

ವಾರ್ ರೂಮ್ ಆರಂಭ: ಬಿಎಂಸಿ ಜತೆಗೆ ಹಂಚಿಕೊಂಡ ಕರೊನಾ ಟೆಸ್ಟ್ ರಿಸಲ್ಟ್ಗಳನ್ನು ನಿಭಾಯಿಸುವ ಸಲುವಾಗಿ ಇಕ್ಬಾಲ್ ಸಿಂಗ್ ಪ್ರತಿ ವಾರ್ಡ್ಗೆ ಒಂದರಂತೆ 24 ವಾರ್ ರೂಮ್ಳನ್ನು ಸಿದ್ಧಪಡಿಸಿದರು. ಆಯಾ ವಾರ್ಡ್ಗಳಲ್ಲಿನ ರೋಗಿಗಳ ಕರೊನಾ ರಿಸಲ್ಟ್ಗಳನ್ನು ಬೆಳಿಗ್ಗೆ 6 ರೊಳಗೆ ಕಳುಹಿಸಲಾಯ್ತು. ಪ್ರತಿಯೊಂದು ವಾರ್ ರೂಮ್ ಕೂಡ 30 ದೂರವಾಣಿ ಸಂಪರ್ಕ ಹೊಂದಿದ ನಿಯಂತ್ರಣ ಕೇಂದ್ರವಾಗಿತ್ತು. ಇದರಲ್ಲಿ 10 ಟೆಲಿಫೋನ್ ಆಪರೇಟರ್ಗಳು, 10 ವೈದ್ಯರು, ವೈದ್ಯಕೀಯ ನೆರವು ಸಿಬ್ಬಂದಿ ಮತ್ತು 10 ಆಂಬುಲೆನ್ಸ್ಗಳಿದ್ದವು. ಇಲ್ಲಿ ಸಿಬ್ಬಂದಿ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿ ವಾರ್ಡ್ನೊಳಗೆ 10 ಡ್ಯಾಶ್ಬೋರ್ಡ್ಗಳನ್ನು ರಚಿಸಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆಯ ಮಾಹಿತಿ ನೀಡಲಾಯಿತು. ಬಿಎಂಸಿ ಪ್ರಧಾನ ಕಚೇರಿಯು ಪ್ರತಿದಿನ 55 ಪರೀಕ್ಷಾ ಪ್ರಯೋಗಾಲಯಗಳಿಂದ ಬರುವ ಸುಮಾರು 10,000 ವರದಿಗಳನ್ನು ಸ್ವೀಕರಿಸುವ ಮತ್ತು ಅದನ್ನು ವಿಂಗಡಿಸುವ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಈ ಟೆಸ್ಟ್ ಫಲಿತಾಂಶಗಳನ್ನು 24 ವಾರ್ಡ್ಗಳಿಗೆ ಕಳುಹಿಸಿಕೊಡಲಾಗುತ್ತಿತ್ತು. ಪಾಸಿಟಿವ್ ಕಂಡುಬಂದ ಮತ್ತು ಆಸ್ಪತ್ರೆಗೆ ದಾಖಲಾಗಬೇಕಿದ್ದವರ ಮೇಲೆ ಬಿಎಂಸಿ ಹೆಚ್ಚು ಗಮನ ಕೇಂದ್ರೀಕರಿಸಿತು. ಬೆಳಿಗ್ಗೆ 8 ಗಂಟೆಯಿಂದ ಪ್ರತಿ ವಾರ್ಡ್ನ ವಾರ್ ರೂಮ್ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪಾಸಿಟಿವ್ ವರದಿ ಪಡೆದ ರೋಗಿಗಳ ಮನೆಗಳಿಗೆ ಭೇಟಿ ನೀಡಿದರು. ಸೂಕ್ತ ಪ್ರಮಾಣದ ಸಿಬ್ಬಂದಿ ಮತ್ತು ಮೂಲಸೌಕರ್ಯವಿದ್ದದ್ದರಿಂದ ಕರೊನಾ ಹೋರಾಟದಲ್ಲಿ ಯಶಸ್ಸು ಸಾಧ್ಯವಾಯಿತು. ಕರೊನಾ ಆರಂಭದಲ್ಲೇ ಮಹಾರಾಷ್ಟ್ರ ಸರ್ಕಾರ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಬೆಲೆ ನಿಗದಿಪಡಿಸಿತು. ಚಾಹಲ್ ಅವರು 172 ಆಸ್ಪತ್ರೆಗಳ ಕೇಂದ್ರೀಕೃತ ಡ್ಯಾಶ್ಬೋರ್ಡ್ ಮತ್ತು ಬಿಎಂಸಿ ರಚಿಸಿದ ಕೋವಿಡ್ ಘಟಕಗಳು, ತೆರೆದ ಮೈದಾನಗಳಲ್ಲಿ ಸ್ಥಾಪಿಸಲಾದ ಅನೇಕ ಜಂಬೊ ಕೇಂದ್ರಗಳು, ಸಣ್ಣ ಆಸ್ಪತ್ರೆಗಳು ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸಂಪೂರ್ಣ ಮಾಹಿತಿ ಹೊಂದಿದ್ದಾರೆ.
ಆಕ್ಸಿಜನ್ ಕೊರತೆ ನಿವಾರಣೆ: ಏಪ್ರಿಲ್ ಮೊದಲ ವಾರದಲ್ಲಿ ಎರಡನೇ ಅಲೆ ಜೋರಾಗುತ್ತಿದ್ದಂತೆ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಮತ್ತು ಬಿಎಂಸಿಯ ಕರೊನಾ ಬಿಕ್ಕಟ್ಟು ನಿರ್ವಹಣಾ ತಂಡದವರು ಆಮ್ಲಜನಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದರು. ಮುಂಬೈನಲ್ಲಿ ಆರು ತುರ್ತು ಸ್ಟಾಕ್ ಪಾಯಿಂಟ್ಗಳನ್ನು ಸ್ಥಾಪಿಸಲಾಯಿತು. ಇದನ್ನು 24/7 ರೀತಿಯಲ್ಲಿ ಕಾರ್ಯಗತಗೊಳಿಸಲಾಯಿತು. ಪ್ರತಿ ಸ್ಟಾಕ್ ಪಾಯಿಂಟ್ 50 ಮೆಟ್ರಿಕ್ ಟನ್ ಆಕ್ಸಿಜನ್ ಸಂಗ್ರಹಿಸಿತು. ಪ್ರತಿ ಸ್ಟಾಕ್ ಪಾಯಿಂಟ್ ನಾಲ್ಕು ವಾರ್ಡ್ಗಳಿಗೆಂದು ಮೀಸಲಿಡಲಾಯಿತು. ಯಾರಾದರೂ ನೆರವು ಕೋರಿ ಕರೆ ಮಾಡಿದರೆ ಅವರು ಅದನ್ನು ವಾರ್ಡ್ ಅಧಿಕಾರಿಗೆ ತಲುಪಿಸುತ್ತಾರೆ. ಅವರು ಉಪ ಆಯುಕ್ತರಿಗೆ ತಿಳಿಸಿ ತದನಂತರ ಎರಡು-ಮೂರು ನಿಮಿಷಗಳಲ್ಲಿ ಆಕ್ಸಿಜನ್ ಟ್ಯಾಂಕರ್ಗಳನ್ನು ಕಳುಹಿಸಿಕೊಡಲಾಗುತ್ತದೆ.
ದಕ್ಷ ಅಧಿಕಾರಿ ಕಾರ್ಯಕ್ಕೆ ಮೆಚ್ಚುಗೆ: 1989ರ ಬ್ಯಾಚ್ನ ಐಎಎಸ್ ಅಧಿಕಾರಿ ಇಕ್ಬಾಲ್ ಸಿಂಗ್ ಚಾಹಲ್ ಅವರಿಗೆ ಈ ವರ್ಷದ ಆರಂಭದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ‘ಲೋಕಮತ್ ಮಹಾರಾಷ್ಟ್ರಿಯನ್ - 2021’ ಪ್ರಶಸ್ತಿ ನೀಡಿ ಗೌರವಿಸಿದ್ದರು. 2016ರವರೆಗೆ ಕೇಂದ್ರ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಕ್ಬಾಲ್ ಸಿಂಗ್ರನ್ನು ಬಾಕಿ ಮೂರು ವರ್ಷದ ಅವಧಿ ಮುಕ್ತಾಯವಾಗುವ ಮುನ್ನವೇ ಮಹಾರಾಷ್ಟ್ರಕ್ಕೆ ಕಳುಹಿಸಿಕೊಡಲಾಯ್ತು. ಕಾಂಗ್ರೆಸ್ ನಾಯಕ, ಯುಪಿಎ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂಧೆಯ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಇಲಾಖೆಯ ಜಂಟಿ ಕಾರ್ಯದರ್ಶಿಯೂ ಆಗಿದ್ದರು. ಇದೇ ಕಾರಣಕ್ಕೆ ಅವರನ್ನು ರಾಜ್ಯಕ್ಕೆ ವಾಪಸ್ ಕಳಿಸಲಾಯ್ತು ಎಂಬ ಮಾತುಗಳೂ ಇವೆ.
ಕೋರ್ಟ್ ಮೆಚ್ಚುಗೆ: ಕಳೆದ ವರ್ಷದ ಮೇ ತಿಂಗಳಲ್ಲಿ ಬಿಎಂಸಿ ಆಯುಕ್ತರಾಗಿ ನೇಮಕಗೊಂಡ ಚಾಹಲ್, ಎರಡನೇ ಅಲೆಯನ್ನು ಎದುರಿಸಿ ನಿರ್ವಹಿಸಿದ ಬಗ್ಗೆ ಬಾಂಬೆ ಹೈಕೋರ್ಟ್ ಮತ್ತು ಮುಖ್ಯವಾಗಿ ಸುಪ್ರೀಂಕೋರ್ಟ್ ಕೂಡ ಶ್ಲಾಘಿಸಿದೆ. ‘ಕರೊನಾ ಕೇಸುಗಳು 92,000 ಇದ್ದಾಗಲೂ ಮುಂಬೈ ನಗರ 275 ಮೆಟ್ರಿಕ್ ಟನ್ ಆಮ್ಲಜನಕದ ಮೂಲಕ ಬಿಕ್ಕಟ್ಟನ್ನು ಎದುರಿಸಿತು. ಬಾಂಬೆ ಬಿಎಂಸಿ ಅಭೂತಪೂರ್ವ ಸಾಧನೆ ಮಾಡಿದೆ. ಹಾಗೆಂದು ನಾವು ದೆಹಲಿಯನ್ನು ಕಡೆಗಣಿಸುತ್ತಿಲ್ಲ. ಆದರೆ, ಮುಂಬೈ ಹೇಗೆ ಈ ಬಿಕ್ಕಟ್ಟಿನಿಂದ ಹೊರಬಂತು ಎನ್ನುವುದನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ಕಿಕ್ಕಿರಿದ ಮುಂಬೈನಲ್ಲಿ ಇದು ಸಾಧ್ಯ ಎಂದರೆ ದೆಹಲಿಯಲ್ಲಿಯೂ ಇದು ಸಾಧ್ಯವಾಗಬೇಕು’ ಎಂದು ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು.
ಅಂತ್ಯಕ್ರಿಯೆಗೆ ಕಾಯಬೇಕಿಲ್ಲ: ಶವಾಗಾರಗಳ ಎದುರು ಸಾಲು ನಿಲ್ಲುವ ದಯನೀಯ ಸ್ಥಿತಿ ನಿರ್ವಣವಾಗದಂತೆಯೂ ಎಚ್ಚರಿಕೆ ವಹಿಸಲಾಯಿತು. ಸಮರ್ಪಕ ಯೋಜನೆ ಹಾಗೂ ವ್ಯವಸ್ಥೆಯಿಂದ ಇದು ಸಾಧ್ಯವಾಯಿತು. ಮುಂಬೈನ 47 ಶವಾಗಾರಗಳನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜತೆ ಸಂಪರ್ಕಗೊಳಿಸಿ ಆನ್ಲೈನ್ ಡ್ಯಾಶ್ ಬೋರ್ಡ್ ಸಿಸ್ಟಮ್ ಸಿದ್ಧಪಡಿಸಿದರು. ಇದರಿಂದ ಶವಾಗಾರದ ಮುಂದೆ ಜನ ಕಿಕ್ಕಿರಿದು ಕಾಯುವ ಸ್ಥಿತಿ ನಿರ್ವಣವಾಗಲಿಲ್ಲ.