ಕರೊನಾ ಲಸಿಕೆ ಹಾಕಿಸಿಕೊಳ್ಳಬೇಕಾ?; ಪೊಲೀಸ್ ಕಮಿಷನರ್ ಕಮಲ್ ಪಂತ್ ಏನು ಹೇಳಿದ್ದಾರೆ ನೋಡಿ..

vaccine
Published on

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಕಟ್ಟುನಿಟ್ಟಿನ ಲಾಕ್​ಡೌನ್​ನ ಈ ಸಂದರ್ಭದಲ್ಲಿ ಅನಗತ್ಯವಾಗಿ ಹೊರಗಡೆ ಹೋಗುವವರ ವಾಹನಗಳ ಜಪ್ತಿ ಆಗುತ್ತಿರುವುದಷ್ಟೇ ಅಲ್ಲದೆ ಅಂಥವರ ಮೇಲೆ ಪೊಲೀಸರ ಲಾಠಿ ಏಟು ಬೀಳುವ ಸಾಧ್ಯತೆಗಳೂ ಇವೆ. ಲಾಠಿ ಬೀಸಬಾರದು ಎಂದು ಉನ್ನತಾಧಿಕಾರಿಗಳು ಹೇಳಿದ್ದರೂ ಇನ್ನೂ ಹಲವಾರು ಜನರಲ್ಲಿ ಆ ಭಯವಿದ್ದು, ಕೆಲವರು ಅಗತ್ಯ ಕೆಲಸಕ್ಕೂ ಹೊರಗಡೆ ಹೋಗಲು ಹಿಂಜರಿಯುವಂತಾಗಿದೆ.

ಇಂಥ ಸಂದರ್ಭದಲ್ಲಿ ಲಸಿಕೆ ಪಡೆಯಲು ಹೋಗುವವರು ಏನು ಮಾಡಬೇಕು ಎಂಬ ಪ್ರಶ್ನೆ ಹಲವರಲ್ಲಿ ಮೂಡಿದ್ದೂ ಇದೆ. 'ಲಸಿಕೆ ಹಾಕಿಸಿಕೊಳ್ಳಲು ಎಂ.ಎಸ್.ರಾಮಯ್ಯ ಹಾಸ್ಪಿಟಲ್​ಗೆ ಹೋಗುತ್ತಿದ್ದೇವೆ' ಎಂದು ದ್ವಿಚಕ್ರವಾಹನದ ಮೇಲೆ ಹಾಕಿಕೊಂಡು ಇಬ್ಬರು ಸವಾರರು ಸಾಗುತ್ತಿದ್ದ ಫೋಟೋ ಕೂಡ ಇತ್ತೀಚೆಗೆ ವೈರಲ್ ಆಗಿತ್ತು. ಇವೆಲ್ಲವನ್ನು ಗಮನಿಸಿರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಈ ಕುರಿತು ಒಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಲಸಿಕೆ ಪಡೆಯಲಿಕ್ಕೂ ಹಿಂಜರಿಯುವವರ ಭಯ ಹೋಗಲಾಡಿಸಲು ಅವರು ಈ ರೀತಿ ಮುಂದಾಗಿದ್ದಾರೆ.

ಲಸಿಕೆ ಪಡೆಯಲು ಸಂಚರಿಸುತ್ತಿರುವವರ ಬಳಿ ಸೂಕ್ತ ದಾಖಲೆಗಳು ಇದ್ದಲ್ಲಿ ಅನುವು ಮಾಡಿಕೊಡಬೇಕು ಎಂದು ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಪೊಲೀಸರು ಕೇಳಿದರೆ ಸಾರ್ವಜನಿಕರು ಲಸಿಕೆ ಪಡೆಯುತ್ತಿರುವುದರ ಕುರಿತ ಎಸ್​ಎಂಎಸ್​, ರಸೀದಿ ಅಥವಾ ಆನ್​​ಲೈನ್​ ದಾಖಲೆ ಮುಂತಾದವನ್ನು ತೋರಿಸತಕ್ಕದ್ದು ಎಂದು ಕಮಿಷನರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net