ಮುಂಬೈ: ಬಜರಂಗಿ ಭಾಯಿಜಾನ್ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ಏಪ್ರಿಲ್‌ನಲ್ಲಿ ಫೈರಿಂಗ್ ಮಾಡಿದ್ದ ಆರು ಆರೋಪಿಗಳಲ್ಲಿ ಒಬ್ಬನಾದ ವಿಕ್ಕಿ ಗುಪ್ತಾ, ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ವಿಡಿಯೋದಿಂದ ಪ್ರಭಾವಿತರಾಗಿ ಈ ಕೆಲಸ ಮಾಡಿದ್ದಾಗಿ ಹಾಗೂ ಸಲ್ಮಾನ್ ಖಾನ್ ಅವರಿಗೆ ಯಾವುದೇ ಹಾನಿ ಮಾಡಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ವಿಮಾನ ನಿಲ್ದಾಣದಲ್ಲಿ ಫ್ಲೋರಿನ್ ಸೋರಿಕೆ; ಇಬ್ಬರು ಸಿಬ್ಬಂದಿ ಅಸ್ವಸ್ಥ.. ಮುಂದುವರಿದ ಕಾರ್ಯಾಚರಣೆ
ಜಾಮೀನಿಗಾಗಿ ವಿಶೇಷ ನ್ಯಾಯಾಲಯದ ಮುಂದೆ ಹಾಜರಾದ ವಿಕ್ಕಿ ಗುಪ್ತಾ, ಈ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಅವರು ಭಾಗಿಯಾಗಿಲ್ಲ. ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಶೂಟ್ ಮಾಡುವಂತೆ ಯಾರು ನಮಗೆ ಹೇಳಿಲ್ಲ. 26 ವರ್ಷಗಳ ಹಿಂದೆ ಎರಡು ಕೃಷ್ಣಮೃಗಗಳನ್ನು ಕೊಂದ ಆರೋಪದ ಕೃತ್ಯಕ್ಕಾಗಿ ಸಲ್ಮಾನ್ ಖಾನ್ ಅವರನ್ನು ಹೆದರಿಸುವುದು ಮಾತ್ರ ನಮ್ಮ ಉದ್ದೇಶವಾಗಿತ್ತು ಎಂದು ವಿಕ್ಕಿ ಗುಪ್ತಾ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಲಾರೆನ್ಸ್ ಬಿಷ್ಣೋಯ್ ಅವರ ವಿಡಿಯೋ ನೋಡಿ ಪ್ರಭಾವಿತನಗಿದ್ದೇನೆ. ಅವರ ತತ್ವಗಳು ಹಾಗೂ ಭಗತ್ಸಿಂಗ್ ಅವರ ಅನುಯಾಯಿ ಎಂದು ಹೇಳಿಕೊಂಡಿದ್ದಾನೆ. ಲಾರೆನ್ಸ್ ಬಿಷ್ಣೋಯ್ ವಿಚಾರ ಈ ಹಿಂದೆ ವಿಕ್ಕಿ ಗುಪ್ತಾ ಜಾಮೀನು ಅರ್ಜಿಗೆ ಅಡೆತಡೆಯಾಗಿತ್ತು. ಏಕೆಂದರೆ ಅವರು ಹೊರಬಂದಾಗ ಲಾರೆನ್ಸ್ ಬಿಷ್ಣೋಯ್ ಅವರಿಗೆ ಪ್ರಕರಣದ ಬಗ್ಗೆ ತಿಳಿಸಬಹುದು ಮತ್ತು ಮಾಹಿತಿಯನ್ನು ಸೋರಿಕೆ ಮಾಡಬಹುದು ಎಂದು ಪ್ರಾಸಿಕ್ಯೂಷನ್ ಹೇಳಿತ್ತು. ಪ್ರಸ್ತುತ ಲಾರೆನ್ಸ್ ಬಿಷ್ಣೋಯ್ ತಿಹಾರ್ ಜೈಲಿನಲ್ಲಿದ್ದಾರೆ. ಲಾರೆನ್ಸ್ ಅವರನ್ನು ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ಗುಂಡು ಹಾರಿಸಿದ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ.
ಮೂರು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರುವ ವಿಕ್ಕಿ ಗುಪ್ತಾ ಸದ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ 1,735 ಪುಟಗಳ ಚಾರ್ಜ್‌ಶೀಟ್‌ನಲ್ಲಿ, ವಿಕ್ಕಿ ಗುಪ್ತಾ, ಸಾಗರ್‌ಕುಮಾರ್ ಪಾಲ್, ಸೋನುಕುಮಾರ್ ಬಿಷ್ಣೋಯ್, ಅನ್ಮೋಲ್ ಬಿಷ್ಣೋಯ್, ಮೊಹಮ್ಮದ್ ರಫೀಕ್ ಚೌಧರಿ ಮತ್ತು ಹರ್ಪಾಲ್ ಸಿಂಗ್ ಮತ್ತು ಅನುಜ್‌ಕುಮಾರ್ ಥಾಪನ್ ಸೇರಿದಂತೆ ಒಂಬತ್ತು ಜನರ ಹೆಸರನ್ನು ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್)
ಸೇತುವೆ ಹಾರಿ ಸೂಸೈಡ್ ಮಾಡಿಕೊಳ್ಳಲು ಮುಂದಾದ ಮಹಿಳೆ; ಕಾರು ಚಾಲಕನ ಸಮಯಪ್ರಜ್ಞೆಯಿಂದ ಉಳಿದ ಪ್ರಾಣ