More

    ಹಾಲಿವುಡ್, ಬಾಲಿವುಡ್​ ಅನ್ನು ಹಿಂದಿಕ್ಕಿದ ‘ಪುಷ್ಪ’ ಸಿನಿಮಾ, 25ನೇ ದಿನಕ್ಕೆ ಒಟ್ಟು ಏಷ್ಟು ಕೋಟಿ ಗಳಿಸಿದೆ?

    ಸದ್ಯ, ಇಡೀ ದೇಶದಲ್ಲಿ ನಟ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಪುಷ್ಪಾ: ದಿ ರೈಸ್ಸಿನಿಮಾದೆ ಸದ್ದು ಮತ್ತು ಸುದ್ದಿ. ಹಿಂದಿಯ ’83’, ಹಾಲಿವುಡ್​ನ ಸ್ಪೈಡರ್ ಮ್ಯಾನ್: ನೋ ವೇ ಹೋಮ್ಚಿತ್ರಗಳ ಪೈಪೋಟಿಯ ಹೊರತಾಗಿಯೂ ಬಾಕ್ಸ್ ಆಫೀಸ್‌ನಲ್ಲಿ ಪುಷ್ಪಾ: ದಿ ರೈಸ್ಸೂಪರ್ ಹಿಟ್ ಎನಿಸಿಕೊಂಡು, ಜೊತೆಗೆ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ. ಹಲವು ವರದಿಗಳ ಪ್ರಕಾರ, ಸಿನಿಮಾ 350ಕ್ಕೂ ಹೆಚ್ಚು ಕೋಟಿ ರೂಪಾಯಿ ಗಳಿಸಿದ್ದು, 400 ಕೋಟಿಯ ಗಳಿಕೆಯತ್ತ ಹೆಜ್ಜೆ ಹಾಕುತ್ತಿದೆ. ಹಿಂದಿಯ ’83’ ಚಿತ್ರ ಗಳಿಸಿದ್ದು 175 ಕೋಟಿಯಾದರೇ, ಮತ್ತೊಂದೆಡೆ ಹಾಲಿವುಡ್​ನ ಸ್ಪೈಡರ್ ಮ್ಯಾನ್: ನೋ ವೇ ಹೋಮ್ಸಿನಿಮಾ ಕೇವಲ 150 ಕೋಟಿ ಗಳಿಸಿದೆ.
    ಈಗ, ‘ಪುಷ್ಪ: ದಿ ರೈಸ್ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಎಂಬ ನಾಲ್ಕು ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ. ಜತೆಗೆ, OTTಯಲ್ಲಿ ಪುಷ್ಪದ ಹಿಂದಿ ಆವೃತ್ತಿ ಜನವರಿ 14 ರಂದು ರಿಲೀಸ್ ಆಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಸುಕುಮಾರ್ ನಿರ್ದೇಶನದ ಪುಷ್ಪ: ದಿ ರೈಸ್ಡಿಸೆಂಬರ್ 17 ರಂದು ಥಿಯೇಟರ್‌ಗೆ ಅಪ್ಪಳಿಸಿತು. ಅಂದಿನಿಂದ, ಚಿತ್ರವು ವಿಶ್ವದಾದ್ಯಂತ ಯಶಸ್ವಿಯಾಗಿ ಓಡುತ್ತಿದೆ.

    ಹಾಲಿವುಡ್, ಬಾಲಿವುಡ್​ ಅನ್ನು ಹಿಂದಿಕ್ಕಿದ 'ಪುಷ್ಪ' ಸಿನಿಮಾ, 25ನೇ ದಿನಕ್ಕೆ ಒಟ್ಟು ಏಷ್ಟು ಕೋಟಿ ಗಳಿಸಿದೆ? ಹಾಲಿವುಡ್, ಬಾಲಿವುಡ್​ ಅನ್ನು ಹಿಂದಿಕ್ಕಿದ 'ಪುಷ್ಪ' ಸಿನಿಮಾ, 25ನೇ ದಿನಕ್ಕೆ ಒಟ್ಟು ಏಷ್ಟು ಕೋಟಿ ಗಳಿಸಿದೆ?

    ರಣವೀರ್ ಸಿಂಗ್ ಅವರ ’83’ ರ ಸ್ಪರ್ಧೆಯ ಹೊರತಾಗಿಯೂ ಪುಷ್ಪಹಿಂದಿ ಬೆಲ್ಟ್‌ನಲ್ಲಿ ವಿಶೇಷವಾಗಿ, ಉತ್ತಮವಾಗಿ ಸ್ವೀಕರಿಸಲ್ಪಟ್ಟಿದೆ. ಬರೀ ಹಿಂದಿ ಭಾಷೆಯ ಪುಷ್ಪ‘ 100 ಕೋಟಿಗೂ ಅಧಿಕ ಗಳಿಸಿದೆ ಎನ್ನಲಾಗಿದೆ. ಈ ಮೂಲಕ ಬಾಲಿವುಡ್ ಸ್ಟಾರ್ ನಟರಿಗೂ ಅಲ್ಲು ಅರ್ಜುನ್ ಸಿನಿಮಾ ನಡುಕ ಹುಟ್ಟಿಸಿದೆ. ಬಾಲಿವುಡ್​ನ ಖಾನ್ ಗಳಿಗಿಂತ ಅಲ್ಲು ಅರ್ಜುನ್ ಗ್ರೇಟ್ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಸಿನಿಮಾದಲ್ಲಿ ನಿಜಕ್ಕೂ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂಬ ಖ್ಯಾತಿ ಪಡೆದಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ಮತ್ತು ಮುತ್ತಂಶೆಟ್ಟಿ ಮೀಡಿಯಾ ಜಂಟಿಯಾಗಿ ನಿರ್ಮಿಸಿದೆ.

    ರಶ್ಮಿಕಾಗೆ ವಿಜಯ್ ಮೇಲೆ ಏಷ್ಟು ಪ್ರೀತಿ ಗೊತ್ತಾ? ಗೋವಾ ವಿಡಿಯೋಸ್ ವೈರಲ್…

    ಬಿಕಿನಿ ಫೋಟೋಗೆ ರೇಷ್ಮೆ ಸೀರೆ, ಬುರ್ಕಾ! ಹಿಗ್ಗಾ-ಮುಗ್ಗಾ ಟ್ರೋಲ್ ಆದ ನಟಿ ದಿಶಾ ಪಟಾನಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts