

Vastu tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತ ಪರಿಶ್ರಮದಿಂದ ದುಡಿದು ಸಂಪತ್ತನ್ನು ಹೊಂದಲು ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ಅದು ಅವರಿಗೆ ವಿರುದ್ಧ ದಿಕ್ಕಿನಲ್ಲಿ ಇರುತ್ತದೆ. ಇನ್ನು ಎಷ್ಟೇ ಪರಿಶ್ರಮ ಹಾಕಿದರೂ, ಸಂಪತ್ತು ವೃದ್ಧಿಯಾಗದೆ ಇರುತ್ತದೆ. ಈ ರೀತಿಯಿಂದಾಗಿ ಹಲವಾರು ಜನರು ವಾಸ್ತುಗಳ ಮೊರೆ ಹೋಗುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಗಳಲ್ಲಿ ಈ ವಸ್ತುಗಳನ್ನು ಖರೀದಿಸಿಟ್ಟುಕೊಂಡರೆ, ಸಂಪತ್ತು ಸಮೃದ್ಧಿಯಾಗಿರುತ್ತದೆ.
ವಾಸ್ತು ಶಾಸ್ತ್ರದ ಪ್ರಕರ ನವಿಲು ಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ಇದು ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದದ್ದು ಹಾಗಾಗಿ ಇದನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಲಕ್ಷ್ಮೀ ದೇವಿಯು ವಾಸಿಸುತ್ತಾಳೆ ಎಂದು ನಂಬಲಾಗಿದೆ. ಇನ್ನು, ಇದು ನಿಮ್ಮ ಕುಟುಂಬವು ಸಂತೋಷದಿಂದ ಇರಲು ಸಾಧ್ಯವಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತುಳಸಿ ಗಿಡ ಇಡುವುದರಿಂದ ಸಕರಾತ್ಮಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮನೆಯ ಒಳಾಂಗಣ ಅಥವಾ ಮನೆಯ ಹೊರಾಂಗಣದಲ್ಲಿ ಇದನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಿರಿ. ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಸಮೃದ್ಧಿಯಾಗುತ್ತವೆ. ಹಾಗೇ, ತುಳಸಿ ಗಿಡ ಒಣಗದಂತೆ ಕಾಯ್ದುಕೊಳ್ಳಿ. ದೈನಂದಿನವಾಗಿ ತುಳಸಿ ಗಿಡಕ್ಕೆ ನೀರು ಹಾಕಿ, ದೀಪ-ಧೂಪಗಳಿಂದ ಪೂಜಿಸಿದರೆ ದುಷ್ಟಶಕ್ತಿಗಳು ದೂರವಾಗುತ್ತವೆ. ತುಳಸಿಯ ಸುತ್ತಲೂ ಶುಚಿತ್ವ ಕಾಪಾಡಿ, ಧನಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಲೋಹದ ಆಮೆ ಇಡುವುದರಿಂದ ಸ್ಥಿರತೆ, ದೀರ್ಘಾಯುಷ್ಯ ಮತ್ತು ಸಮೃದ್ಧಿಯನ್ನು ತರುತ್ತದೆ. ಆಮೆಯನ್ನು ಈಶಾನ್ಯ ದಿಕ್ಕಿನಲ್ಲಿ, ಶುದ್ಧವಾದ ಸ್ಥಳದಲ್ಲಿ ಇಡಬೇಕು. ಇದನ್ನು ಜಲಾಶಯದ ಬಳಿ ಅಥವಾ ಒಂದು ಲೋಹದ ತಟ್ಟೆಯಲ್ಲಿ ನೀರಿನೊಂದಿಗೆ ಇರಿಸಿದರೆ ಉತ್ತಮವಾಗಿರುತ್ತದೆ. ಹಾಗೆಯೇ ಹಿತ್ತಾಳೆ, ಕಂಚು ಅಥವಾ ಬೆಳ್ಳಿಯಿಂದ ಮಾಡಿದ ಆಮೆಯನ್ನು ಖರೀದಿಸಿ ಮನೆಯಲ್ಲಿ ಇಡುವುದು ಶುಭ ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬುದ್ಧನ ಪ್ರತಿಮೆ ಇಡುವುದು ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರಲು ಸಹಾಯ ಮಾಡುತ್ತದೆ. ಈ ಪ್ರತಿಮೆಯನ್ನು ಈಶಾನ್ಯ ದಿಕ್ಕಿನಲ್ಲಿ, ಸ್ವಚ್ಛವಾದ, ಶಾಂತವಾದ ಸ್ಥಳದಲ್ಲಿ ಇಡಬೇಕು. ಬುದ್ಧನ ಮುಖ ಒಳಗಿನ ಕಡೆಗೆ ಇರಬೇಕು, ಶಯನಗೃಹದಲ್ಲಿ ಇಡಬಾರದು. ಹಾಗೆಯೇ ಈ ಪ್ರತಿಮೆಯನ್ನು ಧ್ಯಾನ ಮಾಡುವ ಕೋಣೆ ಅಥವಾ ಪೂಜಾ ಸ್ಥಳದಲ್ಲಿ ಇರಿಸಿದರೆ ಸಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತೆಂಗಿನಕಾಯಿ ಇಡುವುದು ಸಮೃದ್ಧಿ, ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಈ ತೆಂಗಿನಕಾಯಿಯನ್ನು ಈಶಾನ್ಯ ದಿಕ್ಕಿನಲ್ಲಿ, ಪೂಜಾ ಸ್ಥಳದಲ್ಲಿ ಇರಿಸಬೇಕು. ಹಾಗೆಯೇ, ಈ ಕಾಯಿಯನ್ನು ಕುಂಕುಮ, ಅಕ್ಷತೆಯಿಂದ ಅಲಂಕರಿಸಿ ಇಡಬೇಕು. ಇನ್ನು ಇದನ್ನು ನಿಯಮಿತವಾಗಿ ಬದಲಾವಣೆ ಮಾಡಿ ಇಡುವುದರಿಂದ ಸಮೃದ್ಧಿಯಾಗುತ್ತದೆ.
ಲೋಹದ ಆಮೆಯಂತೆ, ಲೋಹದಿಂದ ಮಾಡಿದ ಆನೆಯನ್ನು ಸಹ ಮನೆಯೊಳಗೆ ಇರಿಸಬಹುದು. ಇದು ಸಕಾರಾತ್ಮಕ ಶಕ್ತಿಯನ್ನು ಹರಡುತ್ತದೆ ಮತ್ತು ದುಷ್ಟ ಶಕ್ತಿಗಳನ್ನು ನಾಶಪಡಿಸುತ್ತದೆ. ಹಾಗೆಯೇ ಈ ಪ್ರತಿಮೆಯು ಶಕ್ತಿ, ಸಮೃದ್ಧಿ ಮತ್ತು ಒಳ್ಳೆಯ ಅದೃಷ್ಟವನ್ನು ತರುತ್ತದೆ. ಆನೆಯನ್ನು ಪಶ್ಚಿಮ ಅಥವಾ ಈಶಾನ್ಯ ದಿಕ್ಕಿನಲ್ಲಿ ಒಳ ಮುಖವಾಗಿ ಇರಿಸಬೇಕು.
(ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.