ಶಿವಮೊಗ್ಗ: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ.
ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದರೂ ಅದರ ಬಿಸಿ ಕಡಿಮೆಯಾದಂತೆ ಕಾಣುತ್ತಿಲ್ಲ. ಇದೀಗ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ನಜ್ರುಲ್, ಅಬ್ರಾರ್ ಹಾಗೂ ಸಂಗಡಿಗ ಬಿಜೆಪಿಗೆ ಮತ ಹಾಕಿದ್ದಕ್ಕೆ ಕುಪಿತಗೊಂಡು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಆತನ ವಾಹನವನ್ನು ಜಖಂಗೊಳಿಸಿರುವ ಘಟನೆ ಶಿವಮೊಗ್ಗದ ಸೋಮಿನಕೊಪ್ಪ ಬಡಾವಣೆಯಲ್ಲಿ ನಡೆದಿದೆ.
ಬಿಜೆಪಿಗೆ ಮತ ನೀಡಿದ್ದಕ್ಕೆ ಹಲ್ಲೆ
ಗಾಯಾಳು ಆಟೋ ಚಾಲಕ ಹರೀಶ್ ರಾವ್ ಎಂದಿನಂತೆ ಕೆಲಸ ಮಾಡುತ್ತಿದ್ದ ವೇಳೆ ನಜ್ರುಲ್ ಅಲಿಯಾಸ್ ಡಬ್ಬಾ, ಅಬ್ರಾರ್ ಉರುಫ್ ಇಡ್ಲಿ, ಹಾಗೂ ಇನ್ನೋರ್ವ ಆರೋಪಿ ಇವರ ಬಳಿ ಬಂದು ಖ್ಯಾತೆ ತೆಗೆದಿದ್ದಾರೆ.
ಈ ವೇಳೆ ಆರೋಪಿಗಳು ಹರೀಶ್ಗೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ಹಾಕಿದ್ದೀಯಾ ಎಂದು ಕೇಳಿದ್ದಾರೆ. ಈ ವೇಳೆ ಸಂತ್ರಸ್ತ ತಾನು ಬಿಜೆಪಿಗೆ ವೋಟ್ ಮಾಡಿರುವುದಾಗಿ ಹೇಳಿದ್ಧಾನೆ.
ಇದಕ್ಕೆ ಕುಪಿತಗೊಂಡು ಆರೋಪಿಗಳು ಚಾಲಕನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ ಆಟೋವನ್ನು ರಾಡ್ನಿಂದ ಜಖಂಗೊಳಿಸಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆ ಶಿಕ್ಷಕನಿಂದ ಬಾಲಕಿಯರಿಗೆ ಕಿರುಕುಳ; ಆರೋಪಿ ಅರೆಸ್ಟ್, ಪ್ರಾಂಶುಪಾಲ ಅಮಾನತು
ಈಶ್ವರಪ್ಪ ಭೇಟಿ ಸಾಂತ್ವಾನ
ಘಟನೆ ನಡೆದ ಕೂಡಲ್ಲೇ ಜಖಂಗೊಂಡ ಆಟೋ ಸಮೇತ ಚಾಲಕ ಹರೀಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ದುರು ಸಲ್ಲಿಸಿದ್ದಾರೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ವೇಳೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹಾಗೂ ದೂರುದಾರ ಹರೀಶ್ ಎದುರಾಗಿದ್ದು ತನಗಾದ ಬಗ್ಗೆ ಹೇಳಿಕೊಂಡು ರಕ್ಷಣೆ ನೀಡುವಂತೆ ಕೋರಿ ಮಾಜಿ ಸಚಿವರ ಕಾಲಿಗೆ ಬಿದ್ದಿದ್ದಾನೆ.
ಆಟೋ ಚಾಲಕನ ಮನವಿಗೆ ಸ್ಪಂದಿಸಿದ ಕೆ.ಎಸ್. ಈಶ್ವರಪ್ಪ ಸಾಂತ್ವಾನ ಹೇಳಿದ್ದಾರೆ ಮತ್ತು 20,000 ಸಾವಿರ ರೂಪಾಯಿ ಪರಿಹಾರವನ್ನು ನೀಡಿದ್ದಾರೆ. ಕೂಡಲೇ ಜಿಲ್ಲಾ ಜಿಲ್ಲಾ ರಕ್ಷಣಾಧಿಕಾರಿಗಳ ಬಳಿ ಮಾತನಾಡಿ ಆಟೋ ಚಾಲಕನಿಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.