More

    ತಾಪ್ಸೀ ಚಿತ್ರಕ್ಕೆ ಕೋವಿಡ್ ವಿಮೆ!

    ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಈಗಾಗಲೇ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಇದೀಗ ಹೊಸದಾಗಿ ಕೋವಿಡ್ ವಿಮೆ ಮಾಡಿಸಿಕೊಂಡೇ ಶೂಟಿಂಗ್​ನತ್ತ ತೆರಳಲು ನಿರ್ವಪಕರು ನಿರ್ಧರಿಸಿದ್ದಾರೆ! ಹೌದು, ಬಾಲಿವುಡ್ ನಟಿ ತಾಪ್ಸೀ ಪನ್ನು ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ಲೂಪ್ ಲಪೇಟಾ’ ಚಿತ್ರದ ನಿರ್ವಪಕರು ಶೂಟಿಂಗ್​ಗೆ ಸಿದ್ಧರಾಗಿದ್ದಾರೆ.

    ಈಗಾಗಲೇ ಗೋವಾ ಮತ್ತು ಮುಂಬೈನಲ್ಲಿ ಒಂದಷ್ಟು ಭಾಗದ ಚಿತ್ರೀಕರಣವನ್ನೂ ಮುಗಿಸಿಕೊಂಡಿದ್ದಾರೆ. ಇದೀಗ ಲಾಕ್​ಡೌನ್ ಕರೊನಾ ಕಾಟ ಹೆಚ್ಚಳದ ಹಿನ್ನೆಲೆಯಲ್ಲಿ ಇಡೀ ತಂಡಕ್ಕೆ ಕೋವಿಡ್ ವಿಮೆ ಮಾಡಿಸಲು ನಿರ್ಧರಿಸಿದ್ದು, ಆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ ನಿರ್ವಪಕ ಅತುಲ್ ಕಸ್ಬೇಕರ್. ಈ ಮೂಲಕ ಬಾಲಿವುಡ್​ನ ಮೊದಲ ಕೋವಿಡ್ ವಿಮೆಯುಳ್ಳ ಸಿನಿಮಾ ಎಂಬ ಖ್ಯಾತಿ ‘ಲೂಟ್ ಲಪೇಟಾ’ ಚಿತ್ರಕ್ಕೆ ಸಿಗಲಿದೆ.

    ಈ ವಿಮೆ ಜಾರಿಯಾದಲ್ಲಿ ಶೂಟಿಂಗ್ ಸಂದರ್ಭದಲ್ಲಿ ಯಾರಿಗಾದರೂ ಕೋವಿಡ್ ಪಾಸಿಟಿವ್ ಪತ್ತೆಯಾದರೆ, ಇಡೀ ತಂಡ ಕ್ವಾರಂಟೈನ್​ನಲ್ಲಿರಬೇಕಾಗುತ್ತದೆ. ಚಿತ್ರೀಕರಣಕ್ಕೂ ಬ್ರೇಕ್ ಹಾಕಬೇಕಾಗುತ್ತದೆ. ಆಗ ನಿರ್ವಪಕರಿಗಾಗುವ ನಷ್ಟವನ್ನು ಈ ಕೋವಿಡ್ ವಿಮೆ ತುಂಬಿಕೊಡಲಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಶೂಟಿಂಗ್​ಗೆ ನಿರ್ವಪಕ ಅತುಲ್ ಕಸ್ಬೇಕರ್ ಚಾಲನೆ ನೀಡಲಿದ್ದು, ಅದಕ್ಕೂ ಪೂರ್ವಭಾವಿಯಾಗಿ, ಸೆಟ್​ನಲ್ಲಿ ಯಾರೆಲ್ಲ ಇರಲಿದ್ದಾರೆ ಅವರೆಲ್ಲರ ಮಾಹಿತಿಯನ್ನು ಕಲೆಹಾಕಿ ವಿಮೆ ಕಂಪನಿಗೆ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. –ಏಜೆನ್ಸೀಸ್

    ವಿಕಾಸ್ ದುಬೆ ಪಾತ್ರ ಮಾಡ್ತಾರಾ ಮನೋಜ್? ಏನಿದು ಸುದ್ದಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts