More

    ‘ರಾಬರ್ಟ್​’ ನಾಯಕಿ ಹುಟ್ಟುಹಬ್ಬಕ್ಕೆ ಚಿತ್ರತಂಡದ ಗಿಫ್ಟ್​!

    ದರ್ಶನ್​ ಅಭಿನಯದ ‘ರಾಬರ್ಟ್​’ ಚಿತ್ರತಂಡದಿಂದ ಏನೋ ಬಿಡುಗಡೆಯಾಗಿ ಬಹಳ ದಿನಗಳಾದವು ಎಂದು ಅಭಿಮಾನಿಗಳು ಯೋಚಿಸುವಷ್ಟರಲ್ಲೇ, ಚಿತ್ರತಂಡದಿಂದ ಹೊಸದೊಂದು ಪೋಸ್ಟರ್​ ಬಿಡುಗಡೆಯಾಗಿದೆ. ಆದರೆ, ಈ ಬಾರಿ ಪೋಸ್ಟರ್​ ಬಿಡುಗಡೆಯಾಗಿರುವುದು ದರ್ಶನ್​ ಅವರದ್ದಲ್ಲ, ಚಿತ್ರದ ನಾಯಕಿ ಆಶಾ ಭಟ್​ ಅವರದ್ದು.

    ಇದನ್ನೂ ಓದಿ: ಫ್ಯಾಂಟಮ್​ಗೆ ನವನೀತಾ: ಚೊಚ್ಚಲ ಅವಕಾಶದಲ್ಲಿಯೇ ದೊಡ್ಡ ಪ್ರಾಜೆಕ್ಟ್​​​

    ಇಂದು ಆಶಾ ಭಟ್​ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬದ ಗಿಫ್ಟ್​ ಆಗಿ ಚಿತ್ರತಂಡದವರು ನಾಯಕಿಯ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ. ಇಂದು ಬೆಳಿಗ್ಗೆ ಸೋಷಿಯಲ್​ ಮೀಡಿಯಾ ಮೂಲಕ ಪೋಸ್ಟರ್ ಬಿಡುಗಡೆಯಾಗಿದ್ದು, ನಾಯಕಿಯ ಫಸ್ಟ್​ ಲುಕ್​ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಆಶಾ ಭಟ್​ ಅವರ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಿರುವ ಚಿತ್ರದ ನಿರ್ದೇಶಕ ತರುಣ್​ ಸುಧೀರ್​, ‘ಮೊದಲ ಚಿತ್ರದಲ್ಲೇ ಆಶಾ ಅದ್ಭುತ ಕೆಲಸ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಆಕೆಯ ಡ್ಯಾನ್ಸ್​ ಬಹಳ ಗಮನಸೆಳೆಯುತ್ತದೆ ಎಂದು ಹೇಳಿ, ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

    ಆಶಾ ಭಟ್​ ಅವರಿಗೆ ಇದು ಮೊದಲ ಚಿತ್ರವಾಗಿದ್ದು, ಇದಕ್ಕೂ ಮುನ್ನ ಅವರು ಮಾಡಲಿಂಗ್​ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಭದ್ರಾವತಿ ಮೂಲಕ ಆಶಾ, ‘ರಾಬರ್ಟ್​’ ಚಿತ್ರದಲ್ಲಿ ನಟಿಸುವ ಮುನ್ನ ವಿದ್ಯುತ್​ ಜಾಮ್ವಾಲ್​ ಅಭಿನಯದ ಬಾಲಿವುಡ್​ ಚಿತ್ರ ‘ಜಂಗ್ಲಿ’ಯಲ್ಲೂ ನಾಯಕಿಯಾಗಿ ಅಭಿನಯಿಸಿದ್ದರು.

    ಇದನ್ನೂ ಓದಿ: ಹಳೇ ಗಲ್ಲಿ ಹೊಸ ಕಿಚನ್

    ‘ರಾಬರ್ಟ್​’ ಚಿತ್ರದ ಕೆಲಸಗಳೆಲ್ಲಾ ಮುಗಿದಿದ್ದು, ಬಿಡುಗಡೆಗೆ ಕಾದಿದೆ. ಚಿತ್ರದಲ್ಲಿ ದರ್ಶನ್​, ಆಶಾ ಅಲ್ಲದೆ ವಿನೋದ್​ ಪ್ರಭಾಕರ್​, ಜಗಪತಿ ಬಾಬು ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದು, ಈಗಾಗಲೇ ‘ಶ್ರೀರಾಮ್​’ ಎಂಬ ಹಾಡು ಹಿಟ್​ ಆಗಿದೆ.

    ಗಾಂಜಾ ಇಲ್ಲದಿದ್ರೆ ನಿದ್ರೆ ಬರುತ್ತಿರಲಿಲ್ಲವಾ ರಾಗಿಣಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts