ಕುಡಿದು ರೆಸ್ಟೋರೆಂಟ್​ನಲ್ಲಿ ಊಟ ಮಾಡಿ, ಪಾತ್ರೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಯುವಕರು; ಪೋಷಕರಿಗೆ 2.71 ಕೋಟಿ ದಂಡ ವಿಧಿಸಿದ ಕೋರ್ಟ್​| Fine

Untitled design (39)
Published on

StartFragment

Fine: ಕುಡಿದ ಮತ್ತಿನಲ್ಲಿ ರೆಸ್ಟೋರೆಂಟ್​ವೊಂದರಲ್ಲಿ ಊಟ ಮಾಡಿದ ಬಳಿಕ ಅಡುಗೆ ಬೆಯುಸುವ ಪಾತ್ರೆಯಲ್ಲಿ ಮೂತ್ರ ಮಾಡಿದ ಹಿನ್ನೆಲೆ ಇಬ್ಬರು 17 ವರ್ಷದ ಯುವಕರ ಪೋಷಕರಿಗೆ ಚೀನಾ ನ್ಯಾಯಾಲಯವೊಂದು ಹೋಟೆಲ್​ ಮಾಲೀಕರಿಗೆ 2.71 ಕೋಟಿ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಿದೆ. ಜೊತೆಗೆ ಹೋಟೆಲ್​ ಹೇಳಿದ ಪತ್ರಿಕೆಗಳಿಗೆ ಜಾಹೀರಾತು ನೀಡಿ ಕ್ಷಮೆ ಕೇಳುವಂತೆ ಆದೇಶ ನೀಡಿದೆ.

ಯುವಕರ ಕೃತ್ಯ,ಹೋಟೆಲ್​ ಟೇಬಲ್‌ವೇರ್‌ಗಳನ್ನು ಕಲುಷಿತಗೊಳಿಸುವುದು ಹಾಗೂ ಸಾರ್ವಜನಿಕ ಅಸಭ್ಯತೆ, ಆ  ಮೂಲಕ ಹೋಟೆಲ್​ ಖ್ಯಾತಿಯನ್ನು ಹಾಳು ಮಾಡಿದ್ದನ್ನು ನ್ಯಾಯಾಲಯ ಗುರುತಿಸಿದೆ. ಯುವಕರ ಕೃತ್ಯವನ್ನು ಖಂಡಿಸಿದ ನ್ಯಾಯಾಲಯ ಪೋಷಕರು ‘ತಮ್ಮ ಪಾಲನೆಯ ಕರ್ತವ್ಯವನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ’ ಎಂದು ಹೇಳಿ ಪರಿಹಾರವನ್ನು ಅವರೇ ಭರಿಸಬೇಕೆಂದು ಆದೇಶಿಸಿತು.

2025 ಫೆಬ್ರವರಿ 24ರಂದು ವು ಮತ್ತು ಟ್ಯಾಂಗ್ ಎಂಬ ಹೆಸರಿನ ಇಬ್ಬರು ಅಪ್ರಾಪ್ತ ಯುವಕರು, ಶಾಂಘೈನ ಹೈಡಿಲಾವೊ ಹಾಟ್‌ಪಾಟ್ ರೆಸ್ಟೋರೆಂಟ್‌ನಲ್ಲಿ ಮೂತ್ರ ವಿಸರ್ಜಿಸುತ್ತಿರುವ ವೀಡಿಯೊದಲ್ಲಿ ವೈರಲ್ ಆಗಿತ್ತು. ಕುಡಿದ ಅಮಲಿನಲ್ಲಿದ್ದ ಅಪ್ರಾಪ್ತ ಯುವಕರು ಮೇಜಿನ ಮೇಲೆ ಹತ್ತಿ, ಸಾಂಪ್ರದಾಯಿಕ ಚೀನೀ ಹಾಟ್‌ಪಾಟ್ ಶೈಲಿಯಲ್ಲಿ ಮಾಂಸ ಮತ್ತು ತರಕಾರಿಗಳನ್ನು ಬೇಯಿಸಲು ಬಳಸುವ ಸಾಮುದಾಯಿಕ ಬಿಸಿ ಮಾಡುವ ಪಾತ್ರೆಯನ್ನು ಉದ್ದೇಶಪೂರ್ವಕವಾಗಿ ಕಲುಷಿತಗೊಳಿಸಿರುವುದು ವಿಡಿಯೋದಲ್ಲಿ ಕಾಣಬಹುದು.

ನ್ಯಾಯಾಲಯ ನಿಗದಿ ಪಡಿಸಿದ ಪರಿಹಾರ ಮೊತ್ತದಲ್ಲಿ ಎಲ್ಲಾ ಮೂತ್ರ ವಿಸರ್ಜೆನೆಯಿಂದ ಕಲುಷಿತವಾದ ಪಾತ್ರೆ, ಟೇಬಲ್​ ನಾಶ, ಶುಚಿಗೊಳಿಸುವಿಕೆ, ಜೊತೆಗೆ ಮೂಲ ಬಿಲ್ ಮೊತ್ತದ ಹತ್ತು ಪಟ್ಟು ನಗದು ಪರಿಹಾರವನ್ನು ಒಳಗೊಂಡಿದೆ. ಸಿಚುವಾನ್ ಪ್ರಾಂತ್ಯದ ಜಿಯಾನ್ಯಾಂಗ್‌ನಲ್ಲಿ ತನ್ನ ಮೊದಲ ರೆಸ್ಟೋರೆಂಟ್‌ನಿಂದ ಹೈಡಿಲಾವ್, ಈಗ ಪ್ರಪಂಚದಾದ್ಯಂತ 1,000 ಕ್ಕೂ ಹೆಚ್ಚು ಸ್ಥಳಗಳಲ್ಲಿ ರೆಸ್ಟೋರೆಂಟ್ ತೆರೆದಿದೆ. ಗ್ರಾಹಕ ಸೇವೆ ಮತ್ತು ಕುಟುಂಬ ಸ್ನೇಹಿ ವಾತಾವರಣಕ್ಕೆ ಹೋಟೆಲ್​ ಹೆಸರುವಾಸಿಯಾಗಿದೆ. ಮಹಿಳೆಯರಿಗೆ ಉಚಿತ ಮ್ಯಾನಿಕ್ಯೂರ್ ಮತ್ತು ಮಕ್ಕಳು ಟೇಬಲ್‌ಗಾಗಿ ಕಾಯುತ್ತಿರುವಾಗ ಅವರಿಗೆ ಕ್ಯಾಂಡಿ ಫ್ಲೋಸ್‌ನಂತಹ ವಿಶಿಷ್ಟ ಸವಲತ್ತುಗಳನ್ನು ನೀಡುತ್ತದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net