ನಟ ಪುನೀತ್ ಇಲ್ಲದ ಮೊದಲ ಬರ್ತಡೇ ಇದಾಗಿದ್ದು, ಎಲ್ಲಡೆ ಪುನೀತ್ ಅವರನ್ನು ನೆನೆದು ಜನ ಕಂಬನಿ ಮಿಡಿಯುತ್ತಿದ್ದರು. ಇನ್ನು, ಚಿತ್ರ ನೋಡಿ ಬಂದ ಅಭಿಮಾನಿಗಳು ಸಹ ಕಣ್ಣೀರು ಸುರಿಸಿದ್ದಾರೆ. ಜತೆಗೆ, ನಟ ಪುನೀತ್ ಅವರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ನೇತ್ರದಾನ, ರಕ್ತದಾನ, ಅಂಗ ದಾನ, ಅನ್ನ ದಾನ, ಗಿಡಗಳನ್ನು ನೆಟ್ಟುವ ಕಾರ್ಯಕ್ರಮದ ಜತೆಗೆ ಪಲ್ಲಕಿ ಮೆರವಣಿಗೆ ಅಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಹೀಗೆ, ಅನ್ನದಾನ ಕಾರ್ಯಕ್ರಮಗಳಂತೂ ಮೂರು ದಿನಗಳ ಬಳಿಕವೂ ಅಂದರೆ ಮಾರ್ಚ್ 20 ರಂದು ಜೋರಾಗಿಯೇ ನಡೆದವು.