ಅಪರ್ಣಾಗೆ ಇದೊಂದು ಕೊರಗು ಕಾಡ್ತಾನೆ ಇತ್ತು! ಕೊನೆಗೂ ಅದು ಈಡೇರಲೇ ಇಲ್ಲ…

Actress Aparna

ಬೆಂಗಳೂರು: ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡುತ್ತಾ ಜನರ ಮನಗೆದಿದ್ದ ಕನ್ನಡತಿ ಅಪರ್ಣಾ ಶ್ವಾಸಕೋಶ ಕ್ಯಾನ್ಸರ್‌ನಿಂದ ನಮ್ಮನೆಲ್ಲ ಅಗಲಿ ಐದು ದಿನಗಳು ಕಳೆದಿದೆ. ಈಕೆ ಧ್ವನಿ ಇನ್ನು ನಮ್ಮ ಕಿವಿಯಲ್ಲಿ ಗುನುಗುತ್ತಿದೆ. ಕಳೆದ ಎರಡು ವರ್ಷಗಳಿಂದ ಅಪರ್ಣ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ ಅಪರ್ಣಾ ಅವರಿಗೆ ಒಂದು ಕೊರಗು ಮಾತ್ರ ಕೊನೆಯುಸಿರು ಇರುವವರೆಗೂ ಕಾಡುತ್ತಲೆ ಇತ್ತಂತೆ. ಖ್ಯಾತ ಗೂರುಜಿ ಬ್ರಹ್ಮಾಂಡ ಗೂರುಜಿ ಅವರು ಈ ಕುರಿತಾಗಿ ಖಾಸಗಿವಾಹಿನಿ ಜತೆ ಮಾತನಾಡಿದ್ದಾರೆ.

ಬ್ರಹ್ಮಾಂಡ ಗುರೂಜಿ ಹಾಗೂ ಅಪರ್ಣ ಇಬ್ಬರೂ ಬಿಗ್‌ಬಾಸ್ ಸ್ಪರ್ಧಿಗಳಾಗಿದ್ದರು. ಎರಡು ವಾರಗಳ ಕಾಲ ಬಿಗ್‌ಬಾಸ್ ಮನೆಯಲ್ಲಿದ್ದರು. ಹೀಗಾಗಿ ಇಬ್ಬರಲ್ಲಿ ಆತ್ಮೀಯತೆ ಬೆಳೆದಿತ್ತು. ಈಗ ಅವರ ನಿಧನದ ಬಳಿಕ ಮಕ್ಕಳಿಲ್ಲ ಅನ್ನೋ ಕೊರಗು ಅವರಲ್ಲಿ ಇತ್ತು ಎಂದು ಬ್ರಹ್ಮಾಂಡ ಗುರೂಜಿ ಖಾಸಗಿವಾಹಿನಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಬ್ರಹ್ಮಾಂಡ ಗುರೂಜಿ ಮಾತನಾಡಿ, ತುಂಬಾ ದಿನಗಳು ಅಂತ ಕಳೆದಿದ್ದು ಬಿಗ್ ಬಾಸ್‌ನಲ್ಲಿ. ಎರಡು ವಾರಗಳು ಒಟ್ಟಿಗೆ ಇದ್ದಿದ್ದು. ಮೊನ್ನೆ ಸಿನಿಮಾ 90 ಅಂತ ಮಾಡಿದ್ವಿ. ಆ ಕಾರ್ಯಕ್ರಮಕ್ಕೆ ಬಂದಾಗ ಮಾತಾಡಿದ್ವಿ. ಆ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಕೇಳಿಕೊಳ್ಳುತ್ತೇನೆ. ಗಂಡ ಹೆಂಡತಿಯ ಬಾಂಡಿಂಗ್ ಚೆನ್ನಾಗಿತ್ತು. ಇವಳು ಎಷ್ಟು ಮಾತಾಡುತ್ತಿದ್ದಳೋ, ಗಂಡ ಅಷ್ಟೇ ಕಡಿಮೆ ಮಾತಾಡುತ್ತಿದ್ದರು. ಅಪರ್ಣ ಅವರಿಗೆ ಮಕ್ಕಳು ಇಲ್ಲ ಅನ್ನುವ ಬೇಸರದಲ್ಲಿ ಇದ್ದರು. ಹೀಗಾಗಿ ಗಂಡ ಹೆಂಡತಿ ಇಬ್ಬರೂ ಒಬ್ಬರನ್ನೊಬ್ಬರು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು .ಅವರಿಗೆ ಸಂತಾನ ಅಭಿವೃದ್ಧಿ ಇಲ್ಲದೆ ಇರುವುದರಿಂದ ಅದೊಂದು ಬೇಜಾರು ಇತ್ತು. ಮಕ್ಕಳನ್ನು ಅವರು ಗಿಡಗಳಲ್ಲಿ ಕಾಣುತ್ತಿದ್ದರು. ಹೀಗಾಗಿ ಇಬ್ಬರಲ್ಲೂ ಅನ್ಯೋನ್ಯತೆಯಿತ್ತು. ಇವರು ಅವಳನ್ನು ಮಗುತರ ನೋಡಿಕೊಳ್ಳೋರು. ಅವಳು ಇವರನ್ನು ಮಗುತರ ನೋಡಿಕೊಳ್ಳುತ್ತಿದ್ದರು. ಪಾಪ ನಾಗರಾಜು ಏಕಾಂತ ಆಗಿಬಿಟ್ಟ ಅನ್ನೋ ಕೊರಗು ಇದೆ” ಎಂದಿದ್ದಾರೆ.

ಅಂದಹಾಗೆ ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿದ್ದ ಅಪರ್ಣಾ, ಆಕಾಶವಾಣಿ ಮತ್ತು ಕಿರುತೆರೆಯ ಕಲಾವಿದೆ. ಇವರ ಪೂರ್ತಿ ಹೆಸರು ಅಪರ್ಣಾ ವಸ್ತಾರೆ. ಕಣಗಾಲ್ ಪುಟ್ಟಣ್ಣನವರ ‘ಮಸಣದ ಹೂವು’ ಚಿತ್ರದಿಂದ ಬೆಳಕಿಗೆ ಬಂದವರು. ಕನ್ನಡ ದೂರದರ್ಶನದ ಎಳವೆಯ ದಿವಸಗಳಿಂದ ಈ ತನಕವೂ ಕಾರ್ಯಕ್ರಮಗಳನ್ನು ನಿರೂಪಿಸುತ್ತ ಬೆಳೆದದರು. ಕಿರುತೆರೆಯನ್ನು ಬೆಳೆಸಿದರು.

ಅಪರ್ಣಾ ಅವರು ಈವರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ‘ಟಿವಿ’ಯೇತರ ಶೋಗಳನ್ನು ನಿರ್ವಹಿಸಿದ್ದಾರೆ. 2004ರಿಂದ ಮತ್ತೆ ಅಭಿನಯದತ್ತ ಗಮನ ಹರಿಸಿ, ಜನಪ್ರಿಯ ಧಾರಾವಾಹಿ ‘ಮುಕ್ತ’ ಮೂಲಕ ಶೀಲಾ ಪ್ರಸಾದ್ ಪಾತ್ರವಾಗಿ ಮನೆ ಮಾತಾದರು. ‘ಪ್ರೀತಿಯಿಲ್ಲದ ಮೇಲೆ’ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಗುರುತಿಸಿಕೊಂಡರು. ಝೀ-ವಾಹಿನಿಯ ‘ಜೋಗುಳ’ ಸರಣಿಯಲ್ಲೂ ನಟಿಸಿದರು.

ಕನ್ನಡದ ಸ್ವಚ್ಛ ಧ್ವನಿ ಕಣ್ಮರೆ: ಅಪ್ಪಟ್ಟ ಕನ್ನಡತಿ ಅಪರ್ಣಾ ಗಂಡನ ಜತೆ ಜಗಳ ಆಡುವಾಗ ಈ ಭಾಷೆ ಬಳಸುತ್ತಿದ್ದರಂತೆ!

ಥಿಯೇಟರ್​ಗೆ ಜನ ಬರ್ತಿಲ್ಲ; ಈ ಸಿನಿಮಾ ನೋಡಲು ಬಂದ್ರೆ ಚಾಯ್, ಸಮೋಸ ಉಚಿತ

Share This Article

ಸೀಬೆಹಣ್ಣನ್ನು ಯಾರು ತಿನ್ನುವಂತಿಲ್ಲ? ಒಂದು ವೇಳೆ ತಿಂದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ… Guava

ಸೀಬೆಹಣ್ಣು ( Guava ) ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ಹಣ್ಣನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ…

ಸೈಕಾಲಜಿ ಪ್ರಕಾರ ಈ ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಜೀವನದಲ್ಲಿ ಹೆಚ್ಚು ಹಣ ಸಂಪಾದನೆ ಮಾಡ್ತಾರೆ! Money

Money : ಇಂದು ಹಣವಿಲ್ಲದೆ ಯಾವುದಕ್ಕೂ ಬೆಲೆ ಇಲ್ಲ ಮತ್ತು ಯಾವ ಕೆಲಸವು ಕೂಡ ನಡೆಯುವುದಿಲ್ಲ.…

Vastu Tips: ಮನೆಯ ಮುಖ್ಯ ದ್ವಾರದಲ್ಲಿ ಈ ನಾಲ್ಕು ವಸ್ತುಗಳನ್ನು ಇಟ್ಟರೆ ಯಶಸ್ಸು ನಿಮ್ಮದೇ….!

Vastu Tips :  ಮನೆಯ ಮುಖ್ಯ ಬಾಗಿಲನ್ನು ಸಂತೋಷದ ಬಾಗಿಲು ಎಂದು ಪರಿಗಣಿಸಲಾಗುತ್ತದೆ. ಇಲ್ಲಿಂದ ಎಲ್ಲರಿಗೂ…