ವಿರಾಟ್​ ಕೊಹ್ಲಿ ಕುರಿತು ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಅಂಬಾಟಿ ರಾಯುಡು!

Virat Rayudu
Published on

ನವದೆಹಲಿ: ಐಪಿಎಲ್​ ಶುರುವಾದಾಗಿನಿಂದಲೂ ಹಿಡಿದು ಮುಗಿಯುವವರೆಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ವಿರಾಟ್​ ಕೊಹ್ಲಿಯನ್ನು ಟೀಕಿಸುತ್ತ ತೀವ್ರವಾಗಿ ಟ್ರೋಲ್​ಗೆ ಆಹಾರವಾಗಿದ್ದ ಅಂಬಾಟಿ ರಾಯುಡು ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ವಿರಾಟ್​ ಕೊಹ್ಲಿ ಕುರಿತು ಮತ್ತೊಮ್ಮೆ ಮಾತನಾಡುವ ಮೂಲಕ ಅಂಬಾಟಿ ರಾಯುಡು ಟೀಕೆಗೆ ಗುರಿಯಾಗಿದ್ದಾರೆ.

ವಿರಾಟ್​ ಕೊಹಲ್ಲಿ ತನ್ನ ತಂಡದಲ್ಲಿರುವ ಸಹ ಆಟಗಾರರು ತಮ್ಮಂತೆಯೇ ಪ್ರದರ್ಶನ ನೀಡಬೇಕೆಂದು ಬಯಸುತ್ತಾರೆ. ವಿರಾಟ್​ ಕೊಹ್ಲಿ ಕೊಂಚ ಸ್ಟಾಂಡರ್ಡ್​ ಕಮ್ಮಿ ಮಾಡುಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್​ ಕೊಹ್ಲಿಯಂತಹ ಆಟಗಾರರು ತಂಡದಲ್ಲಿ ಇರಬೇಕಾದರೆ ಅವರು ಒಂದು ಸ್ಟಾಂಡರ್ಡ್​ ಸೆಟ್​ ಮಾಡಿರುತ್ತಾರೆ. ಇದು ತಂಡದಲ್ಲಿರುವ ಯುವ ಹಾಗೂ ಹೊಸ ಆಟಗಾರರಿಗೆ ಅವರ ವೇಗಕ್ಕೆ ತಕ್ಕಂತೆ ಆಟವಾಡಲು ಕಷ್ಟವಾಗುತ್ತದೆ. ಏಕೆಂದರೆ ವಿರಾಟ್​ ಕೊಹ್ಲಿ ತಂಡದಲ್ಲಿರುವ ಪ್ರತಿಯೊಬ್ಬರು ತಮ್ಮಂತೆ ಆಟವಾಡಲು ಬಯಸುತ್ತಾರೆ. ಇದು ಕಷ್ಟಕರವಾಗಿದ್ದು, ತಂಡದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಪಾಟೀದಾರ್​ ವಿರಾಟ್​ ಕೊಹ್ಲಿ ಆಗಲು ಸಾಧ್ಯವಿಲ್ಲ. ವಿರಾಟ್​ ತರ ಆಟವಾಡಬೇಕೆಂದರೆ ಆರ್​ಸಿಬಿ 11 ಮಂದಿ ಕೊಹ್ಲಿಯನ್ನು ತಯಾರಿಸಲು ಸಾಧ್ಯವಿಲ್ಲ. ತಂಡದಲ್ಲಿರುವ 10 ಆಟಗಾರರು ವಿರಾಟ್​ ಕೊಹ್ಲಿಯ ತರಹ ತಮ್ಮದೇ ಆದ ಗುರತು ಹಾಗೂ ಸ್ವಂತ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರಿಗೆ ಸ್ವಲ್ಪ ಸಮಯ ಹಿಡಿಯುತ್ತದೆ. ಆಟಗಾರನ ಆಯ್ಕೆಯಲ್ಲಿ ನಿರ್ವಹಣೆಯು ಪ್ರಮುಖ ಪಾತ್ರ ವಹಿಸಲಿದ್ದು, ಯುವ ಆಟಗಾರರ ವಿಚಾರದಲ್ಲಿ ವಿರಾಟ್​ ಕೊಹ್ಲಿ ಸ್ಟಾಂಡರ್ಡ್​ಅನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬೇಕು. ಕೆಲವೊಮ್ಮ ತಪ್ಪು ಮಾಡಿದಾಗ ಬೈಯದೆ ಸುಮ್ಮನೇ ಇರುವುದು ಸೂಕ್ತ ಎಂದು ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ. ಇತ್ತ ಅಂಬಾಟಿ ರಾಯುಡು ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಹಲವರು ಕಿಡಿಕಾರಿದ್ದಾರೆ. ಮುಂದಿನ ದಿನಗಳಲ್ಲಿ ಮಾಜಿ ಕ್ರಿಕೆಟಿಗ ಇದಕ್ಕೆ ಯಾವ ರೀತಿ ಸ್ಪಷ್ಟನೆ ಕೊಡಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net