'ದಿ ಕೇರಳ ಸ್ಟೋರಿ' ಖ್ಯಾತಿಯ ನಟಿ ಅದಾ ಶರ್ಮಾ ಮುಂದಿನ ಚಿತ್ರದ ಟೈಟಲ್​​ ರಿವೀಲ್​

f329b32c-45ce-4505-968a-23b3bb84e592
Published on

ಮುಂಬೈ: ಬಾಲಿವುಡ್​ ನಟಿ, 'ದಿ ಕೇರಳ ಸ್ಟೋರಿ' ಚಿತ್ರದ ನಾಯಕಿ, ಅದಾ ಶರ್ಮಾ ಅಭಿನಯದ ಹೊಸ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ಮತ್ತು ಟೈಟಲ್​ ಇಂದು ಅಧಿಕೃತವಾಗಿ ಅನಾವರಣಗೊಂಡಿದೆ.

ಅದಾ ಶರ್ಮಾ ನಟನೆಯ ಮುಂದಿನ ಸಿನಿಮಾದ ಟೈಟಲ್​ 'C.D' ಎಂದು ತಿಳಿಸಲಾಗಿದ್ದು, ಇದರೊಟ್ಟಿಗೆ ಅವರ ಲುಕ್ ಪೋಸ್ಟರ್ ಕೂಡ ಬಿಡುಗಡೆಗೊಂಡಿದೆ. ಸಿಡಿ ಎಂಬುದು ಕ್ರಿಮಿನಲ್​ ಅಥವಾ ಡೆವಿಲ್​ ಎಂಬ ಅರ್ಥವನ್ನು ನೀಡಿದೆ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ನಟಿ ಕೆಂಪು ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಫ್ರೇಮ್​ನಲ್ಲಿ ಅನೇಕ ಕೈಗಳು ಇರುವುದು ಕಂಡುಬಂದಿದೆ. ಈ ಮೂಲಕ ಇದು ಹಾರರ್​ ಜಾನರ್​​ ಎಂಬುದು ಸ್ಪಷ್ಟವಾಗಿದೆ.

ದಿ ಕೇರಳ ಸ್ಟೋರಿ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ ಅದಾ ಶರ್ಮಾ, ತಮ್ಮ ನಟನೆಗೆ ಸಿನಿಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆಯನ್ನು ಪಡೆದುಕೊಂಡರು. ಈ ಸಿನಿಮಾ ಅವರ ವೃತ್ತಿಜೀವನಕ್ಕೆ ಅತಿದೊಡ್ಡ ಹಿಟ್ ತಂದುಕೊಟ್ಟಿತು. ಸೈಕಲಾಜಿಕಲ್, ಹಾರರ್ ಥ್ರಿಲ್ಲರ್ ಜಾನರ್​ನಲ್ಲಿ ಮೂಡಿಬರಲು ಸಜ್ಜಾಗಿರುವ ಸಿಡಿ ಚಿತ್ರವನ್ನು ಸ್ಪಷ್ಟ ಕೃಷ್ಣ ಅನ್ನಮ್ ನಿರ್ದೇಶಿಸಿದ್ದಾರೆ ಮತ್ತು ಎಸ್‌ಎಸ್‌ಸಿಎಂ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ.

ಸದ್ಯ ಸಿಡಿ ಚಿತ್ರದ ಪೋಸ್ಟ್-ಪ್ರೊಡಕ್ಷನ್‌ನ ಕೆಲಸಗಳು ಅಂತಿಮ ಹಂತದಲ್ಲಿದ್ದು, ಶೀಘ್ರವೇ ರಿಲೀಸ್​ ದಿನಾಂಕ ಮತ್ತು ಉಳಿದ ಮಾಹಿತಿಯನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಲಿದೆ. ಚಿತ್ರದಲ್ಲಿ ರೋಹಿಣಿ, ಭರಣಿ ಶಂಕರ್, ರಮಣ ಭಾರ್ಗವ್ ಮತ್ತು ಮಹೇಶ್ ವಿಟ್ಟಾ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net