ಬೆಂಗಳೂರು: ಕನ್ನಡದ ನಿರೂಪಣಾ ಕೋಗಿಲೆ ಆಗಿದ್ದ ಅಪರ್ಣಾ ಅವರು ಕನ್ನಡ ನಾಡು ಕಂಡ ಅಪರೂಪದ ನಿರೂಪಕಿ. ಕನ್ನಡ ಭಾಷೆ ನುಡಿದ್ರೆ, ಅಪರ್ಣಾರಂತೆ ನುಡಿಯಬೇಕು ಅನ್ನೊದು ಅದೆಷ್ಟೋ ಜನರ ಕನಸಾಗಿತ್ತು. ಎಷ್ಟೋ ಜನರ ನಡೆ ನುಡಿಯಲ್ಲಿ ಕನ್ನಡ ಬಿತ್ತಿದ ಅಪ್ಪಟ ಕನ್ನಡತಿ ಅಪರ್ಣಾ ಶ್ವಾಸಕೋಶ ಕ್ಯಾನ್ಸರ್ನಿಂದ ಇಹಲೋಕ ತ್ಯಜಿಸಿದ್ದಾರೆ. ನಾವು ಇಂದು ನಿಮಗೆ ಅಪರ್ಣಾ ಅವರ ಬಾಳಿನಲ್ಲಿ ನಡೆದು ಹೋಗಿದ್ದ ಒಂದು ಘಟನೆ ಕುರಿತಾಗಿ ಯಾರಿಗೂ ತಿಳಿಯದೆ ಇರುವ ಒಂದು ಸ್ಟೋರಿಯನ್ನು ನಿಮ್ಮ ಮುಂದೆ ತೆರೆದಿಡುತ್ತಿದ್ದೇವೆ.
ಅಪರ್ಣಾ ಅವರ ತಂದೆ ಕೊಡ ಕೆ ಎಸ್ ರಾಮಸ್ವಾಮಿ ಸಿನಿಮಾ ಪತ್ರಕರ್ತ ಆಗಿದ್ದವರು. ತಾಯಿ ಪದ್ಮಿನಿ ಹಾಗೂ ತಮ್ಮನ ಹೆಸರು ಚೈತನ್ಯ. ಅಪರ್ಣಾ ಹುಟ್ಟಿದ್ದು ಚಿಕ್ಕಮಂಗಳೂರು ಜಿಲ್ಲೆಯ ಪಂಚಮನ ಹಳ್ಳಿಯಲ್ಲಿ ಆದ್ರೂ ಕೊಡ ಬೆಂಗಳೂರಿನಲ್ಲಿ ಪಿಯುಸಿ ವರೆಗೂ ಶಿಕ್ಷಣ ಪಡೆದುಕೊಂಡರು. ಅಪ್ಪ ಚಿತ್ರ ರಂಗದಲ್ಲಿ ಆದ್ದರಿಂದ ಸಂಪರ್ಕ ಕೊಡ ಚೆನ್ನಾಗಿಯೇ ಬೆಳೆಯಿತು. ಹಾಗಾಗಿ ಪುಟ್ಟನ ಕಣಗಾಲ್ ಚಿತ್ರಕ್ಕೆ 19ನೆ ವಯಸ್ಸಿಗೇ ನಾಯಕಿ ಆದರೂ. ಸಿನಿಮಾ, ನ್ಯೂಸ್ ಚಾನಲ್ , ನಿರೂಪಣೆ ಹಾಗೂ ಪ್ರಮುಖ ಧಾರಾವಾಹಿಗಳಲ್ಲಿ ಯಶಸ್ವಿ ಕೊಡ ಆದರು.
ಅಪರ್ಣಾ ಚಂದನ ಟಿವಿ ಚಾನೆಲ್‌ನಲ್ಲಿ ನಿರೂಪಕರಾಗಿ ಪ್ರಸಿದ್ಧರಾಗಿದ್ದರು. ಅವರು ಕನ್ನಡದ ವಿವಿಧ ಕಾರ್ಯಕ್ರಮಗಳಲ್ಲಿ ಮತ್ತು ಸುದ್ದಿಪ್ರಸಾರಗಳಲ್ಲಿ ತಮ್ಮ ಅದ್ಭುತ ನಿರೂಪಣೆಯಿಂದ ಜನಪ್ರಿಯರಾಗಿದ್ದರು. ಅವರ ವೃತ್ತಿಪರ ಜೀವನದ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿದ್ದರೂ, ಅವರ ವೈಯಕ್ತಿಕ ಜೀವನವನ್ನು ಅವರು ಬಹಳ ಖಾಸಗಿಯಾಗಿ ಇಟ್ಟಿದ್ದಾರೆ. ಅವರ ಮೊದಲ ಮದುವೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಮಾಡಿಲ್ಲ.
ಅಪರ್ಣಾ ಅವರಿಗೆ ಕಲಾರಂಗದಲ್ಲಿ ಒಳ್ಳೆಯ ಬೇಡಿಕೆ ಇರುವ ವೇಳೆಯೆ ಭಾರತೀಯ ಮೂಲದ NRI ವ್ಯಕ್ತಿ ವಿದೇಶದಲ್ಲಿ ಇದ್ದವರನ್ನು ಅಪರ್ಣಾ ಮದುವೆಯಾದರು. 2 ವರ್ಷಗಳ ಕಾಲ ಅಮೆರಿಕಾದಲ್ಲಿ ಮೊದಲ ಪತಿ ಜತೆ ಸಂಸಾರ ನಡೆಸಿದ್ದರು. ಆದರೆ ಅಮೆರಿಕಾದ ಜೀವರ ಜೀವನ ಇವರಿಗೆ ತುಂಬಾನೆ ನೋವನ್ನು ನೀಡಿತ್ತಂತೆ. ಆದರೆ ಆ ವ್ಯಕ್ತಿಯಿಂದ ಮಾನಸಿಕ ಹಿಂಸೆ ಅನುಭವಿಸಿದ ಕಾರಣ ಅವರಿಂದ ದೂರವಾದರು. ಮೊದಲ ಪತಿ ಕುರಿತಾಗಿ ಯಾವುದೇ ಮಾಹಿತಿ ಇಲ್ಲ. ಆದರೆ ಈಕೆ ಮೊದಲ ಪತಿಯಿಂದ ಚಿತ್ರ ಹಿಂಸೆ ಒಳಗಾದರು ಎನ್ನಲಾಗಿದೆ.
ನಂತರ ಒಂಟಿಯಾಗಿ ಜೀವನ ನಡೆಸುತ್ತಿದ್ದ ಅಪರ್ಣಾ ಅವರಿಗೆ ನಿರೂಪಣೆ ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶ ದೊರೆತು ಬಂತು. ಮನರಂಜನಾ ಜಗತ್ತಿನಲ್ಲಿ ಗುರುತಿಕೊಳ್ಳುತ್ತಿದ್ದರು. ಹೊಸ ಜೀವನ ನಡೆಸಬೇಕು ಎಂದು ಕನಸು ಇಟ್ಟುಕೊಂಡಿದ್ದರು. ಈ ವೇಳೆ ಪರಿಚಯವಾದವರೇ ನಾಗರಾಜ್ ವಸ್ತಾರೆ. ಇಬ್ಬರು ಭೇಟಿ ಆಗ್ತಾರೆ.ಈ ವೇಳೆ ನಾಗರಾಜ್ ವಸ್ತಾರೆ ಸ್ನೇಹವಾಯ್ತು.
2003 ರಲ್ಲಿ ನಾಗರಾಜ್ ವಸ್ತಾರೆ ಅವರೊಂದಿಗೆ ಮದುವೆ ಆಗುತ್ತಾರೆ. ಈ ವೇಳೆ ಅಪರ್ಣಾ ಅವರಿಗೆ 39 ವರ್ಷವಾಗಿತ್ತು. ಇಬ್ಬರು ಮಕ್ಕಳಿಲ್ಲದ ನೋವನ್ನು ಇಬ್ಬರ ಪ್ರೀತಿಯಲ್ಲೇ ಕಳೆದ್ರು. ಸಾಕಷ್ಟು ಕನಸುಗಳನ್ನು ಕಂಡಿದ್ದರು. ಗಂಡ ಹೆಂಡತಿ ಇಬ್ಬರೂ ಒಬ್ಬರನ್ನೊಬ್ಬರು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಸಂತಾನ ಅಭಿವೃದ್ಧಿ ಇಲ್ಲದೆ ಇರುವುದರಿಂದ ಅದೊಂದು ಬೇಜಾರು ಇತ್ತು. ಮಕ್ಕಳನ್ನು ಅವರು ಗಿಡಗಳಲ್ಲಿ ಕಾಣುತ್ತಿದ್ದರು. ಹೀಗಾಗಿ ಇಬ್ಬರಲ್ಲೂ ಅನ್ಯೋನ್ಯತೆಯಿತ್ತು. ಇವರು ಅವಳನ್ನು ಮಗುತರ ನೋಡಿಕೊಳ್ಳೋರು. ಅವಳು ಇವರನ್ನು ಮಗುತರ ನೋಡಿಕೊಳ್ಳುತ್ತಿದ್ದರು. ಸುಖಃವಾಗಿದ್ದ ಇವರ ಜೀವನದಲ್ಲಿ ಬಿರುಗಾಳಿಯಂತೆ ಬಂದಿದ್ದೆ ಈ ಭೀಕರವಾದ ಕಾಯಿಲೆ ಆಗಿತ್ತು.
