

ದೇಶದೆಲ್ಲೆಡೆ ಕರೊನಾ ಪ್ರಕರಣಗಳು ದಿನೇದಿನೆ ಹೆಚ್ಚಳವಾಗುತ್ತಿವೆ. ಸಾವಿನ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿದೆ. ಸಿನಿಮಾ ಮಂದಿಗೂ ಕರೊನಾ ಗಂಟು ಬಿದ್ದಿದೆ. ಶೂಟಿಂಗ್ ಸಂದರ್ಭದಲ್ಲಿಯೇ ಪ್ರಕರಣಗಳು ಕಂಡು ಬಂದು, ಶೂಟಿಂಗ್ಗಳೇ ಸ್ಥಗಿತವಾದ ಉದಾಹರಣೆಗಳಿವೆ. ಇದೀಗ ಖ್ಯಾತ ನಟಿಯೊಬ್ಬರ ಇಡೀ ಕುಟುಂಬಕ್ಕೇ ಕರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಇದನ್ನೂ ಓದಿ: ಪೂರ್ಣಿಯಾದಲ್ಲಿ ರಸ್ತೆಗೆ ಸುಶಾಂತ್ ಹೆಸರು
ಹೌದು, ಬೆಂಗಾಲಿ ಮೂಲದ ನಟಿ ಕೋಯಲ್ ಮಲ್ಲಿಕ್ ಸೇರಿ ಅವರ ಹಿರಿಯ ನಟ ತಂದೆ ರಂಜಿತ್ ಮಲ್ಲಿಕ್, ತಾಯಿ ದೀಪಾ ಮಲ್ಲಿಕ್ ಮತ್ತು ಪತಿ ಸಿಸ್ಪಾಲ್ ಸಿಂಗ್ಗೂ ಕರೊನಾ ಪಾಸಿಟಿವ್ ಇರುವುದು ಖಚಿತವಾಗಿದ್ದು, ಇಡೀ ಕುಟುಂಬ ಸೆಲ್ಫ್ ಕ್ವಾರಂಟೈನ್ನಲ್ಲಿದೆ. ಈ ಬಗ್ಗೆ ಸ್ವತಃ ಕೋಯಲ್ ಟ್ವಿಟರ್ನಲ್ಲಿ ಅಧಿಕೃತವಾಗಿ ಹೇಳಿಕೊಂಡಿದ್ದು, ಆದಷ್ಟು ಬೇಗ ಗುಣಮುಖರಾಗಿ ಎಂದು ಸಾಕಷ್ಟು ಮಂದಿ ಟ್ವಿಟ್ ಮಾಡಿದ್ದಾರೆ.
ಅಚ್ಚರಿ ವಿಚಾರ ಏನೆಂದರೆ ಕಳೆದ ಮೇ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ್ದ ಕೋಯಲ್, ಕೋವಿಡ್ ನಡುವೆಯೂ ಮಗುವಿನ ಆರೈಕೆ ಮಾಡುತ್ತಿದ್ದಾರಾ ಅಥವಾ ಆ ಮಗುವನ್ನು ಸದ್ಯ ಪ್ರತ್ಯೇಕವಾಗಿರಿಸಿ ಆರೈಕೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ.
ಇದನ್ನೂ ಓದಿ: ತಾಪ್ಸೀ ಚಿತ್ರಕ್ಕೆ ಕೋವಿಡ್ ವಿಮೆ!
ಹಾಲಿವುಡ್ನ ಖ್ಯಾತ ನಟ ಟಾಮ್ ಹಾಂಕ್ಸ್ ಪತ್ನಿ ರಿಟಾ ವಿಲ್ಸನ್, ಬಾಲಿವುಡ್ನ ಕನ್ನಿಕಾ ಕಪೂರ್, ಕಿರಣ್ ಕುಮಾರ್, ಜೋಯಾ ಮೊರಾನಿ, ಇಂದಿರಾ ವರ್ಮಾ ದಕ್ಷಿಣ ಭಾರತದ ಹಲವು ಕಿರುತೆರೆ ಕಲಾವಿದರಿಗೂ ಕರೊನಾ ಸೋಂಕು ತಗುಲಿತ್ತು. (ಏಜೆನ್ಸೀಸ್)