ಕನ್ನಡದ ಸ್ವಚ್ಛ ಧ್ವನಿ ಕಣ್ಮರೆ: ಅಪ್ಪಟ್ಟ ಕನ್ನಡತಿ ಅಪರ್ಣಾ ಗಂಡನ ಜತೆ ಜಗಳ ಆಡುವಾಗ ಈ ಭಾಷೆ ಬಳಸುತ್ತಿದ್ದರಂತೆ!

Aparna vastarey

ಬೆಂಗಳೂರು: ಬಾರದ ಲೋಕಕ್ಕೆ ಪಯಣಿಸಿದ ನಟಿ, ನಿರೂಪಕಿ ಅಪರ್ಣಾ ವಸ್ತಾರೆ ಕನ್ನಡಿಗರಿಗೆ ಇನ್ನು ನೆನಪು ಮಾತ್ರ. ತಮ್ಮ ಸ್ವಚ್ಛ ಕನ್ನಡದಿಂದಲೇ ಪ್ರತಿಯೊಬ್ಬ ಕನ್ನಡಿಗನ ಮನದಲ್ಲಿ ಮನೆ ಮಾಡಿರುವ ಅಪರ್ಣಾ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅಪರ್ಣಾ ಜುಲೈ 10 ರಂದು ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಅಕ್ಷರಗಳಿಗೆ ಭಾವ ತುಂಬುತ್ತಿದ್ದ ಅಪರ್ಣಾ ಇನ್ನಿಲ್ಲ ಎಂಬ ಸುದ್ದಿ ಕೇಳಿ ಇಡೀ ಚಿತ್ರರಂಗ ಹಾಗೂ ಅಭಿಮಾನಿಗಳ ಬಳಗ ಆಘಾತಕ್ಕೆ ಒಳಗಾಗಿದೆ.

ಅಪರ್ಣಾ ಅಂದರೆ ಕನ್ನಡ, ಕನ್ನಡ ಅಂದರೆ ಅಪರ್ಣಾ ಅನ್ನುವ ಮಟ್ಟಿಗೆ ಅವರಿಗೆ ಕನ್ನಡದ ಮೇಲೆ ತುಂಬಾ ಅಭಿಮಾನ ಇತ್ತು. ಎಂದಿಗೂ ವಿವಾದಗಳನ್ನು ಮಾಡಿಕೊಳ್ಳದೇ ಬಹಳ ಅರ್ಥಪೂರ್ಣ ಬದುಕು ಸಾಗಿಸಿದ ಅಪರ್ಣಾ, ನಮ್ಮ ನಡುವೆ ಸಾಕಷ್ಟು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅಪರ್ಣಾ, ನಿಧನದ ಬೆನ್ನಲ್ಲೇ ಅವರಿಗೆ ಸಂಬಂಧಿಸಿದ ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇದೀಗ ಮತ್ತೊಂದು ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಕಳೆದ ಮಾರ್ಚ್​ ತಿಂಗಳಲ್ಲಿ ಸುವರ್ಣ ಸೂಪರ್ ಸ್ಟಾರ್ ಮಹಿಳಾ ದಿನಾಚರಣೆಯ ನಾರಿನಮನ ವಿಶೇಷ ಸಂಚಿಕೆಯಲ್ಲಿ, ಅಪರ್ಣಾ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ಅವರು ಆಡಿದ ಮಾತುಗಳು ಎಲ್ಲರ ಗಮನ ಸೆಳೆಯುತ್ತಿವೆ. ನಿರೂಪಕಿ ಅನುಪಮಾ ಗೌಡ ಜತೆ ಕಾರ್ಯಕ್ರಮದ ವೇದಿಕೆಯಲ್ಲಿ ತಮಾಷೆಯಾಗಿ ಜಗಳವಾಡುವಾಗ ನೋ..ನೋ ಎಂಬ ಇಂಗ್ಲಿಷ್​ ಪದ ಬಳಸುವ ಅಪರ್ಣಾ, ನಮ್ಮ ಮನೆಯಲ್ಲಿ ಒಂದೇ ಒಂದು ವಿಷಯ ಏನೆಂದರೆ, ಜಗಳದಲ್ಲಿ ಇಂಗ್ಲಿಷ್​ ಬಂದು ಬಿಡುತ್ತದೆ ಎಂದು ಹೇಳಿದರು.

ಅಪ್ಪಟ್ಟ ಕನ್ನಡತಿ ಅಪರ್ಣಾ ಗಂಡನ ಜತೆ ಜಗಳ ಆಡುವಾಗ ಇಂಗ್ಲಿಷ್​ ಬಂದು ಬಿಡುತ್ತದೆ ಎಂದು ಸ್ವಾರಸ್ಯಕರ ಸಂಗತಿಯನ್ನು ಬಹಿರಂಗಪಡಿಸಿದ್ದರು. ಕನ್ನಡದ ಮೇಲಿನ ನನ್ನ ಅಭಿಮಾನ ನಾನು ಹುಟ್ಟಿದಾಗಿನಿಂದಲೇ ಶುರುವಾಗಿದೆ. ಕನ್ನಡ ನಮ್ಮ ಮಡಿಲಲ್ಲವೇ, ಅದೇ ನಮ್ಮನ್ನು ಬೆಳೆಸುತ್ತದೆ. ಕನ್ನಡ ಎಂಬುದು ನಮ್ಮ ಎಲ್ಲರ ಮನೆಯಲ್ಲಿ ಇರುವ ವಾತಾವರಣ ಆಗಿದೆ. ನಾವು ಕನ್ನಡವನ್ನೇ ಮಾತನಾಡಿ ಬೆಳೆದವರು. ಇದರ ನಡುವೆ ಇಂಗ್ಲಿಷ್​ಗೆ ಸ್ವಲ್ಪ ಜಾಗ ಮಾಡಿಕೊಟ್ಟೆವು. ಆದರೆ, ಇಂದು ಇಂಗ್ಲಿಷ್​, ಕನ್ನಡವನ್ನೇ ಬದಿಗೆ ತಳ್ಳಿದರು. ನಾನು ಯಾವುದೇ ಭಾಷೆಯ ವಿರುದ್ಧ ಅಲ್ಲ, ಆದರೆ ನಮ್ಮ ಭಾಷೆಯ ಬಗ್ಗೆ ಇರುವ ಕೀಳರಿಮೆ ವಿರುದ್ಧ. ಮೊದಲು ನಮ್ಮತನವನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಅಪರ್ಣಾ ಅವರು ಆಡಿದ ಮಾತುಗಳು ಇಂದಿಗೂ ವೈರಲ್​ ಆಗುತ್ತಿವೆ.

ಇನ್ನು ಅಪರ್ಣಾ ಅವರು ಕಳೆದ ಎರಡು ತಿಂಗಳಿಂದ ಶ್ವಾಸಕೋಶದ ಕ್ಯಾನ್ಸರ್​ ಖಾಯಿಲೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು ಎಂದು ಪತಿ ನಾಗರಾಜ್ ವಸ್ತಾರೆ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಎರಡು ವರ್ಷದ ಹಿಂದೆ ಇದೇ ಜುಲೈನಲ್ಲಿ ಆಕೆಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ತಪಾಸಣೆಯಲ್ಲಿ ಪತ್ತೆಯಾಯ್ತು. ಅಪರ್ಣಾ ಇನ್ನು ಆರು ತಿಂಗಳು ಉಳಿದಿದ್ರೆ ಹೆಚ್ಚು ಅಂತ ವೈದ್ಯರು ಹೇಳಿದ್ದರು. ಆದರೆ, ಆಕೆ ಛಲಗಾತಿ ಒಂದೂವರೆ ವರ್ಷ ಹೋರಾಟ ನಡೆಸಿದಳು ಎಂದು ಹೇಳುತ್ತಾ ನಾಗರಾಜ್​ ಭಾವುಕರಾದರು.

ಕ್ಯಾನ್ಸರ್​ ರೋಗವಿರುವುದು ಗೊತ್ತಾದ ಬಳಿಕವು ಆಕೆಯ ಬದುಕುವ ಛಲ ಕುಗ್ಗಲಿಲ್ಲ. ಏನಾದರೂ ಮಾಡಿ ಗೆಲ್ತೀನಿ ಎಂಬುದೇ ಮನದಲ್ಲಿ ದೃಢವಾಗಿತ್ತು. ಅದಾದ ನಂತರವು ಒಂದೂವರೆ ವರ್ಷ ಅಂದರೆ ಜನವರಿಯ ತನಕ ಹೋರಾಡಿದಳು. ಆದರೆ, ಫೆಬ್ರವರಿಯಲ್ಲಿ ಸೋಲಲು ಪ್ರಾರಂಭಿಸಿದಳು. ಇದು ದೇಹವೇ ದೇಹವನ್ನು ಬಾಧಿಸುವ ಒಂದು ವ್ಯಾದಿ. ಇಷ್ಟು ವರ್ಷ ಕ್ಯಾನ್ಸರ್​ ವಿರುದ್ಧ ನಿರಂತರ ಹೋರಾಟ ನಡೆಸಿದಳು. ಆದ್ರೆ, ಇಂದು ನಾವಿಬ್ಬರೂ ಜಂಟಿಯಾಗಿ ಇದರಲ್ಲಿ ಸೋತಿದ್ದೇವೆ. ಇದೇ ಅಕ್ಟೋಬರ್‌ಗೆ ಆಕೆಗೆ 58 ವರ್ಷ ತುಂಬುತ್ತಿತ್ತು ಎಂದು ಪತಿ ನಾಗರಾಜ್ ವಸ್ತಾರೆ ಭಾವುಕರಾಗಿ ಮಾತನಾಡಿದ್ದಾರೆ.

ಅಂದಹಾಗೆ ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿದ್ದ ಅಪರ್ಣಾ, ಆಕಾಶವಾಣಿ ಮತ್ತು ಕಿರುತೆರೆಯ ಕಲಾವಿದೆ. ಇವರ ಪೂರ್ತಿ ಹೆಸರು ಅಪರ್ಣಾ ವಸ್ತಾರೆ. ಕಣಗಾಲ್ ಪುಟ್ಟಣ್ಣನವರ ‘ಮಸಣದ ಹೂವು’ ಚಿತ್ರದಿಂದ ಬೆಳಕಿಗೆ ಬಂದವರು. ಕನ್ನಡ ದೂರದರ್ಶನದ ಎಳವೆಯ ದಿವಸಗಳಿಂದ ಈ ತನಕವೂ ಕಾರ್ಯಕ್ರಮಗಳನ್ನು ನಿರೂಪಿಸುತ್ತ ಬೆಳೆದದರು. ಕಿರುತೆರೆಯನ್ನು ಬೆಳೆಸಿದರು.

ಅಪರ್ಣಾ ಅವರು ಈವರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ‘ಟಿವಿ’ಯೇತರ ಶೋಗಳನ್ನು ನಿರ್ವಹಿಸಿದ್ದಾರೆ. 2004ರಿಂದ ಮತ್ತೆ ಅಭಿನಯದತ್ತ ಗಮನ ಹರಿಸಿ, ಜನಪ್ರಿಯ ಧಾರಾವಾಹಿ ‘ಮುಕ್ತ’ ಮೂಲಕ ಶೀಲಾ ಪ್ರಸಾದ್ ಪಾತ್ರವಾಗಿ ಮನೆ ಮಾತಾದರು. ‘ಪ್ರೀತಿಯಿಲ್ಲದ ಮೇಲೆ’ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಗುರುತಿಸಿಕೊಂಡರು. ಝೀ-ವಾಹಿನಿಯ ‘ಜೋಗುಳ’ ಸರಣಿಯಲ್ಲೂ ನಟಿಸಿದರು.

ಅಪರ್ಣ ಅವರು ಕನ್ನಡಪ್ರಭ ಸಾಪ್ತಾಹಿಕದ ‘ಸಖೀಗೀತ’ದ ಅಂಕಣಕಾರ್ತಿ. ‘ಪ್ರೀತಿಯಿಲ್ಲದ ಮೇಲೆ’ಯ ಪಲ್ಲವಿಯ ಪಾತ್ರಕ್ಕೆ ಶ್ರೇಷ್ಠನಟಿ ಪ್ರಶಸ್ತಿ, ನಿರೂಪಣೆಗಾಗಿ ಝೀ-ವಾಹಿನಿಯಿಂದ ಅತ್ಯುತ್ತಮ ಪ್ರಶಸ್ತಿ, ಕಿರುತೆರೆಯ ಮಾಧ್ಯಮದ ಈವರೆಗಿನ ಕೆಲಸಕ್ಕೆ ಸರ್ವೋಚ್ಛ ಪ್ರಶಸ್ತಿಯನ್ನು ಪಡೆದಿದ್ದಾರೆ.

ಅಪರ್ಣಾ ಅವರು 2005ರಲ್ಲಿ ಯುವ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಅಪರ್ಣ ಅವರ ತಂದೆ ಕೆ.ಎಸ್‌.ನಾರಾಯಣಸ್ವಾಮಿ ಕನ್ನಡಪ್ರಭ ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿದ್ದರು.

ಶ್ವಾಸಕೋಶ ಕ್ಯಾನ್ಸರ್​ಗೆ ನಟಿ ಅಪರ್ಣಾ ಬಲಿ: ಈ ಕಾಯಿಲೆ ಬರಲು ಕಾರಣವೇನು? ಲಕ್ಷಣಗಳು ಯಾವುವು?

ಅವರಿಂದ ಮನನೊಂದು ಅರ್ಧಕ್ಕೆ ‘ಮಜಾ ಟಾಕೀಸ್’​ ಕೈಬಿಡಲು ನಿರ್ಧರಿಸಿದ್ದರು ನಟಿ ಅಪರ್ಣಾ!

ಮಳೆಗಾಲದಲ್ಲಿ ಬೀದಿ ಬದಿ ಆಹಾರಗಳನ್ನು ತಿಂತಿರಾ? ಎಷ್ಟು ಡೇಂಜರ್​ ಗೊತ್ತಾ? ಈ ವಿಚಾರ ನಿಮ್ಗೆ ತಿಳಿದಿರಲೇಬೇಕು

Share This Article

ಉಡುಗೆಗೆ ಮ್ಯಾಚ್​ ಆಗುವ ಲಿಪ್​ಸ್ಟಿಕ್​​​ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್​​ | Beauty Tips

ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…

ಚಳಿಗಾಲದಲ್ಲಿ ವಿಟಮಿನ್​​ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips

ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆದರೆ ಈ ಪೋಷಕಾಂಶವು ಅನೇಕ…

Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!

Mushrooms for Cancer : ಕ್ಯಾನ್ಸರ್ ರೋಗ ಅಪಾಯಕಾರಿ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಕ್ಯಾನ್ಸರ್​​ನಲ್ಲಿ…