ಬೆಂಗಳೂರು: ಕನ್ನಡದಲ್ಲಿ ನಿರೂಪಣೆ ಮಾಡುತ್ತಾ ಜನರ ಮನಗೆದಿದ್ದ ಕನ್ನಡತಿ ಅಪರ್ಣಾ ಶ್ವಾಸಕೋಶ ಕ್ಯಾನ್ಸರ್‌ನಿಂದ ನಮ್ಮನೆಲ್ಲ ಅಗಲಿ ಐದು ದಿನಗಳು ಕಳೆದಿದೆ. ಆದರೆ ಅಪರ್ಣಾ ಎನ್ನುವ ಹೆಸರು, ಧ್ವನಿ ಮಾತ್ರ ಕನ್ನಡಿಗರ ಮನದಲ್ಲಿ ಇಂದಿಗೂ.. ಎಂದೆಂದಿಗೂ ಅಚ್ಚಳಿಯದೇ ಉಳಿಯುವಂತದ್ದಾಗಿದೆ.
ಅಪರ್ಣಾ ಅವರಿಗೆ ಕ್ಯಾನ್ಸರ್ ಇರುವುದು ಕುಟುಂಬಸ್ಥರು ಹಾಗೂ ಕೆಲವು ಆಪ್ತರಿಗೆ ಮಾತ್ರ ತಿಳಿದ್ದಂತೆ. ಆಪ್ತ ಸ್ನೇಹಿತೆಯರಿಗೂ ಈ ವಿಚಾರ ಗೊತ್ತಿರಲಿಲ್ವಂತೆ ಈ ಕುರಿತಾಗಿ ಅಪರ್ಣಾ ಸ್ನೇಹಿತೆ ಖಾಸಗಿವಾಹಿನಿ ಜತೆ ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.
ಅಪರ್ಣಾ ಸ್ನೇಹಿತೆ ವತ್ಸಲಾ ಮಾತನಾಡಿ, ತುಂಬಾ ಆಪ್ತ ಸ್ನೇಹಿತೆಯರು ನಾವಿಬ್ಬರು. ಕಳೆದ 20 ವರ್ಷಗಳಿಂದ ನನಗೆ ಅವಳಿಗೆ ಪರಿಚಯ ಇತ್ತು. ನಾನು ಅಪರ್ಣಾ ಜತೆಗೆ ಹಲವಾರು ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದೇವೆ. ನನ್ನ ಆತ್ಮೀಯ ಸ್ನೇಹಿತೆ ಆಗಿದ್ದರು. ಆದರೆ ಒಂದು ದಿನ ಕೂಡ ಅವಳ ಕಷ್ಟವನ್ನು ಹೇಳಿಕೊಳ್ಳುತ್ತಿರಲಿಲ್ಲ. ಅವಳು ತುಂಬಾ ಕಷ್ಟ ಪಟ್ಟಿದ್ದಾಳೆ. ಆದರೆ ಯಾರ ಬಳಿ ಕೂಡಾ ಆಕೆ ಹಂಚಿಕೊಳ್ಳುತ್ತಿರಲಿಲ್ಲ ನನ್ನ ಸ್ನೇಹಿತೆ ಎಂದು ಹೇಳುತ್ತಾ ಕಣ್ಣೀರು ತುಂಬಿಕೊಂಡಿದ್ದಾರೆ.
ಮೂರು ತಿಂಗಳ ಹಿಂದೆ ಹೀಗೆ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಾನು ಅಪರ್ಣಾ ಅವರ ಪತಿಯನ್ನು ಭೇಟಿ ಮಾಡಿದ್ದೇನು. ಈ ವೇಳೆ ಅಪರ್ಣಾ ಯಾಕೆ ಕೂದಲು ಕಟ್ ಮಾಡಿಕೊಂಡಿದ್ದಾಳೆ ಎಂದು ನಾನು ಕೇಳಿದ್ದೇನು. ಆಗ ವಸ್ತಾರೆ ಅವರು ಅವಳ ತಲೆಯಲ್ಲಿ ಡ್ಯಾಂಡ್ರಫ್ ಆಗಿ ಅಲರ್ಜಿ ಆಗುತ್ತಿದೆ. ಹೀಗಾಗಿ ಕೂದಲು ಕಟ್ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದರು. ಆಗ ಕೂಡ ನನಗೆ ಅರ್ಥವಾಗಿಲ್ಲ ಎಂದು ಹೇಳುತ್ತಾ ಗಳಗಳನೆ ಅತ್ತಿದ್ದಾರೆ.
ನನ್ನ ಜತೆಗಾರ್ತಿನಾ ಕಳೆದುಕೊಂಡೆ ಎಂದು ನೋವಿದೆ. ಕನ್ನಡಕ್ಕೆ ತುಂಬಲಾರದ ನಷ್ಟವಾಗಿದೆ. ಅವಳು ಬರೆದ ಅಕ್ಷರಗಳು ನನ್ನ ಜತೆಗೆ ಇದೆ. ಹೇಳಿಕೊಳ್ಳಲು ತುಂಬಾ ಕಷ್ಟವಾಗಿದೆ ಎಂದು ಹೇಳುತ್ತಾ ದುಖಃ ವ್ಯಕ್ತಪಡಿಸಿದ್ದಾರೆ.
ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿದ್ದ ಅಪರ್ಣಾ, ಆಕಾಶವಾಣಿ ಮತ್ತು ಕಿರುತೆರೆಯ ಕಲಾವಿದೆ. ಇವರ ಪೂರ್ತಿ ಹೆಸರು ಅಪರ್ಣಾ ವಸ್ತಾರೆ. ಕಣಗಾಲ್ ಪುಟ್ಟಣ್ಣನವರ ‘ಮಸಣದ ಹೂವು’ ಚಿತ್ರದಿಂದ ಬೆಳಕಿಗೆ ಬಂದವರು. ಕನ್ನಡ ದೂರದರ್ಶನದ ಎಳವೆಯ ದಿವಸಗಳಿಂದ ಈ ತನಕವೂ ಕಾರ್ಯಕ್ರಮಗಳನ್ನು ನಿರೂಪಿಸುತ್ತ ಬೆಳೆದದರು. ಕಿರುತೆರೆಯನ್ನು ಬೆಳೆಸಿದರು.
ಅಪರ್ಣಾ ಅವರು ಈವರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ‘ಟಿವಿ’ಯೇತರ ಶೋಗಳನ್ನು ನಿರ್ವಹಿಸಿದ್ದಾರೆ. 2004ರಿಂದ ಮತ್ತೆ ಅಭಿನಯದತ್ತ ಗಮನ ಹರಿಸಿ, ಜನಪ್ರಿಯ ಧಾರಾವಾಹಿ ‘ಮುಕ್ತ’ ಮೂಲಕ ಶೀಲಾ ಪ್ರಸಾದ್ ಪಾತ್ರವಾಗಿ ಮನೆ ಮಾತಾದರು. ‘ಪ್ರೀತಿಯಿಲ್ಲದ ಮೇಲೆ’ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಗುರುತಿಸಿಕೊಂಡರು. ಝೀ-ವಾಹಿನಿಯ ‘ಜೋಗುಳ’ ಸರಣಿಯಲ್ಲೂ ನಟಿಸಿದರು.
ಅಪರ್ಣಾ ಅಕಾಲಿಕ ಮರಣಕ್ಕೆ ಇದೇ ಕಾರಣ: ಬ್ರಹ್ಮಾಂಡ ಗುರೂಜಿ ಶಾಕಿಂಗ್ ಹೇಳಿಕೆ..