ಈಕೆ ವಯಸ್ಸು 24 ಎಂದುಕೊಂಡ್ರೆ ಅದು ನಿಮ್ಮ ತಪ್ಪು; ಯಾಕೆಂದ್ರೆ ಈಕೆ ವಯಸ್ಸು 74

Wera Wang

ನವದೆಹಲಿ: ಮನುಷ್ಯ ಬೆಳೆದಂತೆ ವಯಸ್ಸು ಆಗುವುದು ಸಹಜ. ಅದು ಒಂದು ಜೀವನದ ಪ್ರಕ್ರಿಯೆ ಆಗಿದೆ. ಇನ್ನು ಇಂದಿನ ಆಧುನಿಕ ಆಹಾರ ಪದ್ದತಿಗೆ, ಎಲ್ಲರಿಗೂ ಬೇಗನೆ ವಯಸ್ಸಾದಂತೆ ಆಗುತ್ತಿರುವುದು ಸರ್ವೆ ಸಾಮಾನ್ಯವಾದ ವಿಷಯವಾಗಿದೆ. ಆದರೆ ಇನ್ನು ಕೆಲವರಿಗೆ 60 ವರ್ಷ ವಯಸ್ಸಾದರೂ ಚಿರ ಯುವಕರಂತೆ ಕಾಣುತ್ತಾರೆ ಮತ್ತು ಯಾವಾಗಲೂ ಆ್ಯಕ್ಟಿವ್​ ಆಗಿರುತ್ತಾರೆ. ವಯಸ್ಸಾಗುವಿಕೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತಿಗೆ ಮಹಿಳೆಯೊಬ್ಬರು ಜೀವಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸೌಂಡ್​ ಮಾಡುತ್ತಿದ್ದಾರೆ.

ಅಮೆರಿಕಾದ ಖ್ಯಾತ ಡಿಸೈನರ್​​ ವೆರಾ ವಾಂಗ್​ ಅವರ ಇತ್ತೀಚಿನ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಅವರಿಗೆ 74 ವರ್ಷ ವಯಸ್ಸಾಗಿದ್ದು, 20 ಚೆಲುವೆಯಂತೆ ಫೋಸ್​ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರನ್ನು ನಿಬ್ಬೆರಗಾಗಿಸಿದೆ.

Wera Wang

ಇದನ್ನೂ ಓದಿ: ಅಂದು ನಾವು​ ಒಪ್ಪಂದ ಉಲ್ಲಂಘಿಸಿದ ಪರಿಣಾಮ ಕಾರ್ಗಿಲ್​ ಯುದ್ಧವಾಯಿತು: ಮಾಜಿ ಪ್ರಧಾನಿ ನವಾಜ್​ ಷರೀಫ್

ವೈರಲ್​ ಆಗಿರುವ ಫೋಟೋ ನೋಡುವುದಾದರೆ ಬಿಳಿ ಮೊನೊಕಿನಿಯನ್ನು ಧರಿಸಿರುವ ವೆರಾ ವಾಂಗ್​ ಪೂಲ್​ನ ಬದಿಯಲ್ಲಿ ಹಾಯಾಗಿ ಕುಳಿತು ಫೋಟೋಗೆ ಫೋಸ್​ ಕೊಟ್ಟಿರುವುದನ್ನು ನೋಡಬಹುದಾಗಿದೆ. ಇವರ ಫೋಟೋಗಳು ಸಖತ್​ ವೈರಲ್​ ಆಗಿದ್ದು, ಇಳಿವಯಸ್ಸಿನಲ್ಲೂ ಯುವತಿಯಂತೆ ಕಾಣುತ್ತೀರಲ್ಲಾ ನಿಮ್ಮ ಆರೋಗ್ಯದ ಗುಟ್ಟೇನು ಎಂದು ಹಲವರು ಕಮೆಂಟ್​ಗಳ ಮೂಲಕ ಕೇಳಿದ್ದಾರೆ.

ಫ್ಯಾಸನ್​ ಜಗತ್ತಿನಲ್ಲಿ ತಮ್ಮ ವಿನ್ಯಾಸ ಮೂಲಕದ ಹೆಚ್ಚು ಖ್ಯಾತಿ ಪಡೆದಿರುವ ವೆರಾ ವಾಂಗ್​ ಅವರು, ಚಿಕ್ಕ ವಯಸ್ಸಿನಿಂದಲೇ ಫ್ಯಾಷನ್​ ಲೋದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದ್ದಾರೆ. ನಾನು ಯೌವನದ ಬಗ್ಗೆ ಎಂದಿಗೂ ಯೋಚಿಸಲಿಲ್ಲ, ಬಹುಶಃ ನಾನು ಪ್ರತಿದಿನ ವಿಶ್ವದ ಅತ್ಯಂತ ಸುಂದರ ಮಹಿಳೆಯರೊಂದಿಗೆ ಕೆಲಸ ಮಾಡುತ್ತೇನೆ. ಹೀಗಾಗಿ ನನಹೆ ಎಷ್ಟೇ ವಯಸ್ಸಾದರೂ ವಯಸ್ಸಾದಂತೆ ಕಾಣುವುದಿಲ್ಲ ಎಂದು ಇತ್ತೀಚಿಗೆ ನೀಡಿದ ಸಂದರ್ಶ ಒಂದರಲ್ಲಿ ಹೇಳಿದ್ದರು.

Share This Article

ಚಳಿಗಾಲದಲ್ಲಿ ಹಸಿ ಶುಂಠಿಯ ಪ್ರಯೋಜನಗಳು ನಿಮಗೆ ತಿಳಿದಿದೆಯೇ? Health Benefits of Ginger

Health Benefits of Ginger  : ಶುಂಠಿಯು ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ ಎಂದು ನಮಗೆಲ್ಲರಿಗೂ…

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…