More

    ಗಾಂಜಾ ಇಲ್ಲದಿದ್ರೆ ನಿದ್ರೆ ಬರುತ್ತಿರಲಿಲ್ಲವಾ ರಾಗಿಣಿಗೆ?

    ಡ್ರಗ್ಸ್​ ವಿಷಯದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ, ಒಂದಿಷ್ಟು ಸ್ಪೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಸಿಬಿ ಮೂಲಗಳ ಪ್ರಕಾರ, ರಾಗಿಣಿ ತಮಗೆ ಗಾಂಜಾ ಇಲ್ಲದಿದ್ದರೆ ರಾತ್ರಿ ನಿದ್ದೆಯೇ ಬರುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರಂತೆ.

    ಇದನ್ನೂ ಓದಿ: ಪೋಷಕರನ್ನು ನೆನೆದು ಕಣ್ಣೀರು ಹಾಕಿದರಂತೆ ರಾಗಿಣಿ

    ಡ್ರಗ್ಸ್​ ಮಾಫಿಯಾ ಸಂಬಂಧ ರಾಗಿಣಿ ಸ್ನೇಹಿತ ರವಿಶಂಕರ್​ನನ್ನು ಬುಧವಾರ ಬಂಧಿಸಿದ್ದ ಪೊಲೀಸರು ಆತನನ್ನು ಸಾಕಷ್ಟು ವಿಚಾರಣೆ ಮಾಡಿದ್ದರು. ವಿಚಾರಣೆ ವೇಳೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದ ಸಿಸಿಬಿ ಪೊಲೀಸರು, ಗುರುವಾರ ಬೆಳಿಗ್ಗೆ ಯಲಹಂಕದ ಜ್ಯುಡಿಷಿನಲ್‌ ಲೇಔಟ್​ನಲ್ಲಿರುವ ರಾಗಿಣಿಯವರ ಅಪಾರ್ಟ್ಮೆಂಟ್​ಗೆ ಸರ್ಚ್​​ ವಾರೆಂಟ್​ನೊಂದಿಗೆ ತೆರಳಿ ಶೋಧಕಾರ್ಯ ನಡೆಸಿದ್ದರು. ಆ ನಂತರ ಅವರನ್ನು ಸಿಸಿಬಿ ಕಚೇರಿಗೆ ಕರೆತಂದು ಅವರನ್ನು ವಿಚಾರಣೆಗೆ ಒಳಪಡಿಸಿ, ರಾತ್ರಿ ಬಂಧಿಸಿದ್ದರು.

    ವಿಚಾರಣೆ ವೇಳೆ, ರಾಗಿಣಿ ಹಲವು ವಿಷಯಗಳನ್ನು ಹೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ, ತಾವು ಗಾಂಜಾ ಹಾಗೂ ಹೈ ಎಂಡ್ ಡ್ರಗ್ ಎರಡೂ ಸೇವಿಸುತ್ತಿದ್ದೆ ಎಂದು ರಾಗಿಣಿ ಹೇಳಿಕೊಂಡಿದ್ದಾರಂತೆ. ಅಷ್ಟೇ ಅಲ್ಲ, ಗಾಂಜಾ ಇಲ್ಲದೇ ಹೋದರೇ ನಿದ್ದೆ ಬರ್ತಿರ್ಲಿಲ್ಲ ಎಂದು ಅವರು ಹೇಳಿದ್ದಾರಂತೆ.

    ತಾವು ಅಡಿಕ್ಟ್​​ ಆಗಿದ್ದರೂ, ಯಾವತ್ತೂ ಹಣಕ್ಕೆ ಮಾರುತ್ತಿರಲಿಲ್ಲ ಎಂದು ರಾಗಿಣಿ ಹೇಳಿದ್ದಾರೆ ಎಂದು ಸಿಸಿಬಿ ಮೂಲಗಳು ಮಾಹಿತಿ ನೀಡಿವೆ.

    ಇದನ್ನೂ ಓದಿ: ರಾಗಿಣಿ ನಂಟೇನು? ಮುಂದೇನು ನಡೆಯಲಿದೆ?

    ಡ್ರಗ್ಸ್​ ವಿಷಯದಲ್ಲಿ ನಟಿ ರಾಗಿಣಿ ಅವರನ್ನು ಗುರುವಾರ ರಾತ್ರರ ಬಂಧಿಸಿರುವ ಸಿಸಿಬಿ ಪೊಲೀಸರು, ನಂತರ ಬೌರಿಂಗ್​ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ. ಆ ನಂತರ ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ಇಂದು ರಾಗಿಣಿ ಅವರನ್ನು ಇನ್ನಷ್ಟು ವಿಚಾರಣೆ ಮಾಡಲಾಗುತ್ತದೆ.

    ‘ತುಪ್ಪ’ದ ಬೆಡಗಿ ರಾಗಿಣಿಗೆ ಸೊಳ್ಳೆ ಕಾಟವಂತೆ! ಹೀಗಿತ್ತು ಬಂಧನದ ಮೊದಲ ರಾತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts