ನಿಷೇಧಿತ ಸಂಘಟನೆಯಿಂದ ಬಾಂಬ್​ ಬೆದರಿಕೆ; ಮಾಹಿತಿ ನೀಡುವವರಿಗೆ ಭಾರೀ ಬಹುಮಾನ ಘೋಷಿಸಿದ ಪೊಲೀಸರು

blank

ಗುವಾಹಟಿ: ಅಸ್ಸಾಂನ ನಿಷೇಧಿತ ಸಂಘಟನೆಯಾದ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ-ಇಂಡಿಪೆಂಡೆಂಟ್ (ಉಲ್ಫಾ-I) ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯದ 24 ಸ್ಥಳಗಳಲ್ಲಿ ಬಾಂಬ್​ಗಳನ್ನು ಇರಿಸಿರುವುದಾಗಿ ಬೆದರಿಕೆ ಹಾಕಿದ ಕೂಡಲೇ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದರು. ಜತೆಗೆ ಬಾಂಬ್​ ಅನ್ನು ಸಿಂಪಡಿಸಿರುವ ಬಗ್ಗೆ ಮಾಹಿತಿ ನೀಡುವವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಒಂದೇ ಗಂಟೆಯಲ್ಲಿ 17 ಮಂದಿ ಮೇಲೆ ದಾಳಿ; ಬೀದಿನಾಯಿ ಹಾವಳಿಗೆ ಕರ್ಫ್ಯೂ ವಿಧಿಸಿಕೊಂಡ ಜನ

ಈ ತನಿಖೆಯಲ್ಲಿ ಮಾಹಿತಿಗಾಗಿ ಸಾರ್ವಜನಿಕರ ಬೆಂಬಲವನ್ನು ಕೋರುತ್ತಿದ್ದೇವೆ. ಬಾಂಬ್‌ಗಳನ್ನು ತಯಾರಿಸಿದ, ಸಾಗಿಸಲು ಮತ್ತು ಸಿಂಪಡಿಸಲು ಸಹಾಯ ಮಾಡಿದವರ ಬಗ್ಗೆ ಮಾಹಿತಿ ನೀಡುವವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಡಿಜಿಪಿ ಜಿ.ಪಿ.ಸಿಂಗ್​​ ತಿಳಿಸಿದ್ದಾರೆ. ಮಾಹಿತಿಯನ್ನು ಹಂಚಿಕೊಳ್ಳಲು ಪೊಲೀಸರು ವಾಟ್ಸ್​​ಆ್ಯಪ್​​​​ ಸಂಖ್ಯೆ ಹಾಗೂ ಸಾಮಾಜಿಕ ಜಾಲತಾಣದ ವಿವರಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಮಾಹಿತಿ ನೀಡುವವರ ಗುರುತನ್ನು ರಹಸ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.

ಗುವಾಹಟಿಯಲ್ಲಿ ಇಟ್ಟಿದ್ದ ಎಂಟು ಬಾಂಬ್​​ಗಳನ್ನು ಬಾಂಬ್ ಸ್ಕ್ವಾಡ್ ಪತ್ತೆ ಮಾಡಿದೆ. ಪ್ರಕರಣವನ್ನು ಭೇದಿಸುತ್ತೇವೆ ಎಂದು ನೂರರಷ್ಟು ವಿಶ್ವಾಸವಿದೆ. ಶಾಂತಿ ಕದಡುವ ಪ್ರಯತ್ನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಸ್ವಾತಂತ್ರ್ಯ ದಿನಾಚರಣೆಯಂದು ಸ್ಫೋಟಿಸುವುದಾಗಿ ನಿಷೇಧಿತ ಸಂಘಟನೆಯು ಹೇಳಿತ್ತು. ಬಳಿಕ ತಾಂತ್ರಿಕ ಸಮಸ್ಯೆಯಿಂದಾಗಿ ಬಾಂಬ್ ಸ್ಫೋಟ ಮಾಡಲು ಸಾಧ್ಯವಾಗಲಿಲ್ಲ ಎಂದು ಸಂಘಟನೆ ತಿಳಿಸಿದ್ದಾಗಿ ಹೇಳಿದರು.(ಏಜೆನ್ಸೀಸ್​​)

ಸಲ್ಮಾನ್​ ಖಾನ್​ ಮನೆ ಮೇಲೆ ಫೈರಿಂಗ್​; ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಕೊಟ್ಟ ಆರೋಪಿ

Share This Article

Curry Leaf Juice ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯ ರಸ ಕುಡಿಯಿರಿ..ಬೊಜ್ಜು ಕಡಿಮೆಯಾಗುತ್ತದೆ..

Curry Leaf Juice : ಕರಿಬೇವಿನ ಎಲೆಗಳನ್ನು ಆಯುರ್ವೇದದಲ್ಲಿ ಔಷಧಿ ಎಂದು ಪರಿಗಣಿಸಲಾಗಿದೆ. ವಿಶೇಷವೆಂದರೆ ಇಷ್ಟೆಲ್ಲಾ…

Health Tips : ನೀವು ಮಧ್ಯರಾತ್ರಿ ಎಚ್ಚರಗೊಳ್ಳುತ್ತೀರಾ? ಆರೋಗ್ಯ ಸಮಸ್ಯೆ ಇರೋದು ಪಕ್ಕಾ…

Health Tips : ಮನುಷ್ಯನಿಗೆ ಆಹಾರ ಮತ್ತು ನೀರು ಎಷ್ಟು ಮುಖ್ಯವೋ ನಿದ್ರೆಯೂ ಅಷ್ಟೇ ಮುಖ್ಯ…

‘ಗೋಲ್ಡನ್ ಮಿಲ್ಕ್’ ಮಾಡುವ ಸರಿಯಾದ ವಿಧಾನ ಇಲ್ಲಿದೆ; ಉತ್ತಮ ಆರೋಗ್ಯಕ್ಕಾಗಿ ಈ Recipe

ಒಂದು ಚಮಚ ಅರಿಶಿನವನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಅದು ದೇಹಕ್ಕೆ ವರದಾನವಾಗಿದೆ. ಅರಿಶಿನ ಹಾಲು ಅನೇಕ…