

ಬೆಂಗಳೂರು: ಕನ್ನಡ ಎಂದರೆ ಅಪರ್ಣಾ.. ಅಪರ್ಣಾ ಎಂದರೆ ಕನ್ನಡ ಎಂದು ಅಭಿಮಾನಿಗಳು ಹೇಳುತ್ತಾರೆ. ಕನ್ನಡದಲ್ಲಿ ನಿರೂಪಣೆ ಮಾಡುತ್ತಾ ಜನರ ಮನಗೆದಿದ್ದ ಕನ್ನಡತಿ ಅಪರ್ಣಾ ಶ್ವಾಸಕೋಶ ಕ್ಯಾನ್ಸರ್‌ನಿಂದ ನಮ್ಮನೆಲ್ಲ ಅಗಲಿ ಐದು ದಿನಗಳು ಕಳೆದಿದೆ. ಅಪರ್ಣಾ ಅವರ ಕುರಿತಾಗಿ ಖಾಸಗಿವಾಹಿನಿ ಜತೆ ಮಾತನಾಡಿದ ಬ್ರಹ್ಮಾಂಡ ಗುರೂಜಿ ಕೆಲವು ವಿಚಾರಗಳನ್ನು ಹೇಳಿದ್ದಾರೆ.
ಬಿಗ್‌ಬಾಸ್‌ನಲ್ಲಿ ಒಟ್ಟಿ ಎರಡು ವಾರ ಸ್ಪರ್ಧಿಗಳಾಗಿದ್ದರು. ಆ ಬಳಿಕ ಇತ್ತೀಚೆಗೆ ನಡೆದ ಸಿನಿಮಾ 90 ಅನ್ನುವ ಕಾರ್ಯಕ್ರಮದಲ್ಲಿಯೂ ಅಪರ್ಣಾ ಹಾಗೂ ಬ್ರಹ್ಮಾಂಡ ಗುರೂಜಿ ಇಬ್ಬರೂ ಭಾಗವಹಿಸಿದ್ದರು. ಆ ಘಳಿಗೆಯನ್ನು ನೆನಪಿಸಿಕೊಂಡಿದ್ದಾರೆ.
ಬ್ರಹ್ಮಾಂಡ ಗುರೂಜಿ ಮಾತನಾಡಿ, ತುಂಬಾ ದಿನಗಳು ಅಂತ ಕಳೆದಿದ್ದು ಬಿಗ್ ಬಾಸ್‌ನಲ್ಲಿ. ಎರಡು ವಾರಗಳು ಒಟ್ಟಿಗೆ ಇದ್ದಿದ್ದು. ಮೊನ್ನೆ ಸಿನಿಮಾ 90 ಅಂತ ಮಾಡಿದ್ವಿ. ಆ ಕಾರ್ಯಕ್ರಮಕ್ಕೆ ಬಂದಾಗ ಮಾತಾಡಿದ್ವಿ. ಆ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ಅಪರ್ಣಾ ಆರೋಗ್ಯ ಹದಗೆಟ್ಟಿದ್ದಕ್ಕೆ ಶನಿ ಕಾಟವೇ ಕಾರಣ ಅಂತಲೂ ಹೇಳಿದ್ದಾರೆ. "ಆರೋಗ್ಯ ಹದಗೆಟ್ಟಿದರೆ ಶನಿಯಿಂದಲೇ ಕಾರಣ. ವೈಟ್ ಪ್ಯಾಚಸ್ ಬಂದರೂ ಶನಿಯಿಂದಲೇ ಬರುತ್ತೆ. ಶನಿಶ್ವೇರನ ಮುಖಾಂತರವಾಗಿ ಬರುವಂತಹದ್ದು ಕ್ಯಾನ್ಸರ್ ಅಂತ. ಕೆಲವರು ಹೊರ ಬರುತ್ತಾರೆ. ಕೆಲವರು ಹೊರ ಬರುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಗಂಡ ಹೆಂಡತಿಯ ಬಾಂಡಿಂಗ್ ಚೆನ್ನಾಗಿತ್ತು. ಇವಳು ಎಷ್ಟು ಮಾತಾಡುತ್ತಿದ್ದಳೋ, ಗಂಡ ಅಷ್ಟೇ ಕಡಿಮೆ ಮಾತಾಡುತ್ತಿದ್ದರು. ಅಪರ್ಣಾ ಅವರಿಗೆ ಮಕ್ಕಳು ಇಲ್ಲ ಅನ್ನುವ ಬೇಸರದಲ್ಲಿ ಇದ್ದರು. ಹೀಗಾಗಿ ಗಂಡ ಹೆಂಡತಿ ಇಬ್ಬರೂ ಒಬ್ಬರನ್ನೊಬ್ಬರು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಸಂತಾನ ಅಭಿವೃದ್ಧಿ ಇಲ್ಲದೆ ಇರುವುದರಿಂದ ಅದೊಂದು ಬೇಜಾರು ಇತ್ತು. ಮಕ್ಕಳನ್ನು ಅವರು ಗಿಡಗಳಲ್ಲಿ ಕಾಣುತ್ತಿದ್ದರು. ಹೀಗಾಗಿ ಇಬ್ಬರಲ್ಲೂ ಅನ್ಯೋನ್ಯತೆಯಿತ್ತು ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.
ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿದ್ದ ಅಪರ್ಣಾ, ಆಕಾಶವಾಣಿ ಮತ್ತು ಕಿರುತೆರೆಯ ಕಲಾವಿದೆ. ಇವರ ಪೂರ್ತಿ ಹೆಸರು ಅಪರ್ಣಾ ವಸ್ತಾರೆ. ಕಣಗಾಲ್ ಪುಟ್ಟಣ್ಣನವರ ‘ಮಸಣದ ಹೂವು’ ಚಿತ್ರದಿಂದ ಬೆಳಕಿಗೆ ಬಂದವರು. ಕನ್ನಡ ದೂರದರ್ಶನದ ಎಳವೆಯ ದಿವಸಗಳಿಂದ ಈ ತನಕವೂ ಕಾರ್ಯಕ್ರಮಗಳನ್ನು ನಿರೂಪಿಸುತ್ತ ಬೆಳೆದದರು. ಕಿರುತೆರೆಯನ್ನು ಬೆಳೆಸಿದರು.
ಅಪರ್ಣಾ ಅವರು ಈವರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ‘ಟಿವಿ’ಯೇತರ ಶೋಗಳನ್ನು ನಿರ್ವಹಿಸಿದ್ದಾರೆ. 2004ರಿಂದ ಮತ್ತೆ ಅಭಿನಯದತ್ತ ಗಮನ ಹರಿಸಿ, ಜನಪ್ರಿಯ ಧಾರಾವಾಹಿ ‘ಮುಕ್ತ’ ಮೂಲಕ ಶೀಲಾ ಪ್ರಸಾದ್ ಪಾತ್ರವಾಗಿ ಮನೆ ಮಾತಾದರು. ‘ಪ್ರೀತಿಯಿಲ್ಲದ ಮೇಲೆ’ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಗುರುತಿಸಿಕೊಂಡರು. ಝೀ-ವಾಹಿನಿಯ ‘ಜೋಗುಳ’ ಸರಣಿಯಲ್ಲೂ ನಟಿಸಿದರು.