ಬಿಹಾರ ಚುನಾವಣೆ; 6 ಸ್ಥಾನ ಬಿಟ್ಟುಕೊಟ್ರೆ ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲ; ಅಸಾದುದ್ದೀನ್ ಓವೈಸಿ| Asaduddin Owaisi

Untitled design (17)
Published on

StartFragment

Asaduddin Owaisi: ಮುಂಬುರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲ ನೀಡಲು ಸಿದ್ದವಿದೆ. ಆದರೆ 6 ಸ್ಥಾನಗಳನ್ನು ಬಿಟ್ಟುಕೊಡಬೇಕೆಂದು ಪಕ್ಷದ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಬುಧವಾರ(ಸೆ. 17) ಹೇಳಿದ್ದಾರೆ.

ಈ ಕುರಿತು ಎನ್​ಡಿಟಿವಿ ಜೊತೆ ಮಾತನಾಡಿರುವ ಅವರು, AIMIM ಇಂಡಿಯಾ ಮೈತ್ರಿಕೂಟ ಸೇರಲು ಸಿದ್ದವಾಗಿದೆ. ಆದ್ರೆ ಚುನಾವಣೆಯಲ್ಲಿ ಸ್ಪರ್ಧಿಸಲು 6 ಸ್ಥಾನಗಳನ್ನು ಬಿಟ್ಟುಕೊಡಬೇಕು. ಈಗಾಗಲೇ ಮೈತ್ರಿಗಾಗಿ ನಮ್ಮ ಪಕ್ಷದ ನಾಯಕರು ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಹೇಳಿದ್ದಾರೆ.

ಬಿಹಾರ ಚುನಾವಣೆಯಲ್ಲಿ ನಾವು ಸ್ಪರ್ಧಿಸಲು ಸಿದ್ದರಿದ್ದೇವೆ. ಇಂಡಿಯಾ ಕೂಟ ಅಧಿಕಾರಕ್ಕೆ ಬಂದ್ರೆ ನಮಗೆ ಸಚಿವ ಸ್ಥಾನ ಕೊಡಬೇಕಾಗಿಲ್ಲ. ಸೀಮಾಂಚಲ್ ಅಭಿವೃದ್ದಿ ಮಂಡಳಿಯನ್ನು ಸ್ಥಾಪಿಸಿ, ಅಭಿವೃದ್ಧಿಗೆ ಸಹಕರಿಸಿದ್ರೆ ಸಾಕು. ನಮ್ಮ ಪಕ್ಷವನ್ನು ಬಿಜೆಪಿಯ ಬಿ-ಟೀಮ್ ಎಂದು ಕರೆಯುತ್ತಾರೆ. ಆದರೆ ನಾವು 3 ಪತ್ರ ಬರೆದರೂ ಆರ್​ಜೆಡಿ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದಿದ್ದಾರೆ.

ಬಿಹಾರ ವಿಧಾನಸಭೆ ಎಂಐಎಂ ಶಾಸಕ ಅಖ್ತರುಲ್ ಇಮಾನ್ ಮಾತನಾಡಿ, ಎಐಎಂಐಎಂ ಪದೇ ಪದೇ ಇಂಡಿಯಾ ಕೂಟದ ನಾಯಕರನ್ನು ಸಂಪರ್ಕಿಸಿದೆ. ಆದರೆ ನಮಗೆ ಅವರು ಈ ಬಾರಿ ಚುನಾವಣೆಯಲ್ಲಿ ಎಂಐಎಂ ಸ್ಪರ್ಧಿಸಬಾರದು ಎನ್ನುತ್ತಿದ್ದಾರೆ. ನಮ್ಮ ನಾಲ್ವರು ಶಾಸಕರು ಆರ್​ಜೆಡಿ ಸೇರಿದ್ರೂ, ಅದನ್ನು ಮರೆತು ಮೈತ್ರಿಗೆ ಸಿದ್ದರಿದ್ದೇವೆ ಎಂದು ಹೇಳಿದರು.

2020ರ ಬಿಹಾರ ಚುನಾವಣೆಯಲ್ಲಿ ರಾಜಕೀಯವಾಗಿ ಸೂಕ್ಷ್ಮವಾಗಿರುವ ಸೀಮಾಂಚಲ್ ಪ್ರದೇಶದಲ್ಲಿ AIMIM ಐದು ಸ್ಥಾನಗಳನ್ನು ಗೆದ್ದು ಅದ್ಭುತ ಪ್ರದರ್ಶನ ನೀಡಿತ್ತು. ನಂತರ, ನಾಲ್ವರು ಶಾಸಕರು RJDಗೆ ಸೇರ್ಪಡೆಯಾದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net