ಇದಲ್ಲದೇ, ನಟ ಚಿರಂಜೀವಿ ಬೇರೆ ಹೆಸರಿಡದ ಎರಡು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ ಎಂಬ ಮಾಹಿತಿ ಇದೆ. ಈ ಎರಡು ಸಿನಿಮಾಗಳಲ್ಲಿ ಒಂದಕ್ಕೆ ಬಾಬಿ ಅವರು ನಿರ್ದೇಶಕರು ಆದರೆ, ಮತ್ತೊಂದಕ್ಕೆ ವೆಂಕಿ ಕುಡುಮುಲ ನಿರ್ದೇಶಕರು ಎನ್ನಲಾಗಿದೆ. ಚಿರಂಜೀವಿ ಅವರ ಜತೆ ಬಾಬಿ ನಿರ್ದೇಶ ಮಾಡುತ್ತಿರುವ ಸಿನಿಮಾಗೆ ನಟಿ ಶ್ರುತಿ ಹಾಸನ್ ನಾಯಕಿಯಂತೆ. ಹಾಗಾಗಿ, ಉಳಿದ ಚಿರಂಜೀವಿ ಮತ್ತು ವೆಂಕಿ ಕುಡುಮುಲ ನಿರ್ದೇಶನದ ಚಿತ್ರದಲ್ಲಿ ನಟಿ ಅನುಷ್ಕಾ ನಾಯಕಿಯಾಗಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ, ನಟಿ ಅನುಷ್ಕಾ ಅವರು ನಾಲ್ಕು ಬೇರೆ ಸಿನಿಮಾಗಳ ಕೆಲಸದಲ್ಲಿ ಸದ್ಯ ಬ್ಯೂಸಿಯಾಗಿದ್ದಾರೆ. ಇದರಿಂದ, ಅನುಷ್ಕಾ ಭರ್ಜರಿ ಕಮ್ಬ್ಯಾಕ್ಗೆ ಸಜ್ಜಾಗಿದ್ದಾರೆ ಎಂದು ತಿಳಿಯುತ್ತಿದೆ. ನಟಿ ಅನುಷ್ಕಾ ಅಭಿಮಾನಿಗಳು ಕೂಡ ತಮ್ಮ ದೇವಸೇನಾಳನ್ನು ಮತ್ತೆ ಆಧರಿಸಲು ಸಿದ್ಧರಾಗಿದ್ದಾರೆ ಎಂದೇ ಹೇಳಬೇಕು.