More

    ವೈದ್ಯರೇ ಕರೊನಾಗೆ ಬಲಿ; ಆಸ್ಪತ್ರೆಗೆ ಬರಲು ಹಿಂಜರಿಯುತ್ತಿರುವ ಸಾರ್ವಜನಿಕರು!

    ಮೈಸೂರು: ಕೋವಿಡ್-19 ಸೋಂಕು ಪಾಸಿಟಿವ್ ಬಂದಿದೆ ಎಂಬುದು ದೃಢಪಟ್ಟರೆ ಬಹುತೇಕ ಎಲ್ಲರೂ ಏಕಾಂಗಿ ಅನಿಸಿಬಿಡುತ್ತಾರೆ. ಅವರ ಹತ್ತಿರದವರೇ ಹತ್ತಿರ ಬರಲು ಯೋಚನೆ ಮಾಡುತ್ತಾರೆ. ಸತ್ತರಂತೂ ಅಂತಿಮದರ್ಶನ ಪಡೆಯಲಿಕ್ಕೂ ಹೋಗುವವರು ಕಡಿಮೆ. ಪರಿಸ್ಥಿತಿ ಹೀಗಿರುವಾಗ ಇಲ್ಲೊಂದು ಕಡೆ ವೈದ್ಯರೇ ಕರೊನಾಗೆ ಬಲಿಯಾಗಿದ್ದಾರೆ ಎಂಬ ಕಾರಣಕ್ಕೆ ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಬರಲೂ ಸಾರ್ವಜನಿಕರು ಹಿಂಜರಿಯುತ್ತಿದ್ದಾರೆ.

    ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸರ್ಕಾರಿ ಆಸ್ಪತ್ರೆಯ ಡಾ.ರಘುನಾಥ್ ಇತ್ತೀಚೆಗಷ್ಟೇ ಕರೊನಾ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದರು. ಹೀಗಾಗಿ ಇಲ್ಲಿನ ವೈದ್ಯರೇ ಕೋವಿಡ್​-19 ಸೋಂಕಿನಿಂದಾಗಿ ಮೃತಪಟ್ಟಿದ್ದರಿಂದ ಸುತ್ತಮುತ್ತಲ ಪ್ರದೇಶದ ಸಾರ್ವಜನಿಕರು ಈ ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮವಾಗಿ ಇಂಥ ಸಮಯದಲ್ಲೂ ಈ ಸಮುದಾಯ ಆರೋಗ್ಯ ಕೇಂದ್ರ ಬಿಕೋ ಎನ್ನುತ್ತಿದೆ.

    ಇದನ್ನೂ ಓದಿ: ಸೋಂಕಿತ ತಾಯಿಯ ಶವಸಂಸ್ಕಾರಕ್ಕೆ ಮುಂದಾದ ಮಗನಿಗೆ ಗ್ರಾಮಸ್ಥರಿಂದ ವಿರೋಧ; ಕಾರಣವೇನು, ಆಮೇಲೇನಾಯಿತು?

    ಮತ್ತೊಂದೆಡೆ ಇಲ್ಲಿಗೆ ಸಮೀಪದ ಕುರಿಹುಂಡಿ ಗ್ರಾಮ ಪಂಚಾಯಿತಿ ಸದಸ್ಯ ವಿಜಯ್ ಕುಮಾರ್ ಕೂಡ ಕೋವಿಡ್-19 ಸೋಂಕಿನಿಂದಾಗಿ ಕೊನೆಯುಸಿರೆಳೆದಿದ್ದಾರೆ. ಅಲ್ಲದೆ ಇಬ್ಬರು ಆಶಾ ಕಾರ್ಯಕರ್ತೆಯರಲ್ಲೂ ಸೋಂಕು ಕಂಡುಬಂದಿರುವುದು ದೃಢಪಟ್ಟಿದೆ. ಹೀಗಾಗಿ ಈ ಪ್ರದೇಶದಲ್ಲಿ ಒಂಥರಾ ಆತಂಕ ವಾತಾವರಣ ಉಂಟಾಗಿದೆ.

    ಅವನಿಗೆ ಚಿತ್ರದುರ್ಗದಲ್ಲಿ ಕೆಲ್ಸ ಮಾಡಲು ಹೇಳು, ಇಲ್ಲಿ ನಾನು ಸಂಸದ.. ನಾನು ಹೇಳಿದ ಹಾಗೆ ಕೇಳು: ಡಿ.ಕೆ.ಸುರೇಶ್ ಹೀಗೆ ಗರಂ ಆಗಿದ್ಯಾಕೆ?

    ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts