ರಾಧೆ ಶ್ಯಾಮ್​ಗೂ ಮಾಸ್ಕ್​: ಇದು ಯಾರು ಮಾಡಿದ ಕೆಲಸ ಗೊತ್ತೆ?

Untitled
Published on

ಪ್ರಭಾಸ್ ನಟನೆಯ ರಾಧೆ ಶ್ಯಾಮ್​ ಚಿತ್ರದ ಮೊದಲ ಲುಕ್​ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಫಸ್ಟ್​ಲುಕ್​ ಮೂಲಕವೇ ಸಖತ್​ ಸುದ್ದಿ ಸಹ ಮಾಡಿದೆ. ಟ್ವಿಟರ್​ನಲ್ಲಿಯೂ ಟ್ರೆಂಡ್​ ಆಗಿತ್ತು ರಾಧೆ ಶ್ಯಾಮ್​ ಪೋಸ್ಟರ್. ಇದೀಗ ಕರೊನಾ ಕಾರಣಕ್ಕೆ ಇದೇ ಸಿನಿಮಾ ಸದ್ದು ಮಾಡುತ್ತಿದೆ.

ಹೌದು, ಕರೊನಾ ಹಿನ್ನೆಲೆಯಲ್ಲಿ ಎಲ್ಲೆಡೆ ಮಾಸ್ಕ್​ ಕಡ್ಡಾಯ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು, ರಾಧೆ ಶ್ಯಾಮ್​ ಚಿತ್ರದ ಪೋಸ್ಟರ್​ಗೂ ಸಾಮಾಜಿಕ ಅಂತರ ಮತ್ತು ಮಾಸ್ಕ್​ ಧರಿಸಿ ಜಾಗೃತಿ ಮೂಡಿಸಿದ್ದಾರೆ ಆಸ್ಸಾಂ ಪೊಲೀಸರು.

ನಿಮ್ಮ ಪ್ರೀತಿ ಪಾತ್ರರಿಗೆ ಮಾಸ್ಕ್​ ಧರಿಸುವಂತೆ ಹೇಳಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ತಿಳಿಹೇಳಿ. ನಾವು ಪ್ರಭಾಸ್ ಮತ್ತು ಪೂಜಾ ಅವರಿಗೆ ಮಾಸ್ಕ್​ ಧರಿಸುವಂತೆ ಹೇಳಿದೆವು. ಆದರೆ ಆ ಕೆಲಸ ಈಡೇರಲಿಲ್ಲ. ಹಾಗಾಗಿ ಫೋಟೋಶಾಪ್​ ಮೂಲಕ ಎಡಿಟ್ ಮಾಡಿ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಆಸ್ಸಾಂ ಪೊಲೀಸ್ ಇಲಾಖೆ ಟ್ವಿಟರ್​​ನಲ್ಲಿ ಹೇಳಿಕೊಂಡಿದೆ.

ಅಂದಹಾಗೆ, ಪ್ರಭಾಸ್ ಅಭಿನಯದ `ರಾಧೇ ಶ್ಯಾಮ್’ ಚಿತ್ರದ ಚಿತ್ರೀಕರಣ ಲಾಕ್‍ಡೌನ್‍ಗೂ ಮುನ್ನವೇ ಪ್ರಾರಂಭವಾಗಿತ್ತು. ಇನ್ನೇನು ಚಿತ್ರೀಕರಣ ಮುಗಿದು, ಚಿತ್ರ ಇದೇ ವರ್ಷ ಬಿಡುಗಡೆಯಾಗಿ ಬಿಡುತ್ತದೆ ಎಂದು ಅವರ ಅಭಿಮಾನಿಗಳೆಲ್ಲಾ ಖುಷಿಯಾಗಿರುವಾಗಲೇ, ಲಾಕ್‍ಡೌನ್ ಬಂತು. ಆಗ ನಿಂತ ಚಿತ್ರೀಕರಣ, ಇನ್ನೂ ಶುರುವಾಗಿಲ್ಲ. ಇನ್ನೇನಿದ್ದರೂ ಚಿತ್ರ ಮುಂದಿನ ವರ್ಷವೇ ಗ್ಯಾರಂಟಿ ಎಂದು ಎಲ್ಲರೂ ಬೇಸರದಲ್ಲಿರುವಾಗಲೇ, ಚಿತ್ರತಂಡದವರು ಫಸ್ಟ್ ಲುಕ್​ ಬಿಡುಗಡೆ ಮಾಡಿ ಅಭಿಮಾನಿಗಳ ಮನಸ್ಸು ಖುಷಿಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net