ಕಳೆದ 2 ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅಪರ್ಣಾ ಅವರು ಈ ಕಾಯಿಲೆ ವಿರುದ್ಧ ಶಕ್ತಿ ಮೀರಿ ಹೊರಾಡಿದ್ದಾರೆ. ಆದರೆ ಕೊನೆಗೂ ಈ ಕ್ಯಾನ್ಸರನ್ನು ಮಣಿಸಲು ಸಾಧ್ಯವಾಗದೇ ಕನ್ನಡಿಗರು ಹಾಗೂ ಕುಟುಂಬಸ್ಥರನ್ನು ಅಗಲಿ ನಮ್ಮಿಂದ ದೂರವಾಗಿದ್ದಾರೆ. ಆದರೆ ಅವರು ಮಾಡಿರುವ ಕನ್ನಡ ತಾಯಿ ಸೇವೆ ಮಾತ್ರ ಎಂದಿಗೂ ಚಿರಸ್ಮರಣಿಯವಾಗಿದೆ…
ಅಪರ್ಣಾ ಸ್ನೇಹಿತೆ ವತ್ಸಲಾ ಖಾಸಗಿವಾಹಿನಿ ಜತೆ ಮಾತನಾಡಿ, ನನ್ನ ಆತ್ಮೀಯ ಸ್ನೇಹಿತೆ ಆಗಿದ್ದರು. ಆದರೆ ಒಂದು ದಿನ ಕೂಡ ಅವಳ ಕಷ್ಟವನ್ನು ಹೇಳಿಕೊಳ್ಳುತ್ತಿರಲಿಲ್ಲ. ಅವಳು ತುಂಬಾ ಕಷ್ಟ ಪಟ್ಟಿದ್ದಾಳೆ. ಆದರೆ ಯಾರ ಬಳಿ ಕೂಡಾ ಆಕೆ ಹಂಚಿಕೊಳ್ಳುತ್ತಿರಲಿಲ್ಲ. ಅವಳ ಮೊದಲ ಮದುವೆ ನೋವಿನಿಂದ ಅವರ ತಂದೆ ತಿರ್ಕೊಂಡರು ಎಂದು ಹೇಳುತ್ತಾ ಕಣ್ಣೀರು ಹಾಕಿದ್ದರು.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಪರ್ಣಾ ಅವರನ್ನು ನೆನೆದು ಭಾವುಕರಗಿದ್ದರು. ಹೆಮ್ಮೆಯ ಕನ್ನಡತಿಗೆ ಅಕ್ಷರ ನಮನ ಸಲ್ಲಿಸುವ ವೇಳೆ ನನ್ನ ಬರವಣಿಗೆ ಎಂದರೆ ಆಕೆಗೆ ಅಚ್ಚುಮೆಚ್ಚು. ನನ್ನ ಕಥೆ-ಕಾದಂಬರಿಗಳ ಕೆಲ ಸಾಲುಗಳನ್ನು ಕಂಠಪಾಠ ಮಾಡಿದಂತೆ ಒಪ್ಪಿಸುತ್ತಿದ್ದಳು. ಅಲ್ಪಕಾಲೀನ ಅಮೆರಿಕಾ ಬದುಕು ಅವಳಿಗೆ ಕಹಿ ಉಣಿಸಿತ್ತು. ಸಾಹಿತ್ಯ, ಸಂಗೀತ, ರಂಗಭೂಮಿ, ಕಿರುತೆರೆ, ಸಿನಿಮಾ ಹೀಗೆ ಬಹುವಿಧ ಆಸಕ್ತಿಗಳಿಂದ ಅಲಂಕೃತಳಾಗಿದ್ದ ಅಪರ್ಣಾ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಅಸ್ಖಲಿತ, ಪ್ರೌಢ ಮತ್ತು ಭಾವಪೂರ್ಣನಿರೂಪಣೆಗೆ ಮಾದರಿಯಾಗಿದ್ದಳು ಎಂದು ಬೇಸರ ವ್ಯಕ್ತಪಡಿಸಿದ್ದರು.
ಅಪರ್ಣಾಗೆ ಇದೊಂದು ಕೊರಗು ಕಾಡ್ತಾನೆ ಇತ್ತು! ಕೊನೆಗೂ ಅದು ಈಡೇರಲೇ ಇಲ್ಲ…
ಅಪರ್ಣಾ ಅಕಾಲಿಕ ಮರಣಕ್ಕೆ ಇದೇ ಕಾರಣ: ಬ್ರಹ್ಮಾಂಡ ಗುರೂಜಿ ಶಾಕಿಂಗ್ ಹೇಳಿಕೆ..
ಅಪರ್ಣಾ ಕೂದಲು ಕತ್ತರಿಸಿದ್ದೇಕೆ ಎಂದು ಕೇಳ್ತಿದ್ದವರಿಗೆ ಈಕೆ ಪತಿ ಕೊಡ್ತಿದ್ದ ಉತ್ತರ ನಿಜಕ್ಕೂ ಮನಕಲಕುತ್ತೆ…