ನವದೆಹಲಿ: ಕಾಂಗ್ರೆಸ್ ಜತೆ ಎಎಪಿ ಮೈತ್ರಿ ಶಾಶ್ವತವಲ್ಲ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎರಡು ಪಕ್ಷಗಳು ಒಗ್ಗೂಡಿದವು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಎಎಪಿಯು ಕಾಂಗ್ರೆಸ್ ಜತೆ ಶಾಶ್ವತ ದಾಂಪತ್ಯದಲ್ಲಿಲ್ಲ. ಸದ್ಯಕ್ಕೆ ಬಿಜೆಪಿಯನ್ನು ಸೋಲಿಸುವುದು. ಮತ್ತು ಪ್ರಸ್ತುತ ಆಡಳಿತದ ಸರ್ವಾಧಿಕಾರ ಮತ್ತು ಗೂಂಡಾಗಿರಿಯನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆ. ದೇಶವನ್ನು ಉಳಿಸುವುದು ಮುಖ್ಯ, ಬಿಜೆಪಿಯನ್ನು ಸೋಲಿಸಲು ಮತ್ತು ಒಬ್ಬ ಅಭ್ಯರ್ಥಿಯನ್ನು ಹಾಕಲು ಮೈತ್ರಿ ಅಗತ್ಯವಿದ್ದಲೆಲ್ಲಾ ಎಎಪಿ ಮತ್ತು ಕಾಂಗ್ರೆಸ್ ಒಂದುಗೂಡಿವೆ. ಪಂಜಾಬ್‌ನಲ್ಲಿ ಬಿಜೆಪಿಗೆ ಯಾವುದೇ ಅಸ್ತಿತ್ವವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಅಲ್ಲದೇ, ಪಂಜಾಬ್‌ನಲ್ಲಿ ಲೋಕಸಭೆ ಚುನಾವಣೆಯ ಮತದಾನಕ್ಕೆ ಮೂರು ದಿನಗಳು ಬಾಕಿ ಇದ್ದು, ಈ ಸಮಯದಲ್ಲಿ ಜೂನ್ 04 ರಂದು ದೊಡ್ಡ ಆಶ್ಚರ್ಯ ಕಾದಿದೆ. ಪ್ರತಿಪಕ್ಷವಾದ ಭಾರತ ಬಣ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್; 28 ಮಂದಿ ಸಾವು, 20ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ
ಇನ್ನು ಮದ್ಯ ನೀತಿ ಪ್ರಕರಣದಲ್ಲಿ ತಮ್ಮ ಬಂಧನಕ್ಕೆ ಕುರಿತಂತೆ ಮಾತನಾಡಿ, “ನಾನು ಹೆದರುವುದಿಲ್ಲ ಮತ್ತು ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ನಾನು ಮತ್ತೆ ಜೈಲಿಗೆ ಹೋಗುವುದು ಸಮಸ್ಯೆಯಲ್ಲ. ಈ ದೇಶದ ಭವಿಷ್ಯವು ಅಪಾಯದಲ್ಲಿದೆ. ಅವರು ನನ್ನನ್ನು ಎಷ್ಟು ದಿನ ಬೇಕಾದರೂ ಜೈಲಿನಲ್ಲಿ ಇಡಲಿ, ನಾನು ಹೆದರುವುದಿಲ್ಲ. ಬಿಜೆಪಿ ಇದನ್ನು ಬಯಸುತ್ತಿದ್ದು, ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಸದ್ಯ ಮಧ್ಯಂತರ ಜಾಮೀನಿನ ಅವಧಿಯನ್ನು ಏಳು ದಿನಗಳ ಕಾಲ ವಿಸ್ತರಿಸುವಂತೆ ಅರವಿಂದ್ ಕೇಜ್ರಿವಾಲ್ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅರವಿಂದ್ ಕೇಜ್ರಿವಾಲ್ ಅವರು ಜೂನ್ 01 ರವರೆಗೆ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜೂನ್ 2 ರಂದು ಅವರು ತಿಹಾರ್ ಜೈಲಿನಲ್ಲಿ ಶರಣಾಗಬೇಕಾಗುತ್ತದೆ.