ಲಖನೌ: ನಾಯಿಯೊಂದು ಒಂದು ಘಂಟೆಯೊಳಗೆ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 17 ಮಂದಿ ಮೇಲೆ ದಾಳಿ ಮಾಡಿರುವ ಘಟನೆ ಉತ್ತರಪ್ರದೇಶದ ಗೋರಖ್ಪುರದಲ್ಲಿ ಬೆಳಕಿಗೆ ಬಂದಿದೆ. ಗೋರಖ್ಪುರದ ಆವಾಸ್ ವಿಕಾಸ್ ಕಾಲನಿಯ ಜನರು ಬೀದಿನಾಯಿಗಳ ದಾಳಿಗೆ ಭಯಗೊಂಡು ಮನೆಯಿಂದ ಹೊರಬಾರದೆ ತಮಗೆ ತಾವೇ ಕರ್ಫ್ಯೂ ವಿಧಿಸಿಕೊಂಡಿದ್ದಾರೆ. ಇತ್ತೀಚೆಗೆ ರಸ್ತೆಯಲ್ಲಿ ಓಡಾಡಲು ಕಳ್ಳರಿಗಿಂತ ಹೆಚ್ಚಾಗಿ ಬೀದಿ ನಾಯಿಗಳ ಭಯವೆ ಹೆಚ್ಚಾಗುತ್ತಿದೆ.
ಇದನ್ನು ಓದಿ: ಸಲ್ಮಾನ್ ಖಾನ್ ಮನೆ ಮೇಲೆ ಫೈರಿಂಗ್; ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟ ಆರೋಪಿ
ಯುವಕನೊಬ್ಬ(24) ತನ್ನ ಮನೆಯ ಹೊರಗೆ ಫೋನ್ನಲ್ಲಿ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬಂದ ಬೀದಿನಾಯಿಯೊಂದು ಅವರ ಮೇಲೆ ಹಾರಿದೆ. ನಾಯಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳು ನಾಯಿಯನ್ನು ತಳ್ಳುತ್ತಾ ಕಾಲಿನಿಂದ ಒದೆಯಲು ಪ್ರಯತ್ನಿಸುತ್ತಾನೆ. ಆದರೆ ನಾಯಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಕೆಳಗೆ ಬೀಳುತ್ತಾನೆ. ನಾಯಿ ಬೊಗಳುತ್ತಾ ಆತನ ಕಾಲಿಗೆ ಕಚ್ಚಿದೆ. ಬಳಿಕ ಮುಂದಕ್ಕೆ ಜಿಗಿದು ಆ ಯುವಕನ ಮುಖಕ್ಕೆ ಕಚ್ಚಿದೆ. ಸಂತ್ರಸ್ತ ಯುವಕನ ಹೆಸರು ಆಶಿಶ್ ಯಾದವ್. ಈ ಘಟನೆ ಬುಧವಾರ (ಆಗಸ್ಟ್ 14) ನಡೆದಿದ್ದು, ಆವಾಸ್ ವಿಕಾಸ್ ಕಾಲನಿಯಲ್ಲಿನ ಆಶಿಶ್ ಯಾದವ್ ಅವರ ಮನೆಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ನಾಯಿ ಯುವಕನ ಮೇಲೆ ಮಾಡಿದ ದಾಳಿಯನ್ನು ಹಾಗೂ ಆತನ ಬಾಯಿ, ಕಣ್ಣು, ತುಟಿಯಿಂದ ರಕ್ತಸ್ರಾವವಾಗುತ್ತಿರುವುದನ್ನು ಕಾಣಬಹುದಾಗಿದೆ.
ಅಷ್ಟಕ್ಕೆ ತನ್ನ ದಾಳಿಯನ್ನು ನಿಲ್ಲಿಸದ ಶ್ವಾನ, ಮನೆಯ ಗೇಟ್ ಬಳಿ ನಿಂತಿದ್ದ ಮತ್ತೊಬ್ಬ ಮಹಿಳೆ ಮೇಲೆ ಹೇರಗಿದೆ. ಆಕೆಯ ಮೊಣಕಾಲಿಗೆ ಕಚ್ಚಿದೆ. ಆದಾದ ಬಳಿಕ ಮನೆಯ ಹೊರಗೆ ಆಟವಾಡುತ್ತಿದ್ದ ಇಬ್ಬರು ಬಾಲಕಿಯರ ಮೇಲೂ ದಾಳಿ ಮಾಡಿದೆ. ಹೀಗೆ ಒಂದೇ ದಿನದಲ್ಲಿ 1 ಗಂಟೆಯೊಳಗೆ 17 ಜನರ ಮೇಲೆ ನಾಯಿಯೊಂದ ದಾಳಿ ನಡೆಸಿದೆ.
ನಾಯಿ ಕಚ್ಚಿದ ಬಳಿಕ ರೇಬಿಸ್ ಲಸಿಕೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಾಗ ಆಸ್ಪತ್ರೆಯಲ್ಲಿ ಶಾಟ್ ಮುಗಿದಿದೆ ಎಂದು ತಿಳಿಸಲಾಯಿತು ಎಂದು ಆಶಿಶ್ ತಂದೆ ವಿಜಯ್ ಯಾದವ್ ಹೇಳಿದ್ದಾರೆ.ಕಾಲನಿಯ ಸಂತ್ರಸ್ತರು ಬೀದಿ ನಾಯಿಗಳ ದಾಳಿಯ ಬಗ್ಗೆ ನಗರಸಭೆಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.(ಏಜೆನ್ಸೀಸ್)
ವಿಮಾನ ನಿಲ್ದಾಣದಲ್ಲಿ ಫ್ಲೋರಿನ್ ಸೋರಿಕೆ; ಇಬ್ಬರು ಸಿಬ್ಬಂದಿ ಅಸ್ವಸ್ಥ.. ಮುಂದುವರಿದ ಕಾರ್ಯಾಚರಣೆ