟಿಗೆ ನಡೆದುಹೋಗುವ ದೃಶ್ಯ ಸೆರೆಯಾಗಿದೆ. ಹಾಗೆ ಒಟ್ಟಿಗೆ ಹೋಗುವ ಆ ಬಾತುಕೋಳಿಗಳು ತಮ್ಮ ಈಜಾಟವನ್ನು ಮುಗಿಸಿ ವಾಪಾಸು ಬರುವಾಗಲೂ ಒಟ್ಟಿಗೆ ಬಂದು ತಮ್ಮ ತಮ್ಮ ಮನೆಗಳಿಗೆ ತೆರಳುವುದನ್ನು ನೋಡುವುದುಕ್ಕೆ ಒಂದು ಖುಷಿ ನೀಡುತ್ತದೆ.

    ಬಾತುಕೋಳಿಗಳ ಸ್ನೇಹವನ್ನು ತೋರಿಸುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ. ಮನುಷ್ಯರಲ್ಲೂ ಕಾಣದಂತ ಒಗ್ಗಟ್ಟು, ಸ್ನೇಹ ಇಲ್ಲಿ ಕಾಣುತ್ತಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

    ಅಕ್ರಮ ಸಂಬಂಧಕ್ಕಾಗಿ ಪ್ರಿಯತಮನನ್ನ ತನ್ನ ಮಗಳಿಗೇ ಮದುವೆ ಮಾಡಿಸಿದ ತಾಯಿ; ಡೆತ್​ನೋಟ್​ ಬರೆದಿಟ್ಟು ಮಗಳ ಆತ್ಮಹತ್ಯೆ

    ಡೆಡ್ಲಿ ಕರೊನಾ ಭೀತಿಯ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಕನ್ನಡಿಗ ರಾಹುಲ್​ ಹೇಳಿದ್ದು ಹೀಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts