More

  ಕಾವೇರಿ ವಿವಾದ; ಡಿ.ಕೆ. ಶಿವಕುಮಾರ್​ ರಾಜ್ಯದ ರೈತರ ಪಾಲಿಗೆ ವಿರೋಧಿ: ಅಶ್ವಥ್​ ನಾರಾಯಣ್​

  ಬೆಂಗಳೂರು: ರಾಜ್ಯದ ರೈತರ ಮನವಿಯನ್ನು ಕಡೆಗಣಿಸಿ ತಮಿಳುನಾಡಿಗೆ ಕಾವೇರಿ ನೀರನ್ನು ರಾಜ್ಯ ಸರ್ಕಾರ ಹರಿಬಿಟ್ಟಿದೆ, ಡಿಕೆಶಿ ಅವರು ರಾಜ್ಯದ ರೈತರ ಪಾಲಿಗೆ ವಿರೋಧಿ ಎಂದು ಮಾಜಿ ಸಚಿವ ಅಶ್ವಥ್​ ನಾರಾಯಣ್​ ಹೇಳಿದ್ದಾರೆ.

  ಇದನ್ನೂ ಓದಿ: ಸರ್ಕಾರದ ಜತೆ ಮಾತುಕತೆ ಭರವಸೆ

  ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ, “ಡಿ.ಕೆ. ಶಿವಕುಮಾರ್​ ರಾಜ್ಯದ ರೈತರ ಪಾಲಿಗೆ ವಿರೋಧಿ. ಕಾವೇರಿ ವಿಚಾರವಾಗಿ ನಮ್ಮ ರೈತರು ಕಷ್ಟದಲ್ಲಿದ್ದಾರೆ. ತಮಿಳುನಾಡಿನ ನಾಲ್ಕು ಅಣೆಕಟ್ಟುಗಳಲ್ಲಿ ನೀರು ಸಂಗ್ರಹವಾಗಿದ್ದರೂ ಸಹ ನಮ್ಮ ರೈತರ ಹಿತವನ್ನು ಕಡೆಗಣಿಸಿ ತಮಿಳುನಾಡಿಗೆ ‌ನೀರು ಹೊರಬಿಟ್ಟಿದ್ದಾರೆ” ಎಂದು ಹೇಳಿದ್ದಾರೆ.

  “ತಮಿಳುನಾಡಿನಲ್ಲಿ ನೈರುತ್ಯ ಮಾನ್ಸೂನ್ ಉತ್ತಮವಾಗಿದ್ದರೂ ಕೂಡ 15 ಸಾವಿರ‌ ಕ್ಯೂಸೆಕ್ ನೀರನ್ನು ಹರಿಬಿಟ್ಟಿದಾರೆ. ಸುಮಾರು‌ 60 ಟಿಎಂಸಿ ಯಷ್ಟು‌ ನೀರು ಹರಿಸಿದ್ದಾರೆ. ಇದನ್ನು ನೋಡಿದ್ರೆ, ರಾಜ್ಯ ಸರ್ಕಾರ I.N.D.I.A ಪರವಾಗಿ‌ ನಡೆದುಕೊಳ್ಳುವಂತೆ ತೋರುತ್ತಿದೆ. ಇದರ ವಿರುದ್ಧದ ಹೋರಾಟಕ್ಕೆ ಬಿಜೆಪಿ ಸನ್ನದ್ಧಗೊಂಡಿದೆ. ನಾಳೆ ಚಾಮರಾಜನಗರ, ಮೈಸೂರು, ಹಾಸನ, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳ ಸಭೆ ನಡೆಸಲಿದೆ” ಎಂದು ಹೇಳಿದರು.

  ಇದನ್ನೂ ಓದಿ: ಕೂಲ್​ ಕೂಲ್ ಆಗಿರುವ​​ ತೆಂಗಿನಕಾಯಿ ಮಿಲ್ಕ್‌ಶೇಕ್ ಮಾಡುವ ವಿಧಾನ ನಿಮಗಾಗಿ…

  “ಕೃಷಿ ಸಚಿವ ಚೆಲುವರಾಯಸ್ವಾಮಿ ರೈತರಿಗೆ ಖುಷ್ಕಿ ಬೆಳೆ ಬೆಳೆಯಿರಿ ಎಂದು ಹೇಳಿದ್ದಾರೆ. ಆದ್ರೆ, ಇತ್ತ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದೆ. ಇದರ ವಿರುದ್ಧ ಹೋರಾಟ ರೂಪಿಸುವ ಸಭೆ ಮಂಡ್ಯ ಬಿಜೆಪಿ ಕಚೇರಿಯಲ್ಲಿ ನಡೆಯಲಿದೆ” ಎಂದು ರಾಜ್ಯ ಸರ್ಕಾರದ ವಿರುದ್ಧ ಅಶ್ವಥ್ ನಾರಾಯಣ್​ ವಾಗ್ದಾಳಿ ನಡೆಸಿದರು.

  ‘ದಿ ಕೇರಳ ಸ್ಟೋರಿ’ ಖ್ಯಾತಿಯ ನಟಿ ಅದಾ ಶರ್ಮಾ ಮುಂದಿನ ಚಿತ್ರದ ಟೈಟಲ್​​ ರಿವೀಲ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts