

ನಟಿ ಕಂಗನಾ ರಣಾವತ್ ಸದ್ಯ ಬಾಲಿವುಡ್ನಲ್ಲಿ ನಡೆಯುತ್ತಿರುವ ನೆಪೋಟಿಸಂ ಚರ್ಚೆಯಲ್ಲಿ ಸಕ್ರಿಯರಾಗಿದ್ದಾರೆ. ಮಹೇಶ್ ಭಟ್ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಒಂದಾದ ಮೇಲೊಂದರಂತೆ ಕಮೆಂಟ್ ಮಾಡುತ್ತ ಪೂಜಾ ಭಟ್ ಮತ್ತು ಆಲಿಯಾ ಭಟ್ ಅವರನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಗದ್ದಲ ಗಲಾಟೆಯ ನಡೆವೆಯೂ ಕಂಗನಾ ರಣಾವತ್ ಇದೀಗ ಬೇರೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: ಕಂಗನಾ ವಿಷಯದಲ್ಲಿ ಉಲ್ಟಾ ಹೊಡೆದ ಅಧ್ಯಯನ್ …
ಹೌದು, ಕರಿಯರ್ನತ್ತಲೂ ಇದೀಗ ಮತ್ತೆ ಗಮನ ಹರಿಸಿದ್ದಾರೆ. ಸಿನಿಮಾಗಳ ಕಥೆ ಕೇಳುತ್ತಿದ್ದಾರೆ. ಸದ್ದಿಲ್ಲದೆ ಒಪ್ಪಿಕೊಂಡಿರುವ ಆ್ಯಕ್ಷನ್ ಸಿನಿಮಾ ‘ಧಾಕಡ್’ಗೆ ತಯಾರಿ ನಡೆಸಿದ್ದಾರೆ. ಮನೆಯಲ್ಲಿ ಆನ್ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ದೇಶಕರು ಮತ್ತು ಬರಹಗಾರರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.
ಈಗಾಗಲೇ ನೋಡಿರುವಂತೆ ಧಾಕಡ್ ಚಿತ್ರದ ಟೀಸರ್ನಲ್ಲಿ ಕಂಗನಾ ರಗಡ್ ಆಗಿ ಕಾಣಿಸಿದ್ದಾರೆ. ಕೈಯಲ್ಲಿ ಗನ್ ಹಿಡಿದು ಗುಂಡಿನ ಮಳೆ ಸುರಿಸಿದ್ದಾರೆ. ಹನುಕುವ ರಕ್ತವನ್ನೇ ರುಚಿಸುವ ಕಂಗನಾ, ಈ ಹಿಂದೆಂದೂ ಇಂಥ ಅವತಾರದಲ್ಲಿ ಕಾಣಿಸಿರಲಿಲ್ಲ. ಇದೀಗ ಅಂಥ ಒಂದು ಆ್ಯಕ್ಷನ್ ಅವತಾರದ ಪಾತ್ರವನ್ನು ನಿಭಾಯಿಸಲು ತಯಾರಿ ನಡೆಸಿದ್ದು, ಕಥೆಯನ್ನು ಅಂತಿಮ ಮಾಡಲಾಗುವ ಪ್ರಕ್ರಿಯೆ ನಡೆಯುತ್ತಿದೆ.
ಇದನ್ನೂ ಓದಿ: ಪೂರ್ಣಿಯಾದಲ್ಲಿ ರಸ್ತೆಗೆ ಸುಶಾಂತ್ ಹೆಸರು
ನಿರ್ದೇಶಕ ರಜನೀಶ್ ಘಾಯ್, ಸಂಭಾಷಣೆಕಾರ ರಿತೇಶ್ ಶಾ ಮತ್ತು ನಿರ್ಮಾಪಕ ಸೋಹೈಲ್ ಜತೆ ಸೇರಿ ಚರ್ಚೆ ನಡೆಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಶೀಘ್ರದಲ್ಲಿ ಚಿತ್ರದ ಶೂಟಿಂಗ್ಗೆ ಚಾಲನೆ ಕೊಡುವ ಸಾಧ್ಯತೆ ಇದೆ. (ಏಜೆನ್ಸೀಸ್)