More

    ಫ್ಯಾಂಟಮ್​ಗೆ ನವನೀತಾ: ಚೊಚ್ಚಲ ಅವಕಾಶದಲ್ಲಿಯೇ ದೊಡ್ಡ ಪ್ರಾಜೆಕ್ಟ್​​​

    ಬೆಂಗಳೂರು: ಧಾರಾವಾಹಿ ಮೂಲಕವೇ ಗಮನಸೆಳೆದಿರುವ ನೀತಾ ಅಶೋಕ್, ಕಿರುಪರದೆ ಸರಿಸಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಚೊಚ್ಚಲ ಅವಕಾಶದಲ್ಲಿಯೇ ದೊಡ್ಡ ಪ್ರಾಜೆಕ್ಟ್​ನ ಭಾಗವಾಗಿದ್ದಾರೆ. ಹೌದು, ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ‘ಫ್ಯಾಂಟಮ್ ಸಿನಿಮಾದಲ್ಲಿ ನಿರೂಪ್ ಭಂಡಾರಿಗೆ ನಾಯಕಿಯಾಗಿದ್ದಾರೆ ನೀತಾ ಅಶೋಕ್.

    ಸುದೀಪ್ ನಾಯಕನಾಗಿ ನಟಿಸುತ್ತಿರುವ ‘ಫ್ಯಾಂಟಮ್, ಕೋವಿಡ್ ಬಳಿಕ ಶೂಟಿಂಗ್ ಶುರು ಆರಂಭಿಸಿದ ಕನ್ನಡದ ಮೊದಲ ಬಿಗ್ ಬಜೆಟ್ ಸಿನಿಮಾ. ಹೈದರಾಬಾದ್​ನ ಸ್ಟುಡಿಯೋದಲ್ಲಿ ನಿರ್ವಿುಸಲಾಗಿರುವ ಸೆಟ್​ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಅದರಲ್ಲಿ ನೀತಾ ಅಶೋಕ್ ಸಹ ಪಾಲ್ಗೊಂಡಿದ್ದಾರೆ.

    ನೀತಾಗೆ ‘ಫ್ಯಾಂಟಮ್ ಮೊದಲ ಚಿತ್ರ ಇರಬಹುದು. ಆದರೆ, 2014ರಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟು ಕೆಲವು ವರ್ಷಗಳನ್ನು ಕಳೆದಿದ್ದಾರೆ ಅವರು. ಆ ಅನುಭವವನ್ನು ‘ವಿಜಯವಾಣಿ’ ಜತೆಗೆ ಹಂಚಿಕೊಂಡಿರುವ ಅವರು, ‘ಈ ಚಿತ್ರಕ್ಕೂ ಮೊದಲು ‘ಯಶೋದೆ’, ‘ನಾ ನಿನ್ನ ಬಿಡಲಾರೆ’, ‘ನೀಲಾಂಬರಿ’ ಧಾರಾವಾಹಿಯಲ್ಲಿ ನಟಿಸಿದ್ದೇನೆ. ಹಿಂದಿಯಲ್ಲಿ 86 ಏಪಿಸೋಡ್​ಗಳ ಪ್ರಾಜೆಕ್ಟ್​ನಲ್ಲಿಯೂ ನಾನಿದ್ದೆ. ಅದರ ಆಧಾರದ ಮೇಲೆಯೇ ಈ ‘ಫ್ಯಾಂಟಮ್ ಚಿತ್ರಕ್ಕೆ ಆಯ್ಕೆ ಆಗಿದ್ದೇನೆ. ನನಗಿಲ್ಲಿ ನಿರೂಪ್ ಭಂಡಾರಿ ಜೋಡಿಯಾಗಿದ್ದಾರೆ. ಪನ್ನಾ ಹೆಸರಿನ ಪಾತ್ರ ನಿಭಾಯಿಸುತ್ತಿದ್ದೇನೆ’ ಎನ್ನುತ್ತಾರವರು.

    ಅಂದಹಾಗೆ, ಈ ಚಿತ್ರದಲ್ಲಿ ಅವರ ಪಾತ್ರವೂ ಅಷ್ಟೇ ವಿಶೇಷವಾಗಿದೆಯಂತೆ. ‘ಪಟಪಟ ಅಂತ ಮಾತನಾಡುವ, ಎಲ್ಲವನ್ನು ಕೌತುಕದ ದೃಷ್ಟಿಯಿಂದಲೇ ನೋಡುವ ಮತ್ತು ಆಧುನಿಕ ಕಾಲಘಟ್ಟದ ಮಾಡರ್ನ್ ಹುಡುಗಿಯಾಗಿ ನಾನು ಕಾಣಿಸಿಕೊಂಡಿದ್ದೇನೆ’ ಎನ್ನುವ ನೀತಾ, ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಬಗ್ಗೆಯೂ ಹೇಳಿಕೊಂಡಿದ್ದಾರೆ. ‘ಚಿತ್ರಕ್ಕೆ ಆಯ್ಕೆ ಆದ ಬಳಿಕ, ಲುಕ್ ವಿಚಾರದಲ್ಲಿಯೇ ನಿರ್ದೇಶಕರು ಮತ್ತು ಸುದೀಪ್ ಅವರು ತುಂಬ ತಲೆ ಕೆಡಿಸಿಕೊಂಡಿದ್ದರು. ಈ ಹಿಂದೆ ಕಂಡಿದ್ದ ನೀತಾ ಕಾಣಲೇಬಾರದು, ಹೊಸ ಅವತಾರದಲ್ಲಿ ಕಾಣಿಸಬೇಕು ಎಂದಿದ್ದರು. ಅದರಂತೆ ಸಾಕಷ್ಟು ಲುಕ್ ಟೆಸ್ಟ್​ಗಳನ್ನೂ ಮಾಡಲಾಯಿತು. ಒಟ್ಟಿನಲ್ಲಿ ಮೊದಲ ಸಿನಿಮಾದಲ್ಲಿಯೇ ಭಿನ್ನ ಪಾತ್ರದ ಜತೆಗೆ ದೊಡ್ಡ ತಂಡದ ಭಾಗವಾಗಿದ್ದಕ್ಕೆ ಖುಷಿ ಇದೆ’ ಎಂಬುದು ಅವರ ಮಾತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts