ಇನ್ನು, ಈ ಗಾಳಿ ಸುದ್ದಿಗಳಿಗೆ ಪುರಾವೆ ಎಂಬಂತೆ ನಾಗಚೈತನ್ಯ, ದಕ್ಷ ಅವರ ಒಂದು ವಿಡಿಯೋ ನೆಟ್ಟಿಗರಿಗೆ ಸಿಕ್ಕಿದೆ. ಅಂದಹಾಗೆ, ಈ ವಿಡಿಯೋ 'ಬಂಗಾರ್ರಾಜು' ಸಿನಿಮಾ ಪ್ರಚಾರದ ವೇದಿಕೆ ಮೇಲೆ ಸೆರೆಹಿಡಿದಿರುವುದು. ನಾಗಚೈತನ್ಯ ಮತ್ತು ದಕ್ಷ ವೇದಿಕೆಯ ಮೇಲೆ ಪ್ರಚಾರಕ್ಕೆಂದು ಹತ್ತಿದರೂ, ಅವರಿಬ್ಬರ ಹಾವ-ಭಾವವೇ ಸಿನಿಮಾಗಿಂತ ಹೆಚ್ಚು ನೆಟ್ಟಿಗರ ಗಮನ ಸೆಳೆಯುತ್ತಿದೆ. ವೇದಿಕೆಯ ಮೇಲೆ ಇದ್ದಷ್ಟು ಸಮಯ ಪೂರ್ತಿ ನಾಗಚೈತನ್ಯ, ದಕ್ಷ ಅವರು ಒಬ್ಬರನ್ನು ಮತ್ತೊಬ್ಬರು ಗಮನಿಸುತ್ತಲೇ, ನೋಡುತ್ತಲೇ ಇದ್ದರು. ಜೊತೆಗೆ, ಒಂದು ಸಮಯದಲ್ಲಿ ನಟಿ ದಕ್ಷ, ನಾಗಚೈತನ್ಯ ಅವರನ್ನು ಕಂಡು ಸ್ಮೈಲ್ ಮಾಡುತ್ತಾರೆ. ನಟಿಯ ಆ ಸುಂದರ ನಗುವನ್ನು ಕಂಡ ನಾಗಚೈತನ್ಯ ನಾಚಿ ನೀರಾಗುತ್ತಾರೆ. ಅಷ್ಟೇ, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ನಿದ್ದೆ ಗೆಡಿಸಿದೆ ಎನ್ನಬಹುದು.