Ashish Vidyarthi : ಖಳ ನಾಯಕನಾಗಿ ತೆರೆಯ ಮೇಲೆ ಅಬ್ಬರಿಸುವ ಆಶಿಶ್ ವಿದ್ಯಾರ್ಥಿ ಅವಕಾಶಗಳ ಕೊರತೆಯಿಂದ ಸದ್ಯ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಆಶಿಶ್ ವಿದ್ಯಾರ್ಥಿ ಓರ್ವ ಆಹಾರಪ್ರಿಯ ಎಂಬುದು ಎಲ್ಲರಿಗೂ ತಿಳಿದಿದೆ. ಬಗೆಬಗೆಯ ಖಾದ್ಯಗಳನ್ನು ಸವಿಯುವುದರಲ್ಲಿ ಅವರ ಸದಾ ಮುಂದು.
ಆಶಿಶ್ ವಿದ್ಯಾರ್ಥಿ ಅವರು ತಮ್ಮ ಫುಡ್ ವ್ಲಾಗಿಂಗ್ ಮೂಲಕ ದೇಶದ ಪ್ರಸಿದ್ಧ ಖಾದ್ಯಗಳನ್ನು ಅನ್ವೇಷಿಸುವುದೇ ಅವರ ಕೆಲಸ. ಬಗೆ ಬಗೆಯ ಖಾದ್ಯಗಳನ್ನು ತಮ್ಮ ಅಭಿಮಾನಿಗಳಿಗೆ ಪರಿಚಯಿಸುತ್ತಾರೆ. ಇದರ ಭಾಗವಾಗಿ ಇತ್ತೀಚೆಗೆ, ಆಶಿಶ್ ವಿದ್ಯಾರ್ಥಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ನಟ ನಾನಾ ಪಾಟೇಕರ್ ಅವರೇ ಆಶಿಶ್‌ಗೆ ಅಡುಗೆ ಮಾಡಿ ಬಡಿಸಿದ್ದಾರೆ.
ವಿಡಿಯೋದಲ್ಲಿ ನಾನಾ ಪಾಟೇಕರ್ ಅವರು ಸಿನಿಮಾ ಶೂಟಿಂಗ್ ಸೆಟ್ನಲ್ಲಿ ಆಶಿಶ್ ವಿದ್ಯಾರ್ಥಿಗೆ ಆಮ್ಲೆಟ್ ಮಾಡಿ ಬಡಿಸಿದ್ದಾರೆ. ಪಾಟೇಕರ್ ಅವರು ಆಮ್ಲೆಟ್ ಮಾಡಿದ ವಿಧಾನಕ್ಕೆ ಆಶಿಶ್ ವಿದ್ಯಾರ್ಥಿ ಮನಸೋತಿದ್ದಾರೆ. ಒಂದು ಬದಿಯಲ್ಲಿ ಸುಟ್ಟ ಆಮ್ಲೆಟ್ ಅನ್ನು ಇನ್ನೊಂದು ಬದಿಗೆ ತಿರುಗಿಸಲು ಪಾಟೇಕರ್ ಅವರು ಒಂದು ತಟ್ಟೆಯನ್ನು ಬಳಸಿದರು.
ಮೊದಲು, ಆಮ್ಲೆಟ್ ಮಿಶ್ರಣವನ್ನು ಒಂದು ಪ್ಯಾನ್‌ನಲ್ಲಿ ಸುರಿದರು. ಅದು ಒಂದು ಬದಿಯಲ್ಲಿ ಸುಟ್ಟ ನಂತರ, ಪಾಟೇಕರ್ ಅವರು ಆಮ್ಲೆಟ್ ಅನ್ನು ತೆಗೆದುಕೊಂಡು ಒಂದು ತಟ್ಟೆಯಲ್ಲಿ ಇಟ್ಟರು. ಇದಾದ ನಂತರ ತಟ್ಟೆಯಲ್ಲಿದ್ದದ್ದನ್ನು ಮತ್ತೆ ಪ್ಯಾನ್‌ನಲ್ಲಿ ಇಟ್ಟರು. ಆಮ್ಲೆಟ್ ಒಂದು ಚೂರು ಮುರಿಯದಂತೆ ತಡೆಯಲು ನಾನಾ ಪಾಟೇಕರ್ ಅವರು ಈ ತಂತ್ರವನ್ನು ಬಳಸಿದರು. ಅದನ್ನು ನೋಡಿದ ಆಶಿಶ್ ವಿದ್ಯಾರ್ಥಿ ಒಂದು ಕ್ಷಣ ಆಶ್ಚರ್ಯಚಕಿತನಾದರು. ಮೊದಲಿಗೆ, ಅದೊಂದು ತಪ್ಪು ವಿಧಾನ ಎಂದು ಭಾವಿಸಿದ್ದರು. ಆದರೆ, ಕೊನೆಯಲ್ಲಿ ಅದೊಂದು ವಿಶಿಷ್ಟ ತಂತ್ರ ಎಂದು ಹೊಗಳಿರು.
ನಾನಾ ಪಾಟೇಕರ್ ಮಾಡಿದ ಆಮ್ಲೆಟ್ ತಿಂದು ತುಂಬಾ ಚೆನ್ನಾಗಿದೆ ಎಂದು ಆಶಿಶ್ ವಿದ್ಯಾರ್ಥಿ ಹೇಳಿದರು. ನಿಮ್ಮ ಕಾಳಜಿ, ಪ್ರೀತಿಗೆ ಮನಸೋತಿದ್ದೇನೆ ನಾನಾ ಎಂದು ಇನ್ಸ್ಟಾಗ್ರಾಂನಲ್ಲಿ ಆಶಿಶ್ ವಿದ್ಯಾರ್ಥಿ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಅಂದಹಾಗೆ ಆಶಿಶ್ ವಿದ್ಯಾರ್ಥಿ ಮೂಲತಃ ಬಾಲಿವುಡ್ನವರು. ಕನ್ನಡದಲ್ಲೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಕೆ47, ಕೋಟಿಗೊಬ್ಬ, ವಂದೇ ಮಾತರಂ, ನಂದಿ, ದುರ್ಗಿ, ಆಕಾಶ್, ಆ ದಿನಗಳು, ಪೊರ್ಕಿ ಹಾಗೂ ಬಚ್ಚನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. (ಏಜೆನ್ಸೀಸ್)
ಈ 3 ರಾಶಿಯವರು ಹಣಕ್ಕಿಂತಲೂ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